ಚೆಟ್ಟಳ್ಳಿ ;ಫೆ 5. ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ತಾ. 26 ರಂದು ನಡೆಯಲಿರುವ ಕೊಡವ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಹಾಗೂ ಹಳೆಯ ಕನ್ನಡ ಚಲನ ಚಿತ್ರ ಗೀತೆಗಳ" ಮದುರ ಮಧುರವೀ ಮಂಜುಳಾ ಗಾನದ "ಮೊದಲನೇ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಸುಂಟಿಕೊಪ್ಪ ಸ್ವಸ್ಥ ಶಾಲೆಯ ಮಕ್ಕಳು ಕೊಡವ ಉಡುಪಿನೊಂದಿಗೆ ಭಾರತೀಯ ಸೇನೆಯ ಕಥಾಹಂದರವಿರುವ ಮುತ್ತಿನ ಹಾರ ಚಲನಚಿತ್ರ ಗೀತೆಯೊಂದಿಗೆ ಹೆಜ್ಜೆ ಹಾಕಿ ಮನರಂಜಿಸಿ ನೆರೆದಿದ್ದವರ ಕಣ್ಣಂಚಿನಲ್ಲಿ ನೀರು ತರಿಸಿ ಮನ ರಂಜಿಸಿದರು.ನಗರದ ಭಾರತೀಯ ವಿದ್ಯಾ ಭವನದಲ್ಲಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ದೂರದರ್ಶನ ಬೆಂಗಳೂರು, ಜಂಟಿ ಆಶ್ರಯದಲ್ಲಿ ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಯಿತು.

ಕಾರ್ಯಕ್ರಮದಲ್ಲಿ ಮೈಸೂರು, ಬೆಂಗಳೂರು, ಹಾಸನ, ಸಕಲೇಶಪುರ, ಮಂಗಳೂರು, ಸುಳ್ಯ, ವಿಜಾಪುರ, ಕೊಡಗು ಇತರ ಕಡೆಗಳಲ್ಲಿನ ಹಲವಾರು ಮಕ್ಕಳು, ಯುವಕರು, ವಯೋವೃದ್ದರು ಸೇರಿದಂತೆ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ನಿಜಕ್ಕೂ ಗಮನಾರ್ಹವಾಗಿತ್ತು.

ಮಧುರ ಮಧುರವೀ ಮಂಜುಳಾ ಗಾನ ಸ್ಪರ್ಧೆಯಲ್ಲಿ ಹಾಡಿನ ಜೊತೆಯಲ್ಲಿ ನೃತ್ಯದ ಸ್ಪರ್ಧೆಯನ್ನು ಮಾಡಲಾಗಿತ್ತು. ನೃತ್ಯ ಸ್ಪರ್ಧೆಯಲ್ಲಿ ನವಂಶಿ ಕಲಾ ಶಾಲೆ ಸೋಮವಾರಪೇಟೆ, ಕಾವೇರಿ ಕಲಾ ಪರಿಷತ್ ಕುಶಾಲನಗರ ,ಕೆ.ಈ.ಎಸ್. ವಿದ್ಯಾ ಸಂಸ್ಥೆ ಕೂಡುಮಂಗಳೂರು, ಅಭಿನಯ ಕಲಾಮಿಲನ ಟ್ರಸ್ಟ್ ಭಾಗಮಂಡಲ, ಮಂಜು ಭಾರ್ಗವಿ ತಂಡ ಕುಶಾಲನಗರ , ಸೈನಿಕ ಸ್ಕೂಲ್ ತಂಡ ಕೂಡಿಗೆ, ನಾಟ್ಯನಿಕೇತನ ಮಡಿಕೇರಿ ಹಾಗೂ ಸ್ವಸ್ಥ ವಿಶೇಷ ಚೇತನರ ಶಾಲೆ ಸುಂಟಿಕೊಪ್ಪ ಭಾಗವಹಿಸಿದರು.

ಈ ಸಂದರ್ಭ ಮಾತನಾಡಿದ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕಿ ಉಷಾ ಕಿಣಿ ಅವರು ಕೊಡಗಿಗೆ ಇಷ್ಟೊಂದು ಸ್ಪರ್ಧಿಗಳು ದೂರದ ಊರಿನಿಂದ ಬಂದಿರುವದು ನಿಜಕ್ಕೂ ಸಂತೋಷದ ವಿಷಯವೆಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ನಿರ್ದೇಶಕÀ ಮಾದೇಟಿರ ಬೆಳ್ಳಿಯಪ್ಪ , ಕಾರ್ಯಕ್ರಮದ ನಿರ್ಮಾಪಕ ಚಿಕ್ಕರಂಗಯ್ಯ, ಕ್ಯಾಮರಾಮನ್ ಅಪ್ಪಾಜಿರಾವ್, ನಿರೂಪಕÀ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

-ಪುತ್ತರಿರ ಪಪ್ಪು ತಿಮ್ಮಯ್ಯ