ನಾಪೆÇೀಕ್ಲು, ಫೆ. 6: ಕೊಡಗಿನ ಪ್ರಖ್ಯಾತ ನಾಲ್ಕುನಾಡು ಅರಮನೆ ಮೈದಾನ ಕುಡಿಯ ಜನಾಂಗದ ಸಾಂಸ್ಕøತಿಕ, ಕ್ರೀಡಾ ಮನೋರಂಜನಾ ಕಾರ್ಯಕ್ರಮಕ್ಕೆ ವೇದಿಕೆಯಾಯಿತು.ನಾಲ್ಕುನಾಡು ಪೂಮಾಲೆ ಕುಡಿಯ ಕ್ರೀಡಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಐದನೇ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಾಂಗದ ಜನ ಹಾಡಿ, ಕುಣಿದು, ಕುಪ್ಪಳಿಸಿ, ಕೇಕೆ ಹಾಕಿ ಸಂತಸದ ಕ್ಷಣಗಳಿಗೆ ಸಾಕ್ಷಿಯಾದರು.ಕ್ರೀಡಾಕೂಟದ ವಾಲಿಬಾಲ್ ಅಂತಿಮ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕ್ರೀಡಾಕೂಟಗಳು ಜನಾಂಗದ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಿದೆ. ಕುಡಿಯ ಜನಾಂಗದ ಸಂಖ್ಯೆ ವಿರಳವಾಗಿದ್ದು, ಕ್ರೀಡಾಕೂಟದ ನೆಪದಲ್ಲಿ ಅವರೆಲ್ಲಾ ಒಗ್ಗೂಡಿ ಸಂತಸದಿಂದ ಬೆರೆಯು ವಂತಾಗಿದೆ. ಈ ಜನಾಂಗದವರು ಶ್ರಮಜೀವಿ ಗಳಾಗಿದ್ದು, ಇಂತಹ ಕ್ರೀಡಾಕೂಟ ಗಳಿಂದ ಮಾನಸಿಕ ಮತ್ತು ಶಾರೀರಿಕ ಮನರಂಜನೆ ದೊರೆ ಯುತ್ತದೆ. ಗ್ರಾಮೀಣ ಪ್ರದೇಶದಲ್ಲಿದ್ದರೂ ಕ್ರೀಡೆಯಲ್ಲಿ ಇವರ ಪ್ರತಿಭೆಗಳು ಪಟ್ಟಣ ಪ್ರದೇಶದ ಕ್ರೀಡಾಪಟುಗಳಿಗೆ ಸವಾಲೆಸೆ ಯುವಂತಿದೆ. ಇವರ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶಗಳನ್ನು ಕಲ್ಪಸಿಕೊಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಂಜಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ಮಾತನಾಡಿ ವರ್ಷ ಪೂರ್ತಿ ಶ್ರಮ ಜೀವಿಗಳಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಜನರ ಮನ, ಮನಸ್ಸಿಗೆ ಮನರಂಜನೆ ನೀಡಲು ಇಂತಹ ಕ್ರೀಡಾ ಕೂಟಗಳು ಸಹಕಾರಿಯಾಗಿದೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಜನಾಂಗದ ತಂಡಗಳು ದಿನದಿಂದ ದಿನಕ್ಕೆ ಹೆಚ್ಚಿನ ಯಶಸ್ಸು ಗಳಿಸುತ್ತಿರುವದು ಸಂತಸ ತಂದಿದೆ ಎಂದರು.

ಅಧ್ಯಕ್ಷತೆಯನ್ನು ಪೂಮಾಲೆ ಕುಡಿಯ ಕ್ರೀಡಾ ಸಮಿತಿ ಅಧ್ಯಕ್ಷ ರವಿ ಪೆಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಪೂಮಾಲೆ ಕುಡಿಯ ಕ್ರೀಡಾ ಸಮಿತಿ ಸದಸ್ಯರಾದ ಮೋಹನ್ ಮಾದಪ್ಪ, ಕುಂಜಿಲ- ಕಕ್ಕಬೆ ಗ್ರಾಮ ಪಂಚಾಯಿತಿ ಸದಸ್ಯೆ ಕುಡಿಯರ ಬೋಜಕ್ಕಿ, ಕ್ರೀಡಾ ಸಮಿತಿ ಸಲಹೆಗಾರ ಕುಡಿಯರ ಕೆ.ಪೆÇನ್ನಪ್ಪ, ಸದಸ್ಯೆ ಕೆ.ಎ.ಪಾರ್ವತಿ, ಹಿರಿಯರಾದ ಕುಡಿಯರ ಬೋಪಣ್ಣ, ಮುತ್ತಪ್ಪ ಇದ್ದರು.

ಕಾರ್ಯಕ್ರಮದ ಅಂಗವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಥ್ರೋಬಾಲ್, ಓಟದ ಸ್ಪರ್ಧೆ, ಕಾಳು ಹೆಕ್ಕುವದು, ಪುಟಾಣಿಗಳಿಂದ ನೃತ್ಯ ನಡೆಯಿತು. ವಿಜೇತರಿಗೆ ಟ್ರೋಫಿ ಮತ್ತು ನಗದು ಬಹುಮಾನ ವಿತರಿಸಲಾಯಿತು.