ಮಡಿಕೇರಿ, ಫೆ. 6: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ತಾ. 7 ರಂದು (ಇಂದು) ಈ ಬಾರಿಯ ಪ್ರತಿಷ್ಠಿತ ಪದ್ಮಶ್ರಿ ಪ್ರಶಸ್ತಿಗೆ ಭಾಜನರಾದ ತೂಗು ಸೇತುವೆಗಳ ಸರದಾರ ಎಂದೇ ಖ್ಯಾತರಾದ ಗಿರೀಶ್ ಭಾರದ್ವಜ್ ಮತ್ತು ಎನ್ ಸಿ ಸಿ ಬಾಲಕಿಯರ ತಂಡವನ್ನು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಮುನ್ನಡೆಸಿದ ಐಶ್ವರ್ಯ ದೇಚಮ್ಮ ಅವರನ್ನು ಸನ್ಮಾನಿಸಲಾಗುತ್ತಿದೆ. ಸಂಜೆ 7 ಗಂಟೆಗೆ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರನ್ನು ಸನ್ಮಾನಿಸಲಾಗುತ್ತಿದೆ. ನಿಸರ್ಗಧಾಮ, ಅಬ್ಬಿಫಾಲ್ಸ್, ಗುಡ್ಡೆಹೊಸೂರು, ಕಣಿವೆ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಅಗತ್ಯವಾಗಿದ್ದ ತೂಗುಸೇತುವೆಗಳನ್ನು ನಿರ್ಮಿಸಿರುವ ಗಿರೀಶ್ ಭಾರದ್ವಜ್ ಈವರೆಗೆ ಭಾರತದಾದ್ಯಂತ 127 ತೂಗುಸೇತುವೆಗಳನ್ನು ನಿರ್ಮಿಸುವ ಮೂಲಕ ದೇಶದಲ್ಲಿಯೇ ಖ್ಯಾತರಾಗಿದ್ದಾರೆ. ಈ ಬಾರಿ ತೂಗುಸೇತುವೆಗಳ ಸರದಾರನಿಗೆ ಕೇಂದ್ರ ಸರ್ಕಾರದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿದ್ದು ಶ್ಲಾಘನೆಗೆ ಕಾರಣವಾಗಿದೆ.ಇಂದು ಮಿಸ್ಟಿಹಿಲ್ಸ್ ಸನ್ಮಾನ ಅಂತೆಯೇ, ಈ ಬಾರಿಯ ಗಣರಾಜ್ಯೋತ್ಸವದ ಪ್ರತಿಷ್ಟಿತ ಪೆರೇಡ್‍ನಲ್ಲಿ ದೇಶದ ಬಾಲಕಿಯರ ಎನ್‍ಸಿಸಿ ತಂಡವನ್ನು ಮುನ್ನಡೆಸಿದ ಕೀರ್ತಿಗೆ ಪಾತ್ರರಾಗಿರುವ ಮಡಿಕೇರಿ ಯ ಅಜ್ಜಿನಂಡ ಐಶ್ವರ್ಯ ದೇಚಮ್ಮ ಅವರನ್ನೂ ರೋಟರಿ ಮಿಸ್ಟಿ ಹಿಲ್ಸ್‍ನಿಂದ ಸನ್ಮಾನಿಸಿ ಗೌರವಿಸಲಾಗು ತ್ತದೆ ಎಂದು ಪ್ರಕಟಣೆ ತಿಳಿಸಿದೆ.