ಮಡಿಕೇರಿ, ಫೆ.6 : ಇಸ್ಲಾಮಿನ ನೈಜ ಪರಂಪರೆಯನ್ನು ಎತ್ತಿ ಹಿಡಿಯುತ್ತಿರುವ ಕೇರಳದ ಜಂಯಿಯ್ಯತ್ತುಲ್ ಉಲಮಾ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ ಪಂಡಿತರಾದ ಶೈಖುನಾ ಕೊಟ್ಟುಮಲ ಬಾಪು ಮುಸ್ಲಿಯಾರ್ ಇತ್ತೀಚೆಗೆ ಕೇರಳದಲ್ಲಿ ನಿಧನರಾಗಿದ್ದು, ಇವರ ಸ್ಮರಣಾರ್ಥ ಅನುಸ್ಮರಣೆ ಕಾರ್ಯಕ್ರಮ ಕೊಡಗು ಜಿಲ್ಲಾ ಸಮಸ್ತ ಜಂಯಿಯ್ಯತ್ತುಲ್ ಉಲಮಾ ವತಿಯಿಂದ ತಾ.8 ರಂದು ಪೆರುಂಬಾಡಿಯ ಶಂಸುಲ್ ಉಲಮಾ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಂಯಿಯ್ಯತ್ತುಲ್ ಉಲಮಾದ ಜಿಲ್ಲಾ ಸಮಿತಿ ಸದಸ್ಯರಾದ ತಮ್ಲಿಕ್ ದಾರಿಮಿ ಮಾತನಾಡಿ, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಅನುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಲಮಾದ ಜಿಲ್ಲಾಧ್ಯಕ್ಷರಾದ ಎಂ.ಎಂ. ಅಬ್ದುಲ್ ಫೈಝಿ ವಹಿಸಲಿದ್ದಾರೆ. ಎಸ್‍ಕೆಜೆಎಂಸಿಸಿ ಕೇಂದ್ರದ ಕಾರ್ಯದರ್ಶಿ ಎಂ. ಅಬ್ದುಲ್ ರೆಹಮಾನ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕೇರಳ ಉಲಮಾದ ಜಂಟಿ ಕಾರ್ಯದರ್ಶೀ ಶೈಖುನಾ ಕೋಯೋಡ್ ಉಮ್ಮರ್ ಮುಸ್ಲಿಯಾರ್ ಪ್ರಧಾನ ಭಾಷಣ ಮಾಡಲಿದ್ದಾರೆ.

ಸುಂಟಿಕೊಪ್ಪದ ಜೂನಿಯರ್ ಶರಿಯತ್ ಕಾಲೇಜಿನ ವ್ಯವಸ್ಥಾಪಕರು ಹಾಗೂ ಮಾಜಿ ಶಾಸಕರಾದ ಕೆ.ಎಂ. ಇಬ್ರಾಹಿಂ, ಪೆರುಂಬಾಡಿ ಶಂಸುಲ್ ಉಲಮಾ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಸಿ.ಪಿ.ಎಂ. ಬಷೀರ್, ಉಪಾಧ್ಯಕ್ಷರಾದ ಉಸ್ಮಾನ್, ಎಸ್‍ಕೆಎಸ್‍ಎಸ್‍ಎಫ್‍ನ ಜಿಲ್ಲಾಧ್ಯಕ್ಷರಾದ ನೌಷಾದ್ ಫೈಝಿ, ರಾಜ್ಯ ಸಮಿತಿ ಕಾರ್ಯದರ್ಶಿ ಪಿ.ಎಂ. ಆರಿಫ್ ಫೈಝಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ತಮ್ಲಿಕ್ ದಾರಿಮಿ ತಿಳಿಸಿದರು.

1926 ರಲ್ಲಿ ಸ್ಥಾಪನೆಯಾದ ಸಮಸ್ತ ಕೇರಳ ಜಂಯಿಯ್ಯತ್ತುಲ್ ಉಲಮಾ ಎಂಬ ಧಾರ್ಮಿಕ ಪಂಡಿತ ಒಕ್ಕೂಟ ದೇಶ ವಿದೇಶಗಳಲ್ಲಿ ಇಸ್ಲಾಮಿನ ನೈಜ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದೆ. ಸುಮಾರು 90 ವರ್ಷಗಳನ್ನು ಪೂರೈಸಿದ ಉಲಮಾ ಸಂಘಟನೆಯಲ್ಲಿ ಮಹೋನ್ನತ ವ್ಯಕ್ತಿಗಳು ಸಮುದಾಯದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಇವರುಗಳ ಸ್ಮರಣೆಗಾಗಿ ಅನುಸ್ಮರಣೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಫೆ.8 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಅಂದು ಕೊಡಗಿನ ಮದರಸಗಳ ಸಂಜೆಯ ತರಗತಿಗಳಿಗೆ ರಜೆ ಘೋಷಿಸಲಾಗಿದೆ ಎಂದು ತಮ್ಲಿಕ್ ದಾರಿಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘÀಟನೆಯ ಅಧ್ಯಕ್ಷರಾದ ಎಂ.ಎಂ. ಅಬ್ದುಲ್ ಪೈಝಿ, ಉಪಾಧ್ಯಕ್ಷರಾದ ಎ.ಸಿ. ಉಸ್ಮಾನ್ ಫೈಝಿ, ಜಂಟಿ ಕಾರ್ಯದರ್ಶಿ ವೈ.ಎಂ. ಉಮ್ಮರ್ ಫೈಝಿ, ಮದರಸಗಳ ವೀರಾಜಪೆÉೀಟೆ ವಲಯಾಧ್ಯಕ್ಷ ಕೆ.ಎಂ. ಹಸೈನಾರ್ ಫೈಝಿ ಹಾಗೂ ವಲಯ ಕಾರ್ಯದರ್ಶಿ ಪಿ.ಎಕ. ಪೈಸಲ್ ಫೈಝಿ ಉಪಸ್ಥಿತರಿದ್ದರು.