ವೀರಾಜಪೇಟೆ, ಫೆ:6 ಸಮಾಜದಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣಗಳು, ಸಹ ಜೀವನ, ಸಹಕಾರ ತತ್ವದ ತರಬೇತಿಯ ಮಾರ್ಗದರ್ಶನಕ್ಕೆ ರಾಷ್ಟ್ರೀಯ ಯೋಜನಾ ಘಟಕ ವಿದ್ಯಾರ್ಥಿಗಳಿಗೆ ಸಹಕಾರಿ ಯಾಗಿದ್ದರೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮುಕ್ತವಾಗಿ ಸಮಾಜ ಸೇವೆಯಲ್ಲಿಯೂ ತೊಡಗಿಸಿ ಕೊಳ್ಳುವಂತಹ ಸಹ ಶಿಕ್ಷಣವು ಅಗತ್ಯವಾಗಿದೆ ಎಂದು ಜಾತ್ಯತೀತ ಜನತಾದಳ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಇಲ್ಲಿನ ಜಯಪ್ರಕಾಶ್ ನಾರಾಯಣ ಪ್ರೌಢಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎನ್ ಎಸ್.ಎಸ್ ವಾರ್ಷಿಕ ಶಿಬಿರದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕøತಿಕ ಕಾಂiÀರ್iಕ್ರಮವನ್ನು ಉದ್ಘಾಟಿಸಿದ ಸಂಕೇತ್ ಪೂವಯ್ಯ ಅವರು 1958ರಲ್ಲಿ ಆಗಿನ ರಾಷ್ಟ್ರಪತಿ ಡಾ| ರಾಧಾಕೃಷ್ಣ ಅವರು ರಾಷ್ಟ್ರೀಯ ಸೇವಾ ಯೋಜನಾ ಘಟಕಕ್ಕೆ ತಳಹದಿ ಹಾಕಿದ ನಂತರ ಅಂದಿನ ಪ್ರಧಾನಿ ಜವಹಾರಲಾಲ್ ಯೋಜನೆಗೆ ಚಾಲನೆ ನೀಡಿ ಪ್ರಥಮವಾಗಿ 38 ವಿಶ್ವ ವಿದ್ಯಾನಿಲಯಗಳಲ್ಲಿ ಈ ಯೋಜನೆ ಜಾರಿಗೆ ಬಂದಿತು. ಈಗ ಇದು ಭಾರತದ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲೂ ಜಾರಿಯಲ್ಲಿದೆ. ಒರಿಸ್ಸಾ ರಾಜ್ಯದ ಕೊನಾರ್ಕ್‍ನ ಸೂರ್ಯ ದೇವಾಲಯದ ಬೃಹತ್ ರಥದ ಚಕ್ರವನ್ನು ಯೋಜನೆಯ ಲಾಂಛನವನ್ನಾಗಿ ಆಯ್ಕೆ ಮಾಡಿದ್ದು, ಅದರ ಎಂಟು ಪಟ್ಟಿಗಳು ದಿನದ 24 ಗಂಟೆಗಳನ್ನು ಬಿಂಬಿಸಿದರೆ, ಕೆಂಪು ಬಣ್ಣ ಸದಾ ಸೇವೆಯ ಬಿಸಿ ರಕ್ತ, ನೀಲಿ ಬಣ್ಣ ಯುವ ಶಕ್ತಿಯ ಸೇವೆಯನ್ನು ಬಿಂಬಿಸುತ್ತದೆ. ಇಂದು ಯುವ ಶಕ್ತಿ ದೇಶದ ಶಕ್ತಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಶಿಸ್ತು, ದಕ್ಷತೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ರಾಷ್ಟ್ರೀಯ ಯೋಜನೆಯ ಮೂಲ ತತ್ವ ಸಿದ್ಧಾಂತಗಳಿಗೆ ಬದ್ದರಾದರೆ ಮುಂದೆ ಶಾಂತಿ ಸುವ್ಯವಸ್ಥೆಯ ಪರಸ್ಪರ ಸಹಕಾರದ ನೆಮ್ಮದಿಯ ಸುಭದ್ರ ಸಮಾಜವನ್ನು ಶಾಶ್ವತವಾಗಿ ಕಾಣಲು ಸಾಧ್ಯ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಪದವಿ ಕಾಲೇಜಿನ ಉಪನ್ಯಾಸಕ ಎಂ.ಎನ್. ವಿನಿತ್ ಕುಮಾರ್ ಎನ್.ಎಸ್.ಎಸ್. ಘಟಕದಿಂದ ವಿದ್ಯಾರ್ಥಿಗಳಿಗಾಗುವ ಪ್ರಯೋಜನದ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೊ| ಕೆ.ಬಸವರಾಜು, ಆರ್ಥಿಕ ಘಟಕದ ಅಧಿಕಾರಿ ಪ್ರೊ: ಸಿದ್ದಪ್ಪಾಜಿ, ಶಿಬಿರದ ನಾಯಕರು ಉಪಸ್ಥಿತರಿದ್ದರು. ನಂತರ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.