ಮೂರ್ನಾಡು, ಫೆ. 7 : ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ನಡೆಸಲಾಯಿತು. ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್‍ನ ವತಿಯಿಂದ ಆಯೋಜಿಸಲಾದ ದಂತ ತಪಾಸಣೆ ಶಿಬಿರದಲ್ಲಿ ಮೂರ್ನಾಡು ದಂತ ವೈದ್ಯರಾದ ಡಾ. ನಿಧಿ ಪೂಣಚ್ಚ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಯು.ಸಿ. ಮಾಲತಿ, ಮಹಿಳಾ ಸಮಾಜದ ಅಧ್ಯಕ್ಷೆ ಬಡುವಂಡ ಸೀತಾದೇವಿ ಕಾರ್ಯಪ್ಪ, ವೈದ್ಯ ಸಹಾಯಕಿ ಅನಿತ, ಉಪನ್ಯಾಸಕಿ ಕುಮುದ ಇತರರು ಹಾಜರಿದ್ದರು.