ನಾಪೆÇೀಕ್ಲು, ಫೆ. 7: ಗ್ರಾಮ ವಿಕಾಸ್ ಯೋಜನೆಯಡಿಯಲ್ಲಿ ಕೊಳಕೇರಿ ಗ್ರಾಮದ ಅಭಿವೃದ್ಧಿಗಾಗಿ ದಿ. ಬಿ.ಟಿ.ಪ್ರದೀಪ್ ಅವರ ಪ್ರಯತ್ನದಿಂದ ಸುಮಾರು 75 ಲಕ್ಷ ರೂ. ಬಿಡುಗಡೆಗೊಂಡಿತ್ತು. ಇದರ ಪೈಕಿ ಕೊಳಕೇರಿ ಗ್ರಾಮದ ಕೋಟೇರಿಯಿಂದ ಮೂಟೇರಿ ದೇವಾಲಯಕ್ಕೆ ಹೋಗುವ ರಸ್ತೆಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಕಾಫಿ ಬೆಳೆಗಾರ ಅಪ್ಪಾರಂಡ ಅಪ್ಪಯ್ಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಸದಸ್ಯರಾದ ಎ.ಕೆ.ಹ್ಯಾರೀಸ್, ಪುಲ್ಲೇರ ಪದ್ಮಿನಿ, ಎಂ.ಎಂ.ಆಮೀನಾ, ಗ್ರಾಮಸ್ಥರಾದ ಬಿದ್ದಾಟಂಡ ದಿನೇಶ್, ಜಿನ್ನು ನಾಣಯ್ಯ, ಅಪ್ಪಾರಂಡ ಸುಧೀರ್ ಅಯ್ಯಪ್ಪ, ಲತ ಅಯ್ಯಪ್ಪ, ಸುಭಾಶ್ ತಿಮ್ಮಯ್ಯ, ಪುಲ್ಲೇರ ಭೀಮಯ್ಯ, ಸುನು, ಹ್ಯಾರಿ ತಟ್ಟಂಡ ತಮ್ಮಿ ಅಯ್ಯಪ್ಪ, ಸುಬ್ಬಯ್ಯ, ಕಿಶನ್ ಕಾರ್ಯಪ್ಪ, ಅಚ್ಚಾಂಡಿರ ನಾಣಯ್ಯ, ಅಚ್ಚಪಂಡ ಗಣೇಶ್, ಎಂ.ಎಸ್.ದಿನೇಶ್ ಇದ್ದರು.

ಉದ್ಘಾಟನೆಗೆ ಮೊದಲು ಅಗಲಿದ ನಾಯಕ ಬಿದ್ದಾಟಂಡ ಪ್ರದೀಪ್ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.