ಸೋಮವಾರಪೇಟೆ, ಫೆ. 7: ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ ವತಿಯಿಂದ ಶನಿವಾರಸಂತೆಯ ಯಶಸ್ವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 7ನೇ ರಾಜ್ಯಮಟ್ಟದ ಅಂತರ್‍ಶಾಲಾ ಕರಾಟೆ ಮತ್ತು ಯೋಗ ಪಂದ್ಯಾವಳಿಯಲ್ಲಿ ಕೊಡ್ಲಿಪೇಟೆಯ ಎಸ್‍ಕೆಎಸ್ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಧನುಷ್ ಸಂತೋಷ್ ದ್ವಿತೀಯ ಸ್ಥಾನ ಗಳಿಸಿದ್ದಾನೆ.

ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಸೇರಿದಂತೆ ಮೈಸೂರು, ಚಾಮರಾಜನಗರ ಮತ್ತಿತರ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಧನುಷ್ ದ್ವಿತೀಯ ಸ್ಥಾನ ಗಳಿಸಿದ್ದಾನೆ. ಈತ ಕಟ್ಟೆಪುರ ಗ್ರಾಮದ ಸಂತೋಷ್ ಹಾಗೂ ಶ್ವೇತಾ ದಂಪತಿ ಪುತ್ರ.