ಶನಿವಾರಸಂತೆ, ಫೆ. 7: ಹಂಡ್ಲಿ ಗ್ರಾ.ಪಂ. ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ 13 ದಿನಗಳ ಕಾಲ ನಡೆದ 72ನೇ ವರ್ಷದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಮುಕ್ತಾಯ ಸಮಾರಂಭವು ತಾ. 8 ರಂದು (ಇಂದು) ಮಧ್ಯಾಹ್ನ 1.30ಕ್ಕೆ ಜಾತ್ರಾ ಮೈದಾನದಲ್ಲಿ ನಡೆಯಲಿದೆ.

ಕಲ್ಲುಮಠದ ಮಹಾಂತಸ್ವಾಮಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿ, ಇಮ್ಮಡಿ ಶಿವಲಿಂಗಸ್ವಾಮಿ ಹಾಗೂ ಜುಮಾ ಮಸೀದಿ ಗುರು ಸುಹೈಬ್ ಫೈಜಿ ಸಾನಿಧ್ಯ ವಹಿಸಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಜಾತ್ರಾ ಸಮಿತಿ ಅಧ್ಯಕ್ಷ ಸೋಮಶೇಖರ್ ವಹಿಸಲಿದ್ದಾರೆ.ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಪುಟ್ಟರಾಜ್, ಸರೋಜಮ್ಮ, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಸದಸ್ಯರಾದ ಕುಶಾಲಪ್ಪ, ಅನಂತ್‍ಕುಮಾರ್, ತಮ್ಮಯ್ಯ, ಎಚ್.ಎನ್. ಸಂದೀಪ್, ಮಹ್ಮದ್‍ಗೌಸ್, ಸಿ.ಜೆ. ಗಿರೀಶ್, ಮಸ್ತಾಫ್, ಉಪಾಧ್ಯಕ್ಷೆ ರೂಪಾ, ಪಿಎಸ್‍ಐ ಮರಿಸ್ವಾಮಿ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಮತ್ತಿತರರು ಪಾಲ್ಗೊಳ್ಳುತ್ತಾರೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.