ಮಡಿಕೇರಿ, ಫೆ. 7 : ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ತೋಟಗಾರಿಕೆ ಇಲಾಖೆ ವೀರಾಜಪೇಟೆ ತಾಲೂಕಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಅತ್ತೂರು ¥sóÁರಂನಲ್ಲಿ ಕಾಳುಮೆಣಸಿನ ಸಮಗ್ರ ಕೃಷಿಯ ಕ್ಷೇತ್ರೋತ್ಸವ ಹಾಗೂ ವಿಜ್ಞಾನಿಗಳ ಮತ್ತು ರೈತರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜೂ ಜಾರ್ಜ್ ಮಾತನಾಡಿ, ಈ ಕಾಳುಮೆಣಸು ಕ್ಷೇತ್ರೋತ್ಸವವನ್ನು ಹಮ್ಮಿಕೊಂಡಿರುವದು ರೈತರಿಗೆ ಸಹಕಾರಿಯಾಗಲಿದ್ದು, ಕಾಳು ಮೆಣಸಿನ ತಾಕಿನಲ್ಲಿ ಬಳಸಲಾದ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಪ್ರಾಮುಖ್ಯತೆಯನ್ನು ತಿಳಿಸಿದರು. ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್, ಕಾಳುಮೆಣಸು ಕ್ಷೇತ್ರೋತ್ಸವದ ಉದ್ದೇಶವನ್ನು ತಿಳಿಸುತ್ತಾ ನಮ್ಮ ಕೇಂದ್ರದಲ್ಲಿ ಬೆಳೆಸಿರುವ ಕಾಳುಮೆಣಸು ತಾಕು ಸಾಮಾನ್ಯವಾಗಿ ಒಬ್ಬ ಕೊಡಗಿನ ರೈತ ಕಾಫಿûಯ ಜೊತೆಗೆ ಕಾಳುಮೆಣಸು ಬೆಳೆಸುವಾಗ ಹಮ್ಮಿಕೊಳ್ಳ ಬಹುದಾದ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿ ಹೇಗೆ ಬೆಳೆಸಬಹುದು ಎಂಬದನ್ನು ವಿವರಿಸಿದರು ಮತ್ತು ಕೆಲವು ಕಾಳು ಮೆಣಸು ತೋಟಗಳಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವ ಬಳ್ಳಿಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂಬದರ ಬಗ್ಗೆ ತಿಳಿಸಿಕೊಟ್ಟರು. ವಿಷಯ ತಜ್ಞ ಕೆ.ಎ. ದೇವಯ್ಯ ಕೇಂದ್ರದ ಕಾಳುಮೆಣಸಿನ ತೋಟದಲ್ಲಿ ಹಮ್ಮಿಕೊಳ್ಳಲಾದ ವೈಜ್ಞಾನಿಕ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗಿರೀಶ್ ಕುಮಾರ್ ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಕ್ಷೇತ್ರೋತ್ಸವಗಳು ರೈತರ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವದರ ಜೊತೆಗೆ ಉತ್ತಮ ಇಳುವರಿಯನ್ನು ಪಡೆಯಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆಯ ವೀರಾಜಪೇಟೆ ತಾಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕ ಲಕ್ಷ್ಮಯ್ಯ ನೆರೆದಿದ್ದ ರೈತರೊಂದಿಗೆ ಚರ್ಚೆಗಳ ಮೂಲಕ ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಆತ್ಮಾ ಯೋಜನೆಯ ಅಧಿಕಾರಿ ಕುಮಾರಿ ವಾಣಿಶ್ರೀ ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ತೋಟಗಾರಿಕೆ ವಿಷಯ ತಜ್ಞ ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಮತ್ತೋರ್ವ ತಜ್ಞ ಡಾ.ಸುರೇಶ್ ವಂದಿಸಿದರು.