ಮಡಿಕೇರಿ, ಫೆ. 8: ಸ್ಟೇಜ್ ಕ್ಯಾರೇಜ್ ವಾಹನಗಳಿಗೆ ವೇಳಾಪಟ್ಟಿ ನಿಗಧಿಪಡಿಸುವ ಸಂಬಂಧ ತಾ. 10 ರಂದು ಬೆಳಗ್ಗೆ 11 ಗಂಟೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ವೇಳಾಪಟ್ಟಿ ಸಭೆ ನಡೆಯಲಿದೆ. ಅರ್ಜಿದಾರರು ಹಾಗೂ ಮಾರ್ಗದ ರಹದಾರಿದಾರಕರುಗಳು ಅವರ ವಾಹನಗಳಿಗೆ ಹೊಂದಿರುವ ಪಕ್ಕಾ ರಹದಾರಿಯ ಮೂಲ ಪ್ರತಿಯೊಂದಿಗೆ ಹಾಜರಾಗಿ ಅಹವಾಲು ಮಂಡಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಕಾರ್ಯದರ್ಶಿ ಫೆಲಿಕ್ಸ್ ಡಿಸೋಜ ತಿಳಿಸಿದ್ದಾರೆ.