ಸೋಮವಾರಪೇಟೆ, ಫೆ. 8: ಸುನ್ನೀ ಸ್ಟುಡೆಂಟ್ ಫೆಡರೇಷನ್‍ನ ಜಿಲ್ಲಾ ಸಮಿತಿಯ 2017-18ನೇ ಸಾಲಿನ ಅಧ್ಯಕ್ಷರಾಗಿ ಹಾಕತ್ತೂರಿನ ಹಾಫಿಲ್ ಅಬ್ದುಲ್ ಕರೀಂ ಫಾಝಿಲಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನೆಲ್ಲಿಹುದಿಕೇರಿಯ ರಫೀಕ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕೊಟ್ಟಮುಡಿಯ ಮರ್ಕಝ್ ಹಿದಾಯದಲ್ಲಿ ರಫೀಕ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿಗೆ ಉಪಾಧ್ಯಕ್ಷರುಗಳಾಗಿ ಎಮ್ಮೆಮಾಡುವಿನ ಮುಬಶ್ಶಿರ್ ಅಹ್ಸನಿ, ಅಲ್ ಕಾಮಿಲಿ ನಝೀರ್ ಬಾಖವಿ ಹಾಗೂ ಚೇರಂಬಾಣೆಯ ಹ್ಯಾರೀಸ್, ಜಂಟಿ ಕಾರ್ಯದರ್ಶಿಗಳಾಗಿ ಪೊನ್ನತ್‍ಮೊಟ್ಟೆಯ ಶಾಕಿರ್ ಕೊಂಡಂಗೇರಿಯ ಮುಜೀಬ್, ನೆಲ್ಲಿಹುದಿಕೇರಿಯ ಮುಸ್ತಫಾ ಅವರುಗಳನ್ನು ನೇಮಿಸಲಾಯಿತು.
ಕ್ಯಾಂಪಸ್ ಕಾರ್ಯದರ್ಶಿಯಾಗಿ ಕೊಳಕೇರಿಯ ಅಬ್ದುಲ್ಲಾ, ಕೋಶಾಧಿಕಾರಿಗಳಾಗಿ ಹೊಸತೋಟದ ಶರೀಫ್, ಸಮಿತಿ ಸದಸ್ಯರುಗಳಾಗಿ 10 ಮಂದಿಯನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಎಸ್‍ಎಸ್‍ಎಫ್‍ನ ರಾಷ್ಟ್ರೀಯ ಕಾರ್ಯದರ್ಶಿ ಅಬೂಬಕರ್ ಸಿದ್ದಿಕ್ ಮೋಂಟುಗೋಳಿ, ರಾಜ್ಯ ಸಮಿತಿ ಸದಸ್ಯರಾಗಿ ಬೆಂಗಳೂರಿನ ಮುಜೀಬ್ ಸಖಾಫಿ, ಜಿಲ್ಲೆಯ 100ಕ್ಕೂ ಅಧಿಕ ಶಾಖೆಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಎಸ್‍ಎಸ್‍ಎಫ್‍ನ ಜಿಲ್ಲಾ ಮೀಡಿಯಾ ಸೆಲ್‍ನ ಕಾರ್ಯದರ್ಶಿ ಕೊಡ್ಲಿಪೇಟೆಯ ಅಝೀಝ್ ಸಖಾಫಿ ತಿಳಿಸಿದ್ದಾರೆ.