ಮಡಿಕೇರಿ, ಫೆ. 8: ಇತ್ತೀಚೆಗೆ ನಡೆದ ನೀಟ್ (ಓಇಇಖಿ) ಪಿ.ಜಿ. ಪರೀಕ್ಷೆ 2017ರಲ್ಲಿ ಕೊಡಗಿನ ಯುವತಿಯೋರ್ವಳು ರಾಷ್ಟ್ರಮಟ್ಟದಲ್ಲಿ 12ನೇ ರ್ಯಾಂಕ್ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾಳೆ.ಡಾ|| ಚೋವಂಡ ಸ್ನೇಹ ಹರೀಶ್ 12ನೇಯ ರ್ಯಾಂಕ್‍ನ ಮೂಲಕ ಕೀರ್ತಿ ತಂದಿದ್ದಾಳೆ. ಸ್ನೇಹ ಸಿಇಟಿನಲ್ಲಿ 510ನೇ ರ್ಯಾಂಕ್ ಪಡೆದು ಎಂಬಿಬಿಎಸ್ ಡಿಗ್ರಿಯನ್ನು ಮಂಡ್ಯದಲ್ಲಿರುವ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಈಗ ಎಂಡಿ ಪದವಿಗೆ ನೀಟ್ ಪಿ.ಜಿ. ಬರೆದು 12ನೇ ರ್ಯಾಂಕ್ ಪಡೆದಿರುವದು ದೊಡ್ಡ ಸಾಧನೆಯಾಗಿದೆ. ಡಾ|| ಸ್ನೇಹ ಮೂಲತಃ ಮಗ್ಗುಲ ಗ್ರಾಮದ ಮೈಸೂರಿನಲ್ಲಿ ನೆಲೆಸಿರುವ ವಿಕ್ರಾಂತ್ ಸಂಸ್ಥೆಯ ನಿವೃತ್ತ ಉದ್ಯೋಗಿ ಚೋವಂಡ ಬಿ. ಹರೀಶ್ ಮತ್ತು ಶೈಲಾ ದಂಪತಿಯ ಪುತ್ರಿ. ಡಾ. ಸ್ನೇಹ ಹರೀಶ್ ಈಗ ನವದೆಹಲಿ ಏಮ್ಸ್ ( ಂಟಟ Iಟಿಜiಚಿ ಒಚಿಜiಛಿಚಿಟ Seiಛಿಟಿes) ನಲ್ಲಿ ಡಾಕ್ಟರ್ ಹುದ್ದೆಯಲ್ಲಿದ್ದಾರೆ. ಮುಂದೆ ರೇಡಿಯೋಲಾಜಿನಲ್ಲಿ ಎಂಡಿ ಪದವಿ ಮಾಡುವದು ಇವರ ಆಸಕ್ತಿಯಾಗಿದೆ.