ಮಕ್ಕಳಿಗೆ ಪರೀಕ್ಷೆ ಸಮಯ ಸಮೀಪಿಸುತ್ತಿದೆ. ಈ ಪರೀಕ್ಷೆಯ ಒತ್ತಡ ಮನೆ ಮಂದಿಗೆಲ್ಲಾ ಇರುತ್ತದೆ. ಅದರಲ್ಲಿ ಪೋಷಕರಿಗಂತೂ ನಮ್ಮ ಮಕ್ಕಳು ಎಲ್ಲರಿಗಿಂತ ಮುಂದೆ ಬರಬೇಕು. ಹೆಚ್ಚು ಅಂಕಗಳಿಸಬೇಕೆಂಬ ಹಂಬಲದೊಂದಿಗೆ ಅದನ್ನು ಮಕ್ಕಳ ಮೇಲೆ ಒತ್ತಡ ಹೇರುವವರೂ ಇದ್ದಾರೆ. ಈ ರೀತಿಯ ಒತ್ತಡ ಮಕ್ಕಳಲ್ಲಿ ಹೇರಿದರೆ ಕೆಲವೊಮ್ಮೆ ಸಾಧನೆಗೈಯುವವರೂ ಇದ್ದಾರೆ. ಆದರೆ ಕೆಲವೊಮ್ಮೆ ಈ ಒತ್ತಡ ಮಕ್ಕಳ ಮನಸ್ಸಿಗೆ ಘಾಸಿಯನ್ನು ಉಂಟು ಮಾಡುತ್ತದೆ. ಹೆಚ್ಚು ಅಂಕಗಳಿಸಲು ಸಾಧ್ಯವಾಗದ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯದೆ ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧರಿಸುತ್ತಾರೆ.
ಪ್ರೀತಿಯ ಮಕ್ಕಳೇ ಸ್ವಾಮಿ ವಿವೇಕಾನಂದರ ಮಾತನ್ನು ನೆನಪಿಸಿಕೊಳ್ಳಿ ‘‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಹೋರಾಡಿ’’ ಎಂದಿದ್ದಾರೆ. ಪ್ರಯತ್ನ ಒಂದಿದ್ದರೆ ಹಿರಿಯರು ಹೇಳುವಂತೆ ‘ಸಾಧಿಸಿದರೆ ಸಬಲವನ್ನು ನುಂಗಬಹುದು. ಎಂದು. ಆದರೆ, ಎಲ್ಲರಿಗೂ ಒಂದೇ ರೀತಿಯ ತೀಕ್ಷ್ಣ ಬುದ್ಧಿ ಇರುವದಿಲ್ಲ. ಅವರವರ ಅರ್ಹತೆಗೆ ತಕ್ಕಂತೆ ಫಲ ದೊರಕುವದು. ಒಮ್ಮೆ ಆಗಲಿಲ್ಲವೆಂದರೆ ಮತ್ತೆ ಮತ್ತೆ ಪ್ರಯತ್ನಿಸಲು ಅವಕಾಶ ಗಳಿವೆ. ‘ಈಸಬೇಕು ಈಸಿ ಜಯಿಸಬೇಕೆಂಬ’ ನಾಣ್ಣುಡಿ ಯಂತೆ ಪ್ರಯತ್ನಿಸಿ ಜಯಶೀಲರಾಗಿ. ಕಡಿಮೆ ಅಂಕ ಬಂತೆಂದು ಮನಸ್ಸಿನಲ್ಲಿ ಕೊರಗದಿರಿ.
ಕೆಲವು ಮಕ್ಕಳು ಶಾಲಾ ಆರಂಭದಿಂದಲೇ ನಿಯಮ ಪ್ರಕಾರ ಪ್ರತಿ ದಿವಸ ಇಂತಿಷ್ಟು ಸಮಯ ಓದಲೇ ಬೇಕೆಂಬ ಅಭ್ಯಾಸವನ್ನು ರೂಢಿಸಿ ಕೊಂಡಿರುತ್ತಾರೆ. ಇದು ಬಹಳ ಒಳ್ಳೆಯ ಅಭ್ಯಾಸ. ಇಂತವರಿಗೆ ಒತ್ತಡ ಕಡಿಮೆ ಇರುತ್ತದೆ. ಇನ್ನು ಕೆಲವು ಮಕ್ಕಳು ಪರೀಕ್ಷೆ ಹತ್ತಿರ ಬಂದಾಗ ಊಟ ನಿದ್ರೆ ಬಿಟ್ಟು ಓದುತ್ತಾರೆ. ಆದರೂ ಪೂರ್ತಿಯಾಗಿ ಓದಲಾಗದಿದ್ದಾಗ ಚಿಂತೆಗೆ ಒಳಗಾಗುತ್ತಾರೆ. ಇದರಿಂದ ಅಂತಹ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜ್ವರ, ತಲೆ ಸುತ್ತು ಇಂತಹ ಕಾಯಿಲೆಗಳಿಂದಾಗಿ ಕೆಲವೊಮ್ಮೆ ಪರೀಕ್ಷೆಗೆ ಹೋಗಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತದೆ. ಇದರ ಪರಿಣಾಮ ಒಂದು ವರ್ಷವಿಡೀ ಅನಾಯಾಸವಾಗಿ ಕಳೆದಂತೆ ಆಗುತ್ತದೆ. ದಿನಗಳು ಸಮಯ ಇವುಗಳು ಉರುಳುತ್ತಲೇ ಇರುತ್ತದೆ. ಎಷ್ಟೇ ಕಷ್ಟಪಟ್ಟರೂ ಕಳೆದು ಹೋದ ಅತ್ಯಮೂಲ್ಯ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಆದುದರಿಂದ ಇರುವ ಸಮಯವನ್ನು ಅನ್ಯಥಾ ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಳ್ಳಲು ತಿಳಿಸಿದೆ.
ಕೆಲವು ಮಾರ್ಗ ಸೂಚಿಗಳನ್ನು ಮಕ್ಕಳ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ.
v
v
v
v
v
v
v