ತಂತ್ರಜ್ಞಾನವು ಕಾಲ-ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಾಗುತ್ತಿದೆ. ಅದಕ್ಕೆ ತಕ್ಕಂತೆ ಮಾಹಿತಿ, ಶಿಕ್ಷಣ, ಮನೋರಂಜನೆಯ ಕ್ಷೇತ್ರವೂ ಸಹಾ ವಿಸ್ತಾರವಾಗುತ್ತಿದೆ. ಹಿಂದೆ ಆರಂಭವಾದ ಟ್ರ್ಯಾನ್ಸಿಸ್ಟರ್ ಗಳೆಂಬ ರೇಡಿಯೋಗಳಿಂದ ವಿವಿಧ ಕಾಲಘಟ್ಟಗಳಲ್ಲಿ ಸಾಗಿ ಇಂದು ಪುಟ್ಟ ಮೊಬೈಲ್ ಗಳಲ್ಲಿಯೂ ಸಹಾ ಅದು ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಸ್ಮಾರ್ಟ್‍ಫೋನ್, ಅಂಡ್ರಾಯಿಡ್ ಫೋನ್‍ಗಳಿಗೆ ಅಂತರ್‍ಜಾಲ ಸಂಪರ್ಕವಿರುವು ದರಿಂದ ಎಲ್ಲಿ ಬೇಕಾದರೂ, ನೀವು ಆನ್‍ಲೈನ್ ಆಕಾಶವಾಣಿಯ ವಿವಿಧ ಕಾರ್ಯಕ್ರಮಗಳನ್ನು ಆಲಿಸಿ ಆನಂದಿಸಬಹುದಾಗಿದೆ.

ಇದಕ್ಕಾಗಿ ಏನು ಮಾಡಬೇಕು ?

ಸರ್ಚ್ ಇಂಜಿನ್ ತೆರೆದು “ಆನ್‍ಲೈನ್ ರೇಡಿಯೋಸ್ ಡಾಟ್ ಇನ್” ಎಂದು ಟೈಪ್ ಮಾಡಿ ಹುಡುಕಿ. ಆಗ “ಹೋಂ ಪೇಜ್” ತೆರೆದುಕೊಳ್ಳುತ್ತದೆ. ಈ ಪುಟದ ಮೇಲ್ಭಾಗದಲ್ಲಿ ಆಂಗ್ಲಭಾಷೆಯ ‘ಎ’ ಯಿಂದ ಆರಂಭವಾಗಿ ‘ಝೆಡ್’ ವರೆಗೆ ಸರಣಿ ಪ್ರಕಾರ ವಿವಿಧ ದೇಶಗಳ ರಾಷ್ಟ್ರಧ್ವಜಗಳು ಕಾಣಬರುತ್ತದೆ. ನೀವು ವಿದೇಶಗಳ ಆಕಾಶವಾಣಿ ಪ್ರಿಯರಾದಲ್ಲಿ ಆಯಾಯ ದೇಶಗಳ ಧ್ವಜಗಳ ಮೇಲೆ ಕರ್ಸರ್ ತೆಗೆದುಕೊಂಡು ಹೋದಲ್ಲಿ ಆಯಾ ದೇಶದ ಹೆಸರು ಕಾಣಬರುತ್ತದೆ. ಉದಾಹರಣೆಗೆ ಅಲ್ಜಿರಿಯಾದಿಂದ ಆರಂಭಗೊಂಡು, ವಿವಿಧ ದೇಶಗಳ ಸಾವಿರಾರು ಆಕಾಶವಾಣಿ ಕೇಂದ್ರಗಳು ಇಲ್ಲಿ ಲಭ್ಯ. ನಮ್ಮ ದೇಶದ ಆಕಾಶವಾಣಿ ಕೇಂದ್ರಗಳು ಬೇಕಾದಲ್ಲಿ ನಮ್ಮ ತ್ರಿವರ್ಣ ಧ್ವಜದ ಮೇಲೆ ಕ್ಲಿಕ್ ಮಾಡಿ. ರೇಡಿಯೋ ಸಿಟಿಯಿಂದ ಆರಂಭವಾಗಿ ಹತ್ತಾರು, ನೂರಾರು ಕೇಂದ್ರಗಳ ಹೆಸರುಗಳನ್ನು ಕಾಣಬಹುದು. ಹೆಸರಿನ ಮೇಲೆ ಕ್ಲಿಕ್ ಮಾಡಿದಲ್ಲಿ ಆಯಾ ಕೇಂದ್ರದ ಕಾರ್ಯಕ್ರಮಗಳನ್ನು ನಿರರ್ಗಳವಾಗಿ ಕೇಳಬಹುದು. ಜಾಹೀರಾತುಗಳು ತೀರಾ ಕಡಿಮೆ.

ವಿವಿಧ ಭಾಷೆಗಳ ಸಂಗಮ

ಇದರಲ್ಲಿ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ತಲಾ ಮೂರು ವಿಭಾಗಗಳಿವೆ. ಉಳಿದಂತೆ ಬಂಗಾಲಿ, ಗುಜರಾತಿ, ಕನ್ನಡ, ಮಲೆಯಾಳಂ, ಪಂಜಾಬಿ, ತಮಿಳು, ತೆಲುಗು ಭಾಷೆಗಳ ವೈವಿಧ್ಯಮಯ ಕಾರ್ಯಕ್ರಮ ಗಳನ್ನು ತಡೆರಹಿತವಾಗಿ ಎಲ್ಲೆಂದರಲ್ಲಿ ಆಲಿಸಬಹುದಾಗಿದೆ. ಕನ್ನಡದಲ್ಲಿ ರೇಡಿಯೋ ಗಿರ್‍ಮಿಟ್, ರೇಡಿಯೋ ಸಿಟಿ ಫನ್ ಕಾ ಅಂಟೇನಾ, ರೇಡಿಯೋ ಸಿಟಿ ಕನ್ನಡ, ಕನ್ನಡ ರೇಡಿಯೋ-316 ಎಂಬ ಕೇಂದ್ರಗಳು ಮಾತ್ರ ಸದ್ಯಕ್ಕೆ ಲಭ್ಯ.

ಆದರೆ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಪ್ರಮಾಣದ ಕೇಂದ್ರಗಳು ಇಲ್ಲಿಗೆ ಸೇರ್ಪಡೆಗೊಂಡಿವೆ. ಬೆಂಗಾಲಿ ಯಲ್ಲಿ 8, ಗುಜರಾತಿಯಲ್ಲಿ 2 ಮಲೆಯಾಳಂನಲ್ಲಿ 20, ಪಂಜಾಬಿ- 29, ತೆಲುಗು ಭಾಷೆಗಳ 11 ಕೇಂದ್ರಗಳ ಕಾರ್ಯಕ್ರಮಗಳನ್ನು ಆಲಿಸ ಬಹುದಾಗಿದೆ. ಇದರಲ್ಲಿನ ಎಲ್ಲಾ ಕೇಂದ್ರಗಳು ಎಫ್‍ಎಂ ಪ್ರೀಕ್ವಿನ್ಸಿ (ಪ್ರಿಕ್ವಿನಿ ಮಾಡುಲೈಶನ್)ಯಲ್ಲಿ ಕಾರ್ಯ ನಿರ್ವಹಿಸುತ್ತಿರುವದ ರಿಂದ ಬೇರೆ ಸದ್ದು ಗದ್ದಲಗಳು ಆನ್‍ಲೈನ್ ರೇಡಿಯೋಗಳಲ್ಲಿ ಕೇಳಿ ಬರುವುದಿಲ್ಲ. ಹಾಗಾದರೆ ಇನ್ನೇಕೆ ತಡ ನೀವೂ ಆನ್‍ಲೈನ್ ನಲ್ಲಿ ಆಕಾಶವಾಣಿಯನ್ನು ಆಲಿಸಿ.

ರೇಡಿಯೋ ಗಾರ್ಡನ್ ಎಂಬ ಯ್ಯಾಪ್ ಆನ್‍ಲೈನ್ ಸೇರಿ ವಿವಿಧ ಯ್ಯಾಪ್‍ಗಳಲ್ಲಿಯೂ ವಿಶ್ವದ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳನ್ನು ಆಲಿಸ ಬಹುದಾಗಿದೆ. ರೇಡಿಯೋ ಗಾರ್ಡನ್‍ನಲ್ಲಿ ಮೈಸೂರಿನ ಪ್ಲಾನೆಟ್ ರೇಡಿಯೋ ಸಿಟಿ ಡಾಟ್ ಕಾಂ, ಬೆಂಗಳೂರಿನ ರೇಡಿಯೋ ಪೈತ್, ರೇಡಿಯೋ ಸಿಟಿ ಇಂಟರ್ ನ್ಯಾಷನಲ್, ರೇಡಿಯೋ ಸಿಟಿ ಕನ್ನಡ, ರೇಡಿಯೋ ಸಿಟಿ ಲವ್, ರೇಡಿಯೋ ಸಿಟಿ ರಾಕ್, ರೇಡಿಯೋ ಗಿರ್‍ಮಿಟ್ ಕೇಂದ್ರ ಗಳ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ.

ಆಲ್ ಇಂಡಿಯಾ ರೇಡಿಯೋ

“ಬಹುಜನ ಹಿತಾಯ - ಬಹುಜನ ಸುಖಾಯ” ಎಂಬ ಘೋಷಾವಾಕ್ಯದಡಿ ಪ್ರಸಾÀರ ವಾಗುತ್ತಿರುವ ಈ ಸರಕಾರಿ ಸಂಸ್ಥೆಯ ಕಾರ್ಯಕ್ರಮಗಳು ದೇಶದ 419 ಕೆಂದ್ರದ ಮೂಲಕ ಬಿತ್ತರವಾಗುತ್ತಿವೆ. ಇದು ದೇಶದ ಶೇಕಡ 92 ಭಾಗವನ್ನು ದೇಶದ ಜನತೆಯ 99.19 ಸರಾಸರಿ ಜನತೆ ಯನ್ನು ತಲುಪುತ್ತಿದೆ. 23 ಭಾಷೆಗಳಲ್ಲಿ ಆಕಾಶವಾಣಿಯು ತನ್ನ ಕಾರ್ಯಕ್ರಮವನ್ನು ಪ್ರಸರಿಸುತ್ತಿದೆ. ಇದರ ಕಾರ್ಯಕ್ರಮಗಳನ್ನು ಆಲಿಸ ಬೇಕಾದಲ್ಲಿ ಆಲ್ ಇಂಡಿಯಾ ರೇಡಿಯೋ ಡಾಟ್ ಜಿಓವಿ ಡಾಟ್ ಇನ್‍ಗೆ ಲಾಗ್ ಇನ್ ಆಗಿ. ಬೇಕಾದ ಕೇಂದ್ರಗಳನ್ನು ಕ್ಲಿಕ್ ಮಾಡಿ. ಇದರಲ್ಲಿ ಪ್ರಮುಖ ಕೇಂದ್ರಗಳ ಕಾರ್ಯಕ್ರಮಗಳನ್ನು ಸಲೀಸಾಗಿ ಆಲಿಸಬಹುದು. ರಾಗಂ, ಎಫ್‍ಎಂ ಗೋಲ್ಡ್-ದೆಹಲಿ, ಎಫ್‍ಎಂ ರೈನ್ ಬೋ-ದೆಹಲಿ, ಮುಂಬೈ ವಿವಿಧ ಭಾರತಿ, ಉರ್ದು, ಗುಜರಾತಿ, ಮಲೆಯಾಳಂ, ಮರಾಠಿ, ಬಾಂಗ್ಲಾ, ತೆಲುಗು ಕನ್ನಡ, ಕಾರ್ಯಕ್ರಮಗಳನ್ನು ನೇರ ಪ್ರಸಾರದಲ್ಲಿ ಕೇಳಬಹುದು. ಮೊಬೈಲ್ ಅಪ್‍ಗಳ ಮುಖಾಂತರವೂ ಆಕಾಶವಾಣಿ ಕಾರ್ಯಕ್ರಮ ಗಳನ್ನು ಸಲೀಸಾಗಿ ಆಲಿಸಬಹುದಾಗಿದೆ.

? ಕೂಡಂಡ ರವಿ.