*ಗೋಣಿಕೊಪ್ಪಲು, ಫೆ. 9 : ಶಿಥಿಲ ವ್ಯವಸ್ಥೆಯ ಕಟ್ಟಡ ಎಂಬ ಕಾರಣಕ್ಕೆ ಗ್ರಾ.ಪಂ. ಸದಸ್ಯರೊಬ್ಬರೇ ಏಕ ನಿರ್ಧಾರ ಕೈಗೊಂಡು ಕಟ್ಟಡ ಕೆಡವಲು ಮುಂದಾಗಿರುವದು ಕಾನೂನು ಬಾಹಿರ ಎಂದು ಜಿ.ಪಂ. ಸದಸ್ಯ ಸಿ.ಕೆ ಬೋಪಣ್ಣ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಆಸ್ತಿಯನ್ನು ನಷ್ಟ ಮಾಡಿದ ಗ್ರಾ.ಪಂ. ಸದಸ್ಯನ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಡಿಸೆಂಬರ್ 26ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಲು ಜಿಲ್ಲಾ ಪಂಚಾಯಿತಿ 13ನೇ ಹಣಕಾಸು ಯೋಜನೆಯಲ್ಲಿ ಬಂದಿರುವ 20 ಲಕ್ಷ ಅನುದಾನವನ್ನು ಬಳಸಿಕೊಂಡು ಹೈಟೆಕ್ ಶೌಚಾಲಯ ನಿರ್ಮಿಸಲು ನಿರ್ಧರಿಸಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿರುವ ಯಾವದೇ ಸಾರ್ವಜನಿಕರು, ಕಟ್ಟಡವನ್ನು ಕೆಡವಲು ಅಥವಾ ನಿರ್ಮಿಸಲು ಅನುಮತಿಯನ್ನು ಪಡೆಯಬೇಕು. ಆದರೆ ಈ ಕಟ್ಟಡವು ಗ್ರಾಮ ಪಂಚಾಯಿತಿಯಿಂದ ನಿರ್ಮಾಣವಾಗಿರುವದರಿಂದ ಈ ಕಟ್ಟಡವನ್ನು ಕೆಡವಲು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದ್ದರೂ ಕಟ್ಟಡ ಕೆಡವಲು ಸರಕಾರದ ಇಂಜಿನಿಯರ್ ಅವರಿಂದ ಪಟ್ಟಿಯನ್ನು ತಯಾರಿಸಿ ಅನುಮೋದನೆಯನ್ನು ಪಡೆದು ಅಭಿವೃದ್ದಿ ಅಧಿಕಾರಿಯವರಿಂದ ಶಿಫಾರಸ್ಸನ್ನು ಅಧ್ಯಕ್ಷರ ಮುಖಾಂತರ ಕಾರ್ಯನಿರ್ವಹಣಾಧಿಕಾರಿಯವರ ಮುಖಾಂತರ ಕಳುಹಿಸಿ ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದುಕೊಂಡಿರುವದಿಲ್ಲ. ಗ್ರಾ.ಪಂ. ಸದಸ್ಯ ಮುರುಗ ತಾನೇ ಏಕ ನಿರ್ಧಾರ ಕೈಗೊಂಡು ಕಟ್ಟಡ ಕೆಡವಲು ಮುಂದಾಗಿರುವದು ವಿಷಾದನೀಯ ಎಂದರು.

ಕಟ್ಟಡ ಕೆಡವುವ ಸಂದರ್ಭ ಜೀವ ಹಾನಿಯಾಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಕಟ್ಟಡ ಕೆಡವಲು ಯಾವದೇ ಕಾನೂನು ರೀತಿಯಾದ ಖಡತವನ್ನು ಮಾಡದೇ ಏಕಾಎಕಿ ಮುರುಘÀ ಹಾಗೂ ಮಂಜುಳ ನಮ್ಮ ವಾರ್ಡಿಗೆ ಸಂಬಂಧಿಸಿದ್ದು ಎಂದು ಕಟ್ಟಡವನ್ನು ಕೆಡವಿ ಹಾಕಿದ್ದಾರೆ, ಕಾನೂನು ರೀತಿಯಲ್ಲಿ ಯಾವದೇ ಪ್ರಕ್ರಿಯೆ ಮಾಡಿಕೊಳ್ಳದೇ ವಿನಾಃಕಾರಣ ಗ್ರಾ.ಪಂ. ಅಧ್ಯಕ್ಷೆ ಮತ್ತು ಜಿ.ಪಂ. ಸದಸ್ಯನಾದ ತÀನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಸರಕಾರಕ್ಕೆ ಆದ ನಷ್ಟವನ್ನು ಇವರ ಕೈಯಿಂದ ಭರಿಸಿಕೊಳ್ಳಬೇಕು. ಯಾವದೇ ರೀತಿಯಾದ ಅಪಾದನೆ ಮಾಡುವದಕ್ಕಿಂತ ಮೊದಲು ವಿಷಯದ ಬಗ್ಗೆ ಅರಿತು ಮಾತನಾಡಬೇಕು ಎಂದು ಹೇಳಿದರು.

ಭಾಜಪ ಸರಕಾರವಿದ್ದಾಗ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗೆ ಏಳು ಕೋಟಿ ಅನುದಾನ ಬಂದು ಬಹಳಷ್ಟು ಅಭಿವೃದ್ಧಿಯಾಗಿದೆ. ಆದರೆ ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷಗಳು ಕಳೆದಿದ್ದು, ಯಾವದೇ ಅನುದಾನ ಬಂದಿರುವದಿಲ್ಲ. ಇದೇ ಅವರ ಅಭಿವೃದ್ಧಿಯ ಸಾಧನೆ ಎಂದು ಹೇಳಿದರು.

ತಾನು ಕಾನೂನು ರೀತಿಯಲ್ಲಿ ಕೇಳಿದಾಗ ಮಂಜುಳ ಅವರಿಗೆ ಮಾನಸಿಕ ಹಿಂಸೆಯಾಗುವದಾದರೆ, ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಕಾನೂನು ಅರಿವು ಇಲ್ಲದಿರುವದು ಹಾಸ್ಯಾಸ್ಪದ ವಿಚಾರ ಎಂದು ಹೇಳಿದರು. ಅಭಿವೃದ್ಧಿ ದೃಷ್ಟಿಯಿಂದ ತಾನೇ ಖುದ್ದು ಮುತುವರ್ಜಿ ವಹಿಸಿ ಟೆಂಡರು ಪ್ರಕ್ರಿಯೆಗೆ ಸಹಕರಿಸಿ ಅರ್ಮುಗಂ ಅವರಿಗೆ ಇ ಟೆಂಡರ್‍ನಲ್ಲಿ ಆಗಿರುತ್ತದೆ. ಅವರಿಗೆ ಬೆದರಿಕೆ ಹಾಕುವದು ನನ್ನ ಸಂಸ್ಕೃತಿಯಲ್ಲ ಎಂದರು.

ಈ ಕಟ್ಟಡವನ್ನು 20 ವರ್ಷಕ್ಕೆ ತೆರವು ಮಾಡುವದಾದರೆ ಗೋಣಿಕೊಪ್ಪಲುವಿನ ಬೇರೆ ಕಟ್ಟಡಕ್ಕೆ 20 ವರ್ಷಗಳು ಕಳೆದಿವೆ. ಈ ಕಟ್ಟಡವನ್ನು ಸಹ ಅನುಮತಿಯಿಲ್ಲದೆ ಕೆಡವಲು ಇವರು ಸಿದ್ಧರಿದ್ದಾರಾ ಎಂದು ಬಹಿರಂಗವಾಗಿ ಹೇಳಿಕೆ ನೀಡಲಿ. ಸಂಬಂಧಪಟ್ಟ ಅಧಿಕಾರಿಗಳ ಸೂಕ್ತ ಕಾನೂನು ರೀತಿಯಲ್ಲಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಕಾನೂನು ಅಡಿಯಲ್ಲಿ ಹೋರಾಟ ಮಾಡುವದಾಗಿ ಹೇಳಿದರು.