ಗೋಣಿಕೊಪ್ಪಲು, ಫೆ. 9: ವೀರಾಜಪೇಟೆ ತಾಲೂಕು ಮಟ್ಟದ ಕಿರಿಯರ ಕಬಡ್ಡಿ ಪಂದ್ಯಾಟದಲ್ಲಿ ಕುಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕಂಡಂಗಾಲ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಡಚಿಬಾಣೆ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಜರುಗಿದ ಕಬಡ್ಡಿ ಅಂತಿಮ ಪಂದ್ಯದಲ್ಲಿ ಬೇಗೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ತಂಡವನ್ನು ಕುಂದ ಶಾಲಾ ಬಾಲಕರು ಸೋಲಿಸಿ ಪ್ರಶಸ್ತಿಗೆ ಭಾಜನರಾದರು.