ಮಡಿಕೇರಿ, ಫೆ. 9: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಹಕಾರದಿಂದ ಆರ್ಥಿಕ ಶಿಕ್ಷಣ ಆಂದೋಲನ ಅಂಗವಾಗಿ ಆರ್ಥಿಕ ಶಿಕ್ಷಣ-ಆರ್ಥಿಕ ಸೇರ್ಪಡೆ ಕುರಿತು ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ಆರಂಭಗೊಂಡಿದ್ದು, ರತ್ನಾವಳಿ ನಾಟ್ಯ ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಆರ್ಥಿಕ ಸೇವೆಗಳನ್ನು ಪ್ರತಿ ಗ್ರಾಮದ ಜನಸಾಮಾನ್ಯರ ಮನೆ ಬಾಗಿಲಿಗೆ ತಲಪಿಸಲು ಆರ್ಥಿಕ ಶಿಕ್ಷಣ-ಆರ್ಥಿಕ ಸೇರ್ಪಡೆ ಕಾರ್ಯಕ್ರಮವನ್ನು ನಬಾರ್ಡ್ ವತಿಯಿಂದ ಹಮ್ಮಿಕೊಂಡಿದೆ.
ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಆರ್ಥಿಕ ಸೇವೆಗಳನ್ನು ತಲಪಿಸಲು ಬ್ಯಾಂಕಿನ ಅಧಿಕೃತ ವ್ಯವಹಾರ ಪ್ರತಿನಿಧಿಗಳನ್ನು ನೇಮಿಸುವ ಯೋಜನೆಯನ್ನು ಬ್ಯಾಂಕ್‍ಗಳು ಹಮ್ಮಿಕೊಂಡಿದೆ. ಹಾಗೂ ಪ್ರಧಾನಮಂತ್ರಿ ಜನಧನ ಯೋಜನೆ ಮತ್ತು ಸ್ವಚ್ಛ ಭಾರತ್ ಅಭಿಯಾನ ಕುರಿತ ಜಾಗೃತಿ ಕಾರ್ಯಕ್ರಮ ತಾ. 10 ರಂದು ಚೇಲವಾರ, ಕಾಟಗೇರಿ, ಕುಂಜಿಲ, ತಾ. 11 ರಂದು ಮೇಲ್ಚೆಂಬು, ನಲ್ಕರೆ, ನೆಮ್ಮಲೆ, ನಿಟ್ಟೂರು, ತಾ. 13 ರಂದು ಬಿರುನಾಣಿ, ಹುದಿಕೇರಿ, ಟಿ. ಶೆಟ್ಟಿಗೇರಿ, ವಿ. ಬಾಡಗ, ತಾ. 14 ರಂದು ಶ್ರೀಮಂಗಲ, ಕುಟ್ಟ, ಪಾಲಿಬೆಟ್ಟ, ಚೆಟ್ಟಳ್ಳಿ, ಸಿದ್ದಲಿಂಗಾಪುರ, ತಾ. 15 ರಂದು ಕಂಬಿಬಾಣೆ, ಬೈಚನಹಳ್ಳಿ, ಬಸವನಹಳ್ಳಿ, ತಾ. 16 ರಂದು ಚೌಡ್ಲು, ಗರಗಂದೂರು, ಹಾನಗಲ್ಲು, ಹೆಬ್ಬಾಲೆ ಗ್ರಾಮಗಳಲ್ಲಿ ಬೀದಿ ನಾಟಕ ಕಾರ್ಯಕ್ರಮ ನಡೆಯಲಿದೆ.