ಮಡಿಕೇರಿ, ಫೆ. 9: ಜಿಲ್ಲೆಯ ಬಡ ಮತ್ತು ಅನಾಥ ಮುಸ್ಲಿಂ ಯುವತಿಯರ ಸಾಮೂಹಿಕ ವಿವಾಹವನ್ನು ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯು ಇದೀಗ ತನ್ನ ಕಾರ್ಯ ಸಾಧನೆಯ 11 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, 2017 ಏಪ್ರಿಲ್ 23 ರಂದು ನಗರದ ಕಾವೇರಿ ಹಾಲ್‍ನಲ್ಲಿ ಸಾಮೂಹಿಕ ವಿವಾಹವನ್ನು ಉಚಿತವಾಗಿ ನಡೆಸಿಕೊಡಲು ನಿರ್ಧರಿಸಿದೆ. ಇದಕ್ಕಾಗಿ ವಧುವಿನ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ವರ್ಷಕ್ಕೆ 25 ಯುವತಿಯರ ವಿವಾಹ ನಡೆಸಿ ಕೊಡುವ ಗುರಿ ಹಮ್ಮಿಕೊಂಡ ಅಲ್-ಅಮೀನ್ ಸಂಸ್ಥೆಯು ವರ್ಷ ಕಳೆದಂತೆ ತನ್ನ ಗುರಿ ಸಾಧನೆ ಮಾಡುತ್ತ ಮುನ್ನಡೆಯುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಒಟ್ಟು 303 ಮುಸ್ಲಿಂ ಯುವತಿಯರು ವೈವಾಹಿಕ ಜೀವನಕ್ಕೆ ಕಾಲಿರಿಸುವಲ್ಲಿ ಗಣನೀಯ ಸಾಧನೆ ಮಾಡಿದೆ.

ಪ್ರಸ್ತುತ ಈ ವರ್ಷದಲ್ಲಿಯೂ ಸಹ ವಧುವಿಗೆ ತಲಾ 40 ಗ್ರಾಂ ಚಿನ್ನಾಭರಣ ಹಾಗೂ ಒಂದು ಜೊತೆ ಉಡುಪು, ವರನಿಗೂ ಒಂದು ಜೊತೆ ಉಡುಪು ನೀಡಲಾಗುತ್ತದೆ. ಅರ್ಹರು ತಮಗೆ ಹತ್ತಿರದ ಸ್ಥಳದಿಂದ ಅರ್ಜಿ ನಮೂನೆ ಸ್ವೀಕರಿಸಿ ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿ ಫಾರಂ ಮತ್ತು ಲಗತ್ತುಗಳನ್ನು ಅಧ್ಯಕ್ಷರು ಅಲ್-ಅಮೀನ್, ಕೊಡಗು ಜಿಲ್ಲಾ ಸಮಿತಿ, ಮಡಿಕೇರಿ ಇವರಿಗೆ ಮಾರ್ಚ್ 30 ರೊಳಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9902108658, 9845986533 ನ್ನು ಸಂಪರ್ಕಿಸಬಹುದು.

ಅರ್ಜಿಯನ್ನು ಮಡಿಕೇರಿಯ ಫೈವ್ ಸ್ಟಾರ್ ವಾಚ್ ಅಂಗಡಿ, ಖಾಸಗಿ ಬಸ್ ನಿಲ್ದಾಣ, ಮೊ.9844534743, ವೀರಾಜಪೇಟೆ: ನೌಫಲ್, ಗ್ರೀನ್ ಲ್ಯಾಂಡ್ ಬನಾನಾ, ಮಟನ್ ಮಾರ್ಕೆಟ್ ರಸ್ತೆ, ಮೊ. 9035186513, ಸೋಮವಾರಪೇಟೆ ಬಶೀರ್, ಹೊಟೇಲ್ ಗಣೇಶ್ ದರ್ಶಿನಿ, ಖಾಸಗಿ ಬಸ್ ನಿಲ್ದಾಣ, ಮೊ.9448585556, ಗೋಣಿಕೊಪ್ಪಲು: ಬಶೀರ್ ಹಾಜಿ, ಟೈಂ ವಿಷನ್ ವಾಚ್ ಅಂಗಡಿ, ಮೊ: 9448647668, ನೆಲ್ಲಿಹುದಿಕೇರಿ: ಎ.ಕೆ. ಹಕೀಂ, ಗ್ರಾ.ಪಂ. ಮಾಜಿ ಅಧ್ಯಕ್ಷರು ಮೊ. 9448354568, ಮೂರ್ನಾಡು: ಕ್ವಾಲಿಟಿ ಕೋಲ್ಡ್ ಸ್ಟೋರ್ಸ್, ಬಸ್ ನಿಲ್ದಾಣ, ಫೋ. 08272-232557, ಸುಂಟಿಕೊಪ್ಪ: ಆರ್. ಹಸನ್ ಕುಂಞ ಹಾಜಿ, ಕೆಇಬಿ ಹತ್ತಿರ, 2ನೇ ಬ್ಲಾಕ್, ಮೊ; 9886863045, ನಾಪೋಕ್ಲು: ಟಿ.ಎ. ಹನೀಫಾ, ಸ್ಟಾರ್ ಸರ್ವೀಸ್ ಸ್ಟೇಷನ್, ಮೊ.9980159825, ಕೊಟ್ಟಮುಡಿ: ಪಿ.ಎಂ. ಹುಸೇನ್ (ಉಂದಾರು) ಮೊ. 9900750112, ಕುಶಾಲನಗರ ಕೆ.ಎ. ರಹಮುಲ್ಲಾ, ಜೀಬಾ ಡ್ರೆಸಸ್, ಗಿರಿಜಾ ಕಾಂಪ್ಲೆಕ್ಸ್, ರಥಬೀದಿ ಮೊ. 9900500184 ಹಾಗೂ ಕೊಡ್ಲಿಪೇಟೆ ಅಬ್ದುಲ್ ರಹಿಮಾನ್, ಹ್ಯಾಂಡ್ ಪೋಸ್ಟ್, ಮೊ. 9900500561 ಅನ್ನು ಸಂಪರ್ಕಿಸಬಹುದಾಗಿದೆ.