ಗೋಣಿಕೊಪ್ಪಲು, ಫೆ. 9: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ 10ರಂದು ಪೂರ್ವಾಹ್ನ 10.30 ಗಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಯಾದ ತಾಲೂಕು ದಂಡಾಧಿಕಾರಿ ಮಹದೇವಸ್ವಾಮಿ ತಿಳಿಸಿದ್ದಾರೆ.ಸದಸ್ಯರುಗಳು 10.30 ರಿಂದ 11.30ರವರೆಗೆ ಹಾಜರಾತಿ, 11 ರಿಂದ 11.30 ನಾಮಪತ್ರ ಸಲ್ಲಿಕೆ, 11.30 ರಿಂದ 11.45 ನಾಮಪತ್ರಪರಿಶೀಲನೆ 11.45ರಿಂದ 12.15ರ ವರೆಗೆ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುವದು, 12.15ಕ್ಕೆ ಚುನಾವಣೆ ನಡೆಯಲಿದೆ ಎಂದರು. ಸಮಿತಿಯು 11 ಕ್ಷೇತ್ರಗಳನ್ನು ಬಿ.ಜೆ.ಪಿ ತನ್ನದಾಗಿಸಿಕೊಂಡಿದ್ದು, ಕೆ.ಯು. ಭೀಮಣಿ, ಅಯ್ಯಪ್ಪ ಜೆ.ಕೆ, ಎಂ.ಡಿ. ಗಣಪತಿ, ಹೆಚ್.ಎನ್ ಮೋಹನ್ ರಾಜ್, ನಾಮೇರ ಧರಣಿ, ಚಿಯಕ್ ಪೂವಂಡ ಜಿ. ಸುಬ್ರಮಣಿ, ಆದೇಂಗಡ ಚಂಗಪ್ಪ ಮೇದಪ್ಪ, ಪೂಣಚ್ಚ, ಅಜ್ಜಿಕುಟ್ಟೀರ ಎಂ.ಮುತ್ತಪ್ಪ, ಕೆ.ಪಿ. ಬಾಲಕೃಷ್ಣ, ಬೊಳ್ಳಜೀರ ಸುಶೀಲಾ ಆಯ್ಕೆಯಾಗಿದ್ದು, ಸರಕಾರದಿಂದ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ಅವರನ್ನು ನಾಮನಿರ್ದೇಶನಗೊಂಡಿದ್ದಾರೆ ಎಂದು ತಿಳಿಸಿದರು.