ವೀರಾಜಪೇಟೆ, ಫೆ.9: ವೀರಾಜಪೇಟೆ ಪ.ಪಂ.ಯ 2017-18ನೇ ಸಾಲಿಗೆ ಒಟ್ಟು 15,17,37000 ಆದಾಯ ನಿರೀಕ್ಷಿಸಿದ್ದು, ಎಲ್ಲ ವೆಚ್ಚಗಳನ್ನು ಕಳೆದು ರೂ 17,88000 ಉಳಿತಾಯ ಬಜೆಟ್‍ಗೆ ಸಭೆ ಸರ್ವಾನುವiತದ ಅಂಗೀಕಾರ ನೀಡಿದೆ.ಪ.ಪಂ. ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯವಸ್ಥಿತ ಕುಡಿಯುವ ನೀರಿನ ಪೂರೈಕೆ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ¨ಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ. ಆದರೆ 2016-17ರಲ್ಲಿ ಒಟ್ಟು 39,49,729 ಉಳಿತಾಯ ಬಜೆಟ್‍ಗೆ ಅಂಗೀಕಾರ ನೀಡಿದ್ದು ಈ ಬಾರಿ ಉಳಿತಾಯದಲ್ಲಿ ರೂ. 21,61,729 ಈ ವರ್ಷಕ್ಕೆ ಖೋತಾ ಆಗಿದೆ.

ವೀರಾಜಪೇಟೆ ಪ.ಪಂ.ಗೆ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ, ಆಸ್ತಿ ತೆರಿಗೆ, ಉದ್ದಿಮೆ ರಾಜಸ್ವ ಆದಾಯ ಸೇರಿ ಒಟ್ಟು ರೂ 11,12.35000 ಆದಾಯ ನಿರೀಕ್ಷಿಸಲಾಗಿದ್ದು ಆರಂಭ ಶಿಲ್ಕು ಸೇರಿದಂತೆ ಒಟ್ಟು ರೂ 15,17,37,000 ಆದಾಯ ಬರಲಿದೆ. ಈ ಪೈಕಿ ಸಿಬ್ಬಂದಿಗಳ ವೇತನ, ನೀರು ಪೂರೈಕೆಯ ವೆಚ್ಚ, ದುರಸ್ತಿ ವೆಚ್ಚ, ಸ್ವಚ್ಛತೆ ಸೇರಿ ಒಟ್ಟು 14,99,49000 ವೆಚ್ಚವಾಗಲಿದೆ.

(ಮೊದಲ ಪುಟದಿಂದ) ಉಳಿದ ಮೊಬಲಗು ಉಳಿತಾಯ ಬಜೆಟ್‍ಗೆ ಸೇರಲಿದೆ. ಸರಕಾರದಿಂದ ಬರುವ ನಿರೀಕ್ಷಿತ ಅನುದಾನದಲ್ಲಿ ರೂ ಒಂದು ಕೋಟಿ ನಲ್ವತ್ತು ಲಕ್ಷ ಎಪ್ಪತ್ತೈದು ಸಾವಿರವನ್ನು 16 ವಾರ್ಡ್‍ಗಳ ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಕುಟ್ಟಯ್ಯ ಅವರು ನಿರೀಕ್ಷಿತ ಆದಾಯ, ನಿರೀಕ್ಷಿತ ವೆಚ್ಚವನ್ನು ಪರಾಮರ್ಶಿಸಿ 2017-18ರ ಉಳಿತಾಯ ಬಜೆಟ್ ತಯಾರಿಸಲಾಗಿದೆ. ಈ ಬಾರಿ ಮಲೆತಿರಿಕೆ ಬೆಟ್ಟದಲ್ಲಿ ಒಂದುಕಾಲು ಎಕರೆ ಜಾಗದಲ್ಲಿ ಅಂದಾಜು ಎರಡು ಕೋಟಿ ವೆಚ್ಚದಲ್ಲಿ ಪ್ರವಾಸಿಗರಿಗಾಗಿ ಬಟರ್‍ಪ್ಲೈ ಉದ್ಯಾನವನ ಹಾಗೂ “ವ್ಯೂ ಪಾಯಿಂಟ್”ನ ಆಕರ್ಷಕ ಪ್ರವಾಸಿಗರ ತಾಣದ ಕಾಮಗಾರಿಗೆ ಚಾಲನೆ ನೀಡಲು ಚಿಂತಿಸಲಾಗಿದೆ ಎಂದರು.

ಬಜೆಟ್ ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ ಸುನೀತಾ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಎನ್.ಪಿ.ಹೇಮ್ ಕುಮಾರ್, ಪಂಚಾಯಿತಿ ಸಿಬ್ಬಂದಿಗಳು, ಪಂಚಾಯಿತಿ ಮಹಿಳಾ ಸದಸ್ಯರುಗಳು ಸೇರಿದಂತೆ ಎಲ್ಲ ಸದಸ್ಯರುಗಳು ಹಾಜರಿದ್ದರು.