ಮಡಿಕೇರಿ, ಫೆ. 9: ಆರ್ಟ್ರೇಜ್ ಅನ್ನುವ ಆಂಬಿಯಂಟ್ ಡಿಸೈನ್, ನ್ಯೂಜಿಲ್ಯಾಂಡ್ನ ಡಿಜಿಟಲ್ ಸಾಫ್ಟ್ವೇರ್ ಸಂಸ್ಥೆಯು ಇತ್ತೀಚೆಗೆ ನಡೆಸಿದ ಅಂತರ್ರಾಷ್ಟ್ರೀಯ ಮಟ್ಟದ ‘ಅರ್ಟ್ ರೇಜ್ ಕಾಂಟೆಸ್ಟ್ 5ನೇ ಡಿಜಿಟಲ್ ಚಿತ್ರಕಲಾ ಸ್ಪರ್ಧೆಯಲ್ಲಿ ಒಟ್ಟು 238 ಕಲಾಕೃತಿಗಳು ಬಂದಿದ್ದು, ಅದರಲ್ಲಿ ಅತ್ಯುತ್ತಮ ಐದು ಕಲಾಕೃತಿಯನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಕೊಡಗಿನ ಚಿತ್ರ ಕಲಾವಿದ ಬಿ.ಆರ್. ಸತೀಶ್ ಅವರ ಕಲಾಕೃತಿಯು ಒಂದಾಗಿದೆ.
ಅಂತರ್ರಾಷ್ಟ್ರೀಯ ಮಟ್ಟದ ಟಾಪ್ ಐದರಲ್ಲಿ ಇವರ ಕಲಾಕೃತಿಯನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗಿದೆ. ಸಂಸ್ಥೆಯು ಇವರಿಗೆ ನೂತನವಾಗಿ ಬಿಡುಗಡೆ ಮಾಡಿದ 79 ಡಾಲರ್ನ ಮೊತ್ತದ ಆರ್ಟ್ರೇಜ್ 5 ಅನ್ನುವ ಡಿಜಿಟಲ್ ಪೈಂಟಿಗ್ ಸಾಫ್ಟ್ವೇರ್ (ವಿಂಡೋಸ್)ನ್ನು ಬಹುಮಾನವಾಗಿ ನೀಡಲಾಯಿತು.
‘ಇಂಡಿಯನ್ ವಿಲೇಜ್’ ಈ ಚಿತ್ರ ಕಲಾಕೃತಿಯನ್ನು ಆ್ಯಪಲ್ನ ಐಪ್ಯಾಡ್ನಲ್ಲಿ ಹಾಗೂ ಆರ್ಟ್ರೇಜ್ನ ಸಾಫ್ಟ್ವೇರ್ನಲ್ಲಿ ರಚನೆ ಮಾಡಲಾ ಗಿತ್ತು. ಇವರು ಪ್ರಸ್ತುತ ಚಿತ್ರಕಲಾ ಶಿಕ್ಷಕರಾಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗೋಣಿಕೊಪ್ಪಲುವಿ ನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.