ಮಡಿಕೇರಿ, ಫೆ. 9: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 - 342 ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ನಕ್ಸಲ್ ಮಾವೊವಾದಿ ರೆಡ್ ಕಾರಿಡಾರ್ - ಐಎಸ್‍ಐಎಸ್ ವಾದಿಗಳ ಗ್ರೀನ್ ಘಜ್ವಾ ತುರ್ ಹಿಂದ್ ಕಾರಿಡಾರ್ ಪಿತೂರಿಯ ಮೂಲಕ ಕೊಡವ ಕುಲವನ್ನು ಮೂಲೋತ್ಪಾಟನೆ ಮಾಡಲು ಹೊಂಚು ಹಾಕುತ್ತಿರುವ ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಿಸಬೇಕು, ಅದಕ್ಕಾಗಿ ಕೊಡವರಿಗೆ ಸಂವಿಧಾನ ಖಾತ್ರಿ ಬೇಕೆಂದು ಅಗ್ರಹಿಸಿ ಚೇರಂಬಾಣೆಯ ಕೊಡವ ಸಮಾಜದಲ್ಲಿ ಸಿ.ಎನ್.ಸಿ ಆಶ್ರಯದಲ್ಲಿ ಜನಜಾಗೃತಿ ಸಭೆ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಡೆಯಿತು.
ಕೊಡವರ ಸಂಸ್ಕøತಿ, ಭಾಷೆ, ಆರಾಧನಾ ಪದ್ಧತಿ, ಉಡುಗೆ ತೊಡುಗೆ, ಜನಪದ ಕಾಯ್ದೆ ಲಾವಣಿ ಮತ್ತು ಗುಡ್ಡಗಾಡಿನಲ್ಲಿ ವಾಸ ಕುಟುಂಬ ವ್ಯವಸ್ಥೆ, ಹುಟ್ಟು, ಮರಣ, ಮದುವೆ ಆಚರಣೆ, ಬೇಟೆ, ಸಮರ ಕಲೆ ಇದೆಲ್ಲವೂ ಬುಡಕಟ್ಟು ನಡವಳಿಕೆ ಆಗಿದ್ದು, ಬುಡಕಟ್ಟು ಪಟ್ಟಿಗೆ ಸೇರಲು ಅರ್ಹ ಮಾನದಂಡವಾಗಿದೆ. ನಮ್ಮ ಪೂರ್ವಾರ್ಜಿತ ಆಸ್ತಿ, ಅಂಗ ಸೌಷ್ಠವ, ಸೌಂದರ್ಯ ಇದ್ಯಾವದೂ ಕೊಡವ ಬುಡಕಟ್ಟು ಕುಲವನ್ನು ಶೆಡ್ಯೂಲ್ ಪಟ್ಟಿಗೆ ಸೇರಲು ಅಡಚಣೆ ಆಗುವದಿಲ್ಲವೆಂದು ನಾಚಪ್ಪ ನುಡಿದರು.
ಕಾರ್ಯಕ್ರಮದಲ್ಲಿ ತೇಲಪಂಡ ಕರ್ನಲ್ ಮುತ್ತಪ್ಪ. ತೇಲಪ್ಪಂಡ ಶಂಭು ಅಪ್ಪಯ್ಯ, ಅಜ್ಜಿನಂಡ ಪಾಪಣ್ಣ, ತೇಲಪಂಡ ಗಣೇಶ್, ಅಳಮಂಡ ಮೋಹನ್, ಕೊಟ್ಟ್‍ಕತ್ತಿರ ಸಾಬು, ಅಯ್ಯಂಡ ಸತೀಶ್, ಚೆಡಿಯಂಡ ಲವ, ಕೇಕಡ ಸುರಿ,ಕಾಡಂಡ ಅಪ್ಪಸ್ವಾಮಿ, ಬಾಚಿರಣಿಯಂಡ ದಿನೇಶ್, ಪಟ್ಟಮಾಡ ಹೇಮ, ಅಪ್ಪಚೆಟ್ಟೊಳಂಡ ಜಿಮ್ಮ, ಪಟ್ಟಮಾಡ ರಾಣಿ, ಅಳಮಂಡ ಅಮಿತ, ತೇಲಪಂಡ ಲಕ್ಷ್ಮಿ, ಪಟ್ಟಮಾಡ ನಯನ, ಪಟ್ಟಮಾಡ ವನಿತ, ಬೊಳ್ಳಾರ್ಪಂಡ ಸಾಬು, ಕುಟ್ಟೆಟಿ ಕುಂಞಪ್ಪ, ಮಂದಪಂಡ ಮನೋಜ್, ಮಂದಪಂಡ ಸೂರಜ್, ಅಳಮಂಡ ಜೈ, ಅಳಮಮಡ ನೆಹರು, ಬಾಚಿರಣಿಯಂಡ ಹ್ಯಾರಿ, ಪಟ್ಟಮಾಡ ಕುಶ, ಬೊಪ್ಪಡ್ತಂಡ ಹರೀಶ್ ಮುಂತಾದವರು ಭಾಗವಹಿಸಿದ್ದರು.