ವಿಶ್ವದ ಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ ಜಾನಪದ ಸಿರಿ ಸಂಪತ್ತಿನ ಕಣಜವೇ ಇದೆ. ನಾಗರೀಕತೆ ಬೆಳೆದಂತೆ ಜನಪದ ಸಂಸ್ಕøತಿಯಲ್ಲಿ ಅಲ್ಪ-ಸ್ವಲ್ಪ ಪರಿವರ್ತನೆ ಆಗುತ್ತದೆ. ಒಂದು ನಿರ್ದಿಷ್ಟ ಜನಾಂಗವನ್ನು ಗುರುತಿಸಲು ಇರುವ ಮಾನದಂಡ ಅದರಲ್ಲಿ ಮಿಳಿತವಾಗಿರುವ ಜಾನಪದ ಸಿರಿ ಸಂಪತ್ತು. ಕಥೆ ಹಾಡುಗಳಿಗೆ ಜಾನಪದವನ್ನು ಸೀಮಿತಗೊಳಿಸಿ ಬಿಟ್ಟರೆ ಸಾಲದು.
ಪ್ರೋ ಸ್ಮಿಥ್ ಧಾಮ್ಸನ್ ಎಂಬವರು ಜಾನಪದ ಕ್ಷೇತ್ರದ ತುಂಬಾ ಅಧ್ಯಯನ ನಡೆಸಿ ವ್ಯಾಖ್ಯಾನಿಸಿದ ತಜ್ಞ ಪ್ರೋ. ಸ್ಮಿಥ್ಥಾಮ್ಸನ್ ಜಾನಪದವನ್ನು ಎರಡು ಭಾಗ ಮಾಡುತ್ತಾರೆ.
ಭಾಗ 1 : ಕಥೆಗಳು, ಹಾಡುಗಳು, ಪ್ರೇಮಗೀತೆಗಳು, ದುಡಿಮೆಯ ವೇಳೆ ಹಾಡುವ ಹಾಡುಗಳು, ಆಟಗಳಿಗೆ ಸಂಬಂಧಿಸಿದ ಹಾಡುಗಳು ಶಿಶುಗೀತೆಗಳು, ಒಗಟುಗಳು, ವಿಧಾನ, ಬೀಳ್ಕೊಡುವ ವಿಧಾನ, ಉಡುಪು, ತೊಡುಪು, ಜನಪದ ವಾದ್ಯ ಸಂಗೀತ, ಚಿಕ್ಕ ಮಕ್ಕಳ ಲಾವಣಿ, ಜನಪದ ಉಪಮಾನ, ಜನಪದ ಅಲಂಕಾರ ಕ್ರೀಡೆಗಳು, ತರತರದ ಅಡುಗೆ, ಮಂತ್ರ ತಂತ್ರ ವಿದ್ಯೆ ಕೈಗಾರಿಕೆಗಳು, ನೇಯ್ಗೆ, ಹಳ್ಳಿಗಳ ವೈದ್ಯ ಪದ್ಧತಿ, ಬೆರಳುಗಳನ್ನು ಬಳಸಿ ರಚಿಸಿಕೊಂಡ ಹಾಡುಗಳು, ಮನೆಕಟ್ಟುವ ವಿಧಾನಗಳು, ಬೇಲಿಕಟ್ಟುವ ವಿಧಾನಗಳು, ಧಾನ್ಯ ಸಂಗ್ರಹಿಸುವ ಉಗ್ರಾಣ, ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಹಿಡುಯುವ ವಿಧಾನ. ಕೊಡಗಿನಲ್ಲಿ ಜನಪದ ಕಲೆಯಲ್ಲಿ ನಾಲ್ಕು ಮೂಲದವುಗಳಿವೆ.
ಕೊಡಗು ಮೂಲದ್ದು, ಬಯಲು ಸೀಮೆ ಮೂಲದ್ದು, ಮಲೆಯಾಳ ಮೂಲದ್ದು, ತುಳುನಾಡು ಮೂಲದ್ದು.
-ಬಾಚರಣಿಯಂಡ ಅಪ್ಪಣ್ಣ, ಕುಶಾಲನಗರ.