ಶ್ರೀಮಂಗಲ, ಫೆ. 9: ಪೊನ್ನಂಪೇಟೆ ಸಮೀಪ ತೂಚಮಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ತೂಚಮಕೇರಿ ಗ್ರಾಮದ ಬೆಳೆಗಾರ ಚಿಂಡಮಾಡ ಅರುಣ್ ಮೊಣ್ಣಪ್ಪ ಅವರು ರೂ.25 ಸಾವಿರ ಹಾಗೂ ಕೋಳೆರ ಅಪ್ಪಯ್ಯ ಅವರು ರೂ. 5 ಸಾವಿರ ಮತ್ತು ಮೂಕಳೆರ ಕುಶಾಲಪ್ಪ ಅವರು ರೂ. 5 ಸಾವಿರ ಉದಾರವಾಗಿ ನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಕೋಳೆರ ಪದ್ಮ ತಿಳಿಸಿದ್ದಾರೆ.

ಚಿಕ್ಕಮುಂಡೂರು ಗ್ರಾಮದ ಬೆಳೆಗಾರ ಕಳ್ಳಿಚಂಡ ಮಧು ಅವರು ಸತತ 2 ವರ್ಷದಿಂದ ಶಾಲಾ ವಿದ್ಯಾರ್ಥಿಗಳನ್ನು ಮೈಸೂರಿನ ಪ್ರೇಕ್ಷಣೀಯ ಸ್ಥಳ, ಫ್ಯಾಂಟಸಿ ಪಾರ್ಕ್‍ಗಳಿಗೆ ತಮ್ಮ ಖರ್ಚಿನಲ್ಲಿಯೇ ಶೈಕ್ಷಣಿಕ ಪ್ರವಾಸ ಕರೆದೊಯ್ದು ಸಹಕಾರ ನೀಡಿದ್ದಾರೆ. ಇದೇ ಗ್ರಾಮದ ಚಿಮ್ಮಣಮಾಡ ಸೋಮಯ್ಯ ಅವರು ಪ್ರವಾಸದ ಸಮಯದಲ್ಲಿ ಉಪಹಾರದ ಖರ್ಚು ಭರಿಸಿದ್ದಾರೆ. ತೂಚಮಕೇರಿ ಗ್ರಾಮದ ಬೆಳೆಗಾರ ಚಿಂಡಮಾಡ ಮಂದಣ್ಣ ಅವರು ಶಾಲಾ ಶಾರದ ಪೂಜೆಯ ಸಕಲ ಖರ್ಚನ್ನು ಭರಿಸಿದ್ದಾರೆ. ಗೋಣಿಕೊಪ್ಪಲು ಜಯಲಕ್ಷ್ಮೀ ಜ್ಯುವೆಲ್ಲರಿ ಮಾಲೀಕ ಎಂ.ಜಿ. ಮೋಹನ್ ಹಾಗೂ ಸಹೋದರರು ಶಾಲೆಯ ಎಲ್ಲಾ 62 ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ವೆಟರ್ ವಿತರಿಸಿದ್ದಾರೆ. ಬಲ್ಯಮುಂಡೂರು ಗ್ರಾ.ಪಂ. ವತಿಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ ಒಂದು ಕೊಡೆಯನ್ನು ವಿತರಿಸಿದ್ದಾರೆ ಎಂದು ತಿಳಿಸಿದ್ದಾರೆ.