ನಾಪೆÇೀಕ್ಲು, ಫೆ. 9: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಜಾಂಡಿಸ್ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಟೈಫಾಯ್ಡ್ ಅದಕ್ಕೆ ಸಾಥ್ ನೀಡುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಬೇಕಾದ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಗ್ರಾಮ ಪಂಚಾಯಿತಿ ಜಾಣ ಕುರುಡು ಪ್ರದರ್ಶಿಸುತ್ತಿದ್ದು, ಸಾರ್ವಜನಿಕರು ಆತಂಕ ಗೊಂಡಿದ್ದಾರೆ.ಕಳೆದ 20 ದಿನಗಳ ಹಿಂದೆ ಕಾಣಿಸಿಕೊಂಡ ಜಾಂಡಿಸ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಮಾರು 300ರ ಗಡಿ ದಾಟಿದ ಬಗ್ಗೆ ತಿಳಿದು ಬಂದಿದೆ. ಅದರೊಂದಿಗೆ ಟೈಫಾಯ್ಡ್ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆ ಗಳಲ್ಲಿ ರೋಗಿಗಳಿಗೆ ಸ್ಥಳಾವಕಾಶ ವಿಲ್ಲದಂತಹ ಸ್ಥಿತಿ ಎದುರಾಗಿದೆ.

ಬೆಳಿಗ್ಗೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಅಸ್ವಸ್ಥಗೊಂಡು ಪೆÇೀಷಕರು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಶಾಲೆಯಿಂದ ದೂರವಾಣಿ ಕರೆ ಬರಬಹುದೆಂದು ಆತಂಕ ಹಲವು ಪೆÇೀಷಕರದ್ದಾಗಿದೆ.

ಆರೋಗ್ಯ ಇಲಾಖೆ ನಿರ್ಲಕ್ಷ್ಯ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಹಿರಿಯ ಆರೋಗ್ಯಾಧಿಕಾರಿಗಳು ತಮ್ಮ ಕೈ ಕೆಳಗಿನ ನೌಕರರಿಗೆ ಸೂಚನೆ ನೀಡಿದ್ದು ಬಿಟ್ಟರೆ ಉಳಿದಂತೆ ಯಾವದೇ ಬದಲಾವಣೆ ಯಾಗಿಲ್ಲ. ಪಟ್ಟಣದ ಚರಂಡಿಗಳು ಅಲ್ಲಲ್ಲಿ ಗಬ್ಬೆದ್ದು ನಾರುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಗ್ರಾ.ಪಂ. ಮೌನ: ಇಷ್ಟೆಲ್ಲ ನಡೆಯುತ್ತಿದ್ದರೂ ಇದಕ್ಕೂ ನಮಗೂ ಯಾವದೇ ಸಂಬಂಧವಿಲ್ಲ ಎನ್ನುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ವರ್ತಿಸುತ್ತಿದೆ. ಪಟ್ಟಣ ಸೇರಿದಂತೆ ಎಲ್ಲಾ ಚರಂಡಿಗಳೂ ದುರ್ನಾತ ಬೀರುತ್ತಿದೆ. ಶುದ್ಧೀಕರಿಸದೆ ನೀರನ್ನು ಹಾಗೆಯೇ ಪೂರೈಸಲಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.

ಜನಪ್ರತಿನಿಧಿಗಳಿಗೂ ಆಸಕ್ತಿ ಇಲ್ಲ: ಜಾಂಡಿಸ್ ಪ್ರಕರಣ ವರದಿ ಯಾಗುತ್ತಿದ್ದಂತೆ ಸಂಬಂಧಿಸಿದ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ. ಯಾವದಾದರೂ ಬದಲಾವಣೆ ಯಾಗಿದೆಯೇ ಎಂಬ ಬಗ್ಗೆ ಜನಪ್ರತಿನಿಧಿಗಳು ನಿಗಾ ವಹಿಸಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಕೆರೆಯಂತಾಗಿರುವ ಚರಂಡಿ: ಹಳೇ ತಾಲೂಕಿನ ಭಾಗಮಂಡಲ ರಸ್ತೆಯ ಚರಂಡಿಯಲ್ಲಿ ಕೊಳಚೆ ನೀರು ಸಂಗ್ರಹಗೊಂಡಿದ್ದು, ಕೆರೆಯಂತಾಗಿದೆ. ಈ ರಸ್ತೆಯ ಬದಿಯಲ್ಲಿ ವಸತಿ ಗೃಹಗಳು, ಮನೆಗಳು, ವಿದ್ಯಾರ್ಥಿಗಳ ವಸತಿ ಗೃಹಗಳು ಇರುವದರಿಂದ ಇವರಿಗೆ ರೋಗದ ಭೀತಿ ಎದುರಾಗಿದೆ. ಅದರೊಂದಿಗೆ ಇಲ್ಲಿರುವ ಖಾಸಾಗಿ ಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಮತ್ತು ಸಂಜೆ ಈ ಚರಂಡಿ ಬದಿಯಲ್ಲಿ ನಡೆದಾಡಲು ದುರ್ವಾಸನೆಯಿಂದ ಸಾಧ್ಯವಿಲ್ಲದಂತಾಗಿದೆ. ಸಮೀಪದ ಮನೆಯ ಬಾವಿಗೆ ಈ ಕೊಳಚೆ ಸೇರುತ್ತಿರುವ ಕಾರಣ ಬಾವಿಯ ನೀರನ್ನು ಉಪಯೋಗಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಿಸಿದವರು ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಇನ್ನೂ ಹೆಚ್ಚಿನ ರೋಗಗಳು ಹರಡುವ ಅಪಾಯವಿದೆ.

- ಪಿ.ವಿ. ಪ್ರಭಾಕರ್