ಶ್ರೀಮಂಗಲ, ಫೆ. 9: ಹುದಿಕೇರಿ ಗ್ರಾ.ಪಂ.ಕಚೇರಿಗೆ ಖಾಯಂ ಪಿ.ಡಿ.ಒ ಅವರನ್ನು ನೇಮಿಸುವವರೆಗೆ ಪಂಚಾಯ್ತಿ ಕಚೇರಿಯಲ್ಲಿ ನಡೆಯುವ ಯಾವದೇ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ದಿಲ್ಲ. ಕಚೇರಿಗೂ ಬಾರದೆ ಇರಲು ಹುದಿಕೇರಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತೀರ್ಮಾನ ಕೈಗೊಂಡಿದ್ದು, ಇದಕ್ಕೆ ಸ್ಪಂದಿಸದಿದ್ದರೆ ಪೊನ್ನಂಪೇಟೆ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಹುದಿಕೇರಿ ಗ್ರಾ.ಪಂ. ಕಚೇರಿ ಎದುರು ಖಾಯಂ ಪಿ.ಡಿ.ಓ.ಗೆ ಆಗ್ರಹಿಸಿ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಅಚ್ಯುತ್ತನ್ ಅವರ ನೇತೃತ್ವದಲ್ಲಿ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪಂಚಾಯ್ತಿ ಕಚೇರಿಗೆ ಬೀಗ ಜಡಿಯಲು ಮುಂದಾದ ಸಂದರ್ಭ ಶ್ರೀಮಂಗಲ ಠಾಣಾಧಿಕಾರಿ ಹೆಚ್.ಸಿ. ಸಣ್ಣಯ್ಯ ಅವರ ನೇತೃತ್ವದಲ್ಲಿ ಪೊಲೀಸರು ತಡೆದು ಬೀಗ ಜಡಿಯಲು ಅವಕಾಶ ನೀಡಲಿಲ್ಲ.

ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಹುದಿಕೇರಿ ಗ್ರಾ.ಪಂ.ಗೆ ಕಳೆದ 20 ತಿಂಗಳಿನಿಂದ 5 ಪಿ.ಡಿ.ಓ.ಗಳನ್ನು ನಿಯೋಜಿಸಿ ನಂತರ ವರ್ಗಾಯಿಸಲಾಗಿದೆ. ಸರಾಸರಿ 4 ತಿಂಗಳಿನಂತೆ ಪಿ.ಡಿ.ಓ.ಗಳನ್ನು ಬದಲಾಯಿಸಲಾಗುತ್ತಿದೆ. ಒಂದು ವಾರದ ಹಿಂದೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿ.ಡಿ.ಒ ಹರೀಶ್ ಅವರನ್ನು ಏಕಾಎಕಿ ವರ್ಗಾಯಿಸಲಾಗಿದೆ. ಇದರಿಂದ ಗ್ರಾ.ಪಂ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಜಿಲ್ಲೆಯ ಎಲ್ಲಾ ಗ್ರಾ.ಪಂ.ನಲ್ಲಿ 14ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ಆಗಿದ್ದು, ಪಿ.ಡಿ.ಒ.ಗಳ ವರ್ಗಾವಣೆ ಗಳಿಂದ ಹುದಿಕೇರಿ ಗ್ರಾ.ಪಂ.ನಲ್ಲಿ ಕ್ರಿಯಾಯೋಜನೆ ಇದುವರೆಗೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೀರಾಜಪೇಟೆ ತಾಲೂಕು ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಅವರಿಗೆ ಈ ದಿನದ ಪ್ರತಿಭಟನೆಯ ಬಗ್ಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಅವರು ಉದ್ದೇಶಪೂರ್ವಕವಾಗಿ ರಜೆ ಹಾಕಿ ಪ್ರತಿಭಟನಾಕಾರರನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದ ಅವರು, ಹುದಿಕೇರಿ ಗ್ರಾ.ಪಂ.ನ ಯಾವದೇ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಸ್ಪಂದಿಸುತ್ತಿಲ್ಲ. ಈ ಹಿಂದೆ ಪಂಚಾಯ್ತಿಯ ಸಿಬ್ಬಂದಿ ಬಗ್ಗೆ ದೂರು ನೀಡಿದ್ದರೂ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳದೆ ಆ ಸಿಬ್ಬಂದಿಯೊಂದಿಗೆ ಹೊಟೇಲ್ ಹಾಗೂ ನಾಗರ ಹೊಳೆಯಲ್ಲಿ ಪಾರ್ಟಿ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದೀಗ ವರ್ಗಾವಣೆಯಾದ ಪಿ.ಡಿ.ಓ. ಅವರನ್ನು ಹುದಿಕೇರಿ ಗ್ರಾ.ಪಂ.ಗೆ ಖಾಯಂ ಆಗಿ ನೇಮಿಸುವದಾಗಿ ಇ.ಒ ಅವರು ಭರವಸೆ ನೀಡಿದ್ದರು. ಆದರೆ 2 ತಿಂಗಳ ನಂತರ ಮತ್ತೆ ವರ್ಗಾವಣೆ ಮಾಡುತ್ತಿದ್ದಾರೆ. ಇ.ಒ ಅವರಿಗೆ ಕನ್ನಡ ಓದಲು ಹಾಗೂ ಬರೆಯಲು ಬರುತ್ತಿಲ್ಲ.

(ಮೊದಲ ಪುಟದಿಂದ) ಕೇವಲ ಮಾತನಾಡುತ್ತಾರೆ. ಆದ್ದರಿಂದ ಪಂಚಾಯ್ತಿಯ ಬಹಳಷ್ಟು ಕಡತಗಳು ವಿಲೇವಾರಿಯಾಗದೆ ಹಿನ್ನಡೆಯಾಗಿದೆ. ಇ.ಒ. ಅವರು ಕೇಸ್ ವರ್ಕರ್ ಮಾಡುವ ಕಡತಗಳಿಗೆ ಸಹಿ ಮಾಡುತಿ ್ತದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಗೆ ತಾ.ಪಂ. ಮ್ಯಾನೇಜರ್ ಇಂದಿರಾ ಅವರು ಆಗಮಿಸಿ ಖಾಯಂ .ಪಿ.ಡಿ.ಓ. ಅವರನ್ನು ನೇಮಿಸುವ ಬಗ್ಗೆ ಭರವಸೆ ನೀಡಿದ ರಾದರೂ ಇದಕ್ಕೆ ಒಪ್ಪದ ಪ್ರತಿಭಟನಾ ಕಾರರು ಮುಂದಿನ ಒಂದು ವಾರದ ಒಳಗೆ ಪಂಚಾಯಿತಿ ಕಚೇರಿಗೆ ಆಗಮಿಸುವ ದಿಲ್ಲ ಎಂದು ತೀರ್ಮಾನ ಕೈಗೊಂಡರು. ವಾರದೊಳಗೆ ಖಾಯಂ ಪಿ.ಡಿ.ಓ. ನೇಮಿಸಿದ್ದರೆ ಪೊನ್ನಂಪೇಟೆ ಯಲ್ಲಿರುವ ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯವರ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಈ ಸಂದÀರ್ಭ ರಾಜ್ಯ ಅರಣ್ಯ ಕೈಗಾರಿಕೆ ಅಬಿವೃದ್ಧಿ ನಿಗಮದ ನಿರ್ದೇಶಕ ವಾಸು ಕುಟ್ಟಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಸುನಿತಾ, ಸದಸ್ಯರುಗಳಾದ ಮೀದೇರಿರ ನವೀನ್, ಚಂಗುಲಂಡ ಸೂರಜ್, ಮತ್ರಂಡ ಸೋಮಣ್ಣ, ಎಂ. ಬಿಂದು, ಹೆಚ್.ಆರ್.ಗೊಂಬೆ, ಜೇನು ಕುರುಬರ ಗಂಗಮ್ಮ, ಗ್ರಾ.ಪಂ. ಮಾಜಿ ಸದಸ್ಯ ಸಾದಲಿ, ಅಜ್ಜಿಕುಟ್ಟೀರ ಗಿರೀಶ್ ಮತ್ತಿತರರು ಹಾಜರಿದ್ದರು.