ಗೋಣಿಕೊಪ್ಪಲು, ಫೆ. 9: ಆತ್ಮವಿಶ್ವಾಸ ಕೊರತೆಯಿಂದ ಯುವ ಸಮೂಹದಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಯುವ ಒಕ್ಕೂಟ ಮಾಜಿ ಜಿಲ್ಲಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಭಿಪ್ರಾಯಪಟ್ಟರು.

ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಇಲ್ಲಿನ ಲಯನ್ಸ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನಡೆದ ‘ಪರೀಕ್ಷೆ ಎದುರಿಸುವದು ಹೇಗೆ’ ಎಂಬ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ತರಬೇತುದಾರ ರಾಜೇಂದ್ರ ಭಟ್ ಮಾತನಾಡಿ, ಪರೀಕ್ಷೆಯಲ್ಲಿ ಅಂಕಗಳಿಸುವದು ವಿದ್ಯಾರ್ಥಿಗಳ ಹಕ್ಕಾಗಿದೆ. ಎಲ್ಲಾ ವಿದ್ಯಾರ್ಥಿಗಳು ಅಂಕಗಳಿಸಲು ಬೇಕಾದ ಪೂರ್ವ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಂಕದ ಮಹತ್ವವನ್ನು ಅರಿತು ಕೊಳ್ಳಬೇಕು ಎಂದರು.

ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ವಿಷಯಗಳಲ್ಲಿ ಹೆಚ್ಚು ಅಂಕಗಳಿಸಲು ಮಾಡಬೇಕಾದ ತಯಾರಿ ಬಗ್ಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್, ನಿಕಟಪೂರ್ವ ಅಧ್ಯಕ್ಷ ಪುಳ್ಳಂಗಡ ನಟೇಶ್, ಕಾರ್ಯಕ್ರಮ ಸಂಯೋಜಕ ಕೊಟ್ಟಂಗಡ ನಾಣಯ್ಯ, ಲಯನ್ಸ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಕ್ಕಮ್ಮ ಹಾಗೂ ಜೆಸೀ ಮಹಿಳಾ ಘಟಕದ ಅಧ್ಯಕ್ಷೆ ಮಂಡಚಂಡ ನೇತ್ರ ಚಿಟ್ಯಪ್ಪ ಉಪಸ್ಥಿತರಿದ್ದರು. ನರೇನ್ ಮೊಣ್ಣಪ್ಪ ಜೆಸೀ ವಾಣಿ ವಾಚಿಸಿದರು.