ಮಡಿಕೇರಿ, ಫೆ.10 :ಕೊಡಗು ಜಿಲ್ಲೆಗೆ ಸೀಮಿತವಾಗಿ ಮಡಿಕೆÉೀರಿ ನಗರದಲ್ಲಿ ಪ್ರವಾಸಿಗರನ್ನು ದೃಷ್ಟಿಯಲ್ಲಿರಿಸಿಕೊಂಡು ದ್ವಿಚಕ್ರವಾಹನವನ್ನು ಬಾಡಿಗೆಗೆ ಒದಗಿಸುವ ಯೋಜನೆಯನ್ನು ಖಾಸಗಿ ಸಂಸ್ಥೆಯೊಂದು ರೂಪಿಸಿದ್ದು, ಇದು ಆಟೋ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರ ಬದುಕಿಗೆ ಮಾರಕವಾಗಲಿದೆ ಎಂದು ಕಾವೇರಿ ಡ್ರೈವರ್ಸ್ ಅಸೋಸಿಯೇಷನ್ ಮತ್ತು ಆಟೋ ಮಾಲೀಕರ ಸಂಘ ಆತಂಕ ವ್ಯಕ್ತಪಡಿಸಿದೆ.

ಬಾಡಿಗೆಗೆ ಬೈಕ್‍ಗಳನ್ನು ನೀಡುವ ಯೋಜನೆಗೆ ಕೊಡಗು ಜಿಲ್ಲೆಯಲ್ಲಿ ಅವಕಾಶ ನೀಡಬಾರದೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಸಲ್ಲಿಸಿದ ಸಂಘÀಟನೆಗಳ ಪ್ರಮುಖರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

ಕಾವೇರಿ ಡ್ರೈವರ್ಸ್ ಅಸೋಸಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ಮಡಿಕೆÉೀರಿ ನಗರ ಬೆಟ್ಟಗುಡ್ಡಗಳಿಂದ ಕೂಡಿರುವ ಪುಟ್ಟ ಸುಂದರ ಪ್ರವಾಸಿ ತಾಣವಾಗಿದೆ. ಇಲ್ಲಿ ಸುಮಾರು 200ಕ್ಕೂ ಹೆಚ್ಚು ಟೂರಿಸ್ಟ್ ಕಾರುಗಳು, ಸಾವಿರಕ್ಕೂ ಅಧಿಕ ಆಟೋ ರಿಕ್ಷಾಗಳು, ನÀೂರಾರು ಜೀಪುಗಳು ಪ್ರವಾಸಿಗಳು ಹಾಗೂ ಸಾರ್ವಜನಿಕರ ಸೇವೆಯಲ್ಲಿ ತೊಡಗಿವೆ. ಈ ವಾಹನಗಳೆಲ್ಲವೂ ಪ್ರವಾಸಿಗರನ್ನೆ ಅವಲಂಬಿಸಿದ್ದು, ಮಾಲೀಕರು ಹಾಗೂ ಚಾಲಕರ ಬದುಕು ಪ್ರವಾಸಿ ಕ್ಷೇತ್ರವನ್ನೆ ನೆಚ್ಚಿಕೊಂಡಿದೆ. ಈಗಾಗಲೆ ಹಲವಾರು ಕಾರಣಗಳಿಂದ ಪ್ರವಾಸಿಗರು ವಿರಳ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವಾರದ ಕೊನೆಯ ದಿನಗಳಲ್ಲಿ ಮಾತ್ರ ಬಾಡಿಗೆ ಸಿಗುತ್ತಿದೆ. ಈ ನಡುವೆ ಹೊರನಾಡಿನ ಸಂಸ್ಥೆಯೊಂದು ಪ್ರವಾಸಿಗರಿಗೆ ಬಾಡಿಗೆ ಬೈಕ್ ನೀಡಲು ಮುಂದಾಗಿರುವದು ಆತಂಕವನ್ನು ಸೃಷ್ಟಿಸಿದೆ ಎಂದರು.

ಪ್ರವಾಸಿಗರು ಆಟೋ ರಿಕ್ಷಾ ಮತ್ತು ಟ್ಯಾಕ್ಸಿಯನ್ನು ಅವಲಂಬಿಸುವ ಬದಲು ಕಡಿಮೆ ದರವೆಂದು ಬೈಕ್‍ಗಳನ್ನು ಬಾಡಿಗೆಗೆ ಪಡೆಯುವ ಸಾಧ್ಯತೆಗಳಿದ್ದು, ಇದರಿಂದ ಜಿಲ್ಲೆÉಯ ಚಾಲಕರು ಅತಂತ್ರ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ ವಾಹನಗಳ ಖರೀದಿ ಸಾಲ ಪಾವತಿಸಲಾಗದೆ, ಪರದಾಡ ಬೆÉೀಕಾಗುತ್ತದೆ ಎಂದು ಸತ್ಯ ಅಭಿಪ್ರಾಯಪಟ್ಟರು. ಆಟೋ ಮತ್ತು ಟ್ಯಾಕ್ಸಿಗಳಿಂದ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ, ಬಾಡಿಗೆ ಬೈಕ್‍ಗಳಿಂದ ಬಂಡವಾಳಶಾಹಿ ಸಂಸ್ಥೆಗೆ ಮತ್ತು ಏಜೆಂಟರುಗಳಿಗೆ ಮಾತ್ರ ಆದಾಯ ಕ್ರೋಢೀಕರಣವಾಗುತ್ತದೆ ಎಂದು ಹೇಳಿದರು.

ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್.ಮೇದಪ್ಪ ಮಾತನಾಡಿ, ಕಪ್ಪು ಹಣವನ್ನು ಬಿಳಿ ಮಾಡುವದಕ್ಕಾಗಿ ಈ ರೀತಿಯ ಬಾಡಿಗೆ ಬೈಕ್‍ನ ಯೋಜನೆಯನ್ನು ರೂಪಿಸಲಾಗಿದೆ ಯೆಂದು ಆರೋಪಿಸಿದರು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆಗೆ ಯಾವದೇ ಮಾಹಿತಿ ಇಲ್ಲ. ತಾ. 12 ರಂದು ಬೈಕ್‍ಗಳ ವ್ಯವಹಾರಕ್ಕೆ ಚಾಲನೆ ನೀಡಲು ಮುಂದಾದರೆ, ಎಲ್ಲಾ ಚಾಲಕರು ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈಗಾಗಲೆ ನಗರದಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಬಾಡಿಗೆ ಇಲ್ಲದೆ ಆಟೋ ರಿಕ್ಷಾ ಖರೀದಿಗೆ ಮಾಡಲಾಗಿರುವ ಸಾಲವನ್ನು ತೀರಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೆ, ಮಲ್ಟಿ ನ್ಯಾಷನಲ್ ಕಂಪೆನಿಗಳ ಪ್ರವೇಶದಿಂದ ಜಿಲ್ಲೆಯ ಯುವಕರು ನಿರುದ್ಯೋಗಿಗಳಾಗುತ್ತಾರೆ ಎಂದು ಮೇದಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾವೇರಿ ಡ್ರೈವರ್ಸ್ ಅಸೊಸಿಯೇಷನ್ ನಗರಾಧ್ಯಕ್ಷ ಬಿ.ಕೆ. ಜೈಜಗದೀಶ್, ಕಾರ್ಯದರ್ಶಿ ಬಿ.ಜಿ. ಲೋಕೇಶ್, ಆಟೋ ಚಾಲಕರÀ ಸಂಘÀದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಪ್ರಸನ್ನ ಹಾಗೂ ನಗರಾಧ್ಯಕ್ಷ ಕೆ. ಎ. ಅರುಣ್ ಕುಮಾರ್ ಉಪಸ್ಥಿತರಿದ್ದರು.