ಮಡಿಕೇರಿ, ಫೆ. 10: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಂಯುಕ್ತವಾಗಿ ಆಯೋಜಿಸಿರುವ ಯೋಜನೆ “ಮಹಿಳೆ ಮತ್ತು ಮಕ್ಕಳ – ವರ್ತಮಾನದ ನೋಟ”. ಇದಕ್ಕಾಗಿ ರಾಷ್ಟ್ರಕವಿ ಕುವೆಂಪುರವರ ಮನೆ ಕುಪ್ಪಳ್ಳಿಯಲ್ಲಿ ನಾಟಕ ರಚನಾ ಕಮ್ಮಟವನ್ನು ಏರ್ಪಡಿಸಲಾಗಿತ್ತು. ನಾಡಿನ ಉದಯೋನ್ಮುಖ ನಾಟಕಕಾರರಿಂದ ನಾಟಕಗಳನ್ನು ರಚಿಸಿ, 16 ಹೊಸ ನಾಟಕಗಳನ್ನು ಕರ್ನಾಟಕದ ವಿವಿಧ ಜಿಲ್ಲೆಗಳ ನಿರ್ದೇಶಕರಿಂದ ನಾಟಕಗಳನ್ನು ಸಿದ್ಧಪಡಿಸಲಾಗಿದೆ.
ಕೊಡಗಿನ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರಿಂದ ಮೈಸೂರಿನ ರಂಗಾಯಣದ ಎಸ್.ರಾಮನಾಥ್ ರಚಿಸಿರುವ “ಅರುಂಧತಿ ಆಲಾಪ” ನಾಟಕವನ್ನು ರಂಗಭೂಮಿ ಪ್ರತಿಷ್ಠಾನ ಕೊಡಗು ತಂಡ ಸಿದ್ದಪಡಿಸಿದೆ. ಈ ನಾಟಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಹವ್ಯಾಸಿ ರಂಗಭೂಮಿ ನಾಟಕೋತ್ಸವದ ಉದ್ಘಾಟನಾ ದಿನ ತಾ. 13ರಂದು ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕøತಿ ಇಲಾಖೆ ಸಚಿª ಉಮಾಶ್ರಿ, ಕೇಂದ್ರ ಸಚಿವ ಅನಂತ್ಕುಮಾರ್, ಕವಿ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಭಾಗವಹಿಸಲಿದ್ದಾರೆ.
ಅರುಂಧತಿ ಆಲಾಪ ನಾಟಕದಲ್ಲಿ ರಂಗನಟಿ ಅನಿತಾ ಕಾರ್ಯಪ್ಪ ಅರವರೊಂದಿಗೆ ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿ ಕಲಾವಿದರು ನಟಿಸಿದ್ದಾರೆ. ನಾಟಕದ ರಂಗಸಜ್ಜಿಕೆ ಕಲಾವಿದ ಶಶಿಧರ್ ಅಡಪ, ಸಂಗೀತ ಕಿಶೋರ್ ಮೈಸೂರ್, ಬೆಳಕು ಜೀವನ್ ಹೆಗ್ಗೋಡು, ರಂಗ ನಿರ್ವಹಣೆ ರೇವತಿ ಪೂವಯ್ಯ, ರಂಗ ಶಿಬಿರಕ್ಕೆ ಪೂರ್ಣ ಸಹಕಾರವನ್ನು ಕಾಲೇಜಿನ ಪ್ರಾಂಶುಪಾಲ ಸಿ.ಎಂ. ನಾಚಪ್ಪ ನೀಡಿದ್ದರು.