ವೀರಾಜಪೇಟೆ, ಫೆ. 10: ವೀರಾಜಪೇಟೆಯ ಐತಿಹಾಸಿಕ ಎರಡು ಶತಮಾನಗಿಂತಲೂ ಪುರಾತನವಾದ ಸಂತ ಅನ್ನಮ್ಮ ದೇವಾಲಯದ 225ನೇ ವಾರ್ಷಿಕೋತ್ಸವ ತಾ. 11 ರಂದು (ಇಂದು) ಆಚರಿಸಲಾಗುವದು ಎಂದು ದೇವಾಲಯದ ಧರ್ಮಗುರು ಮದುಲೈಮುತ್ತು ತಿಳಿಸಿದ್ದಾರೆ.ವಾರ್ಷಿಕೋತ್ಸವ ತಾ. 8 ರಂದು ಧ್ವಜಾರೋಹಣ ಜಪಸರ ಹಾಗೂ ದಿವ್ಯ ಬಲಿಪೂಜೆಯೊಂದಿಗೆ ಆರಂಭಗೊಂಡಿದೆ. ತಾ. 11 ರಂದು 5 ಗಂಟೆಗೆ ಮೈಸೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಥೋಮಸ್ ಆಂಟೋನಿ ವಾಳಪಿಳ್ಳಿ ಅವರು ಅಂದಿನ ರಾಜ ಲಿಂಗರಾಜು ಅರಸು ಕೊಟ್ಟಂತಹ ದೀಪವನ್ನು ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸುವರು. ನಂತರ ಆಡಂಬರ ಸಹ ಗಾಯನ ಬಲಿಪೂಜೆ ನಡೆಯಲಿದೆ.

ಸಮಾರಂಭದ ನಂತರ ಸಂಜೆ 6.30 ಗಂಟೆಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪೂಜ್ಯ ಲೂರ್ದು ಮಾತೆಯ ವಿಗ್ರಹದ ವಿದ್ಯುತ್ ಅಲಂಕೃತ ಮಂಟಪ, ಮೈಸೂರು ಬ್ಯಾಂಡ್‍ನೊಂದಿಗೆ ಭಕ್ತಾದಿಗಳಿಂದ ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಯಲಿದೆ.

ಮೆರವಣಿಗೆ ಸಂತ ಅನ್ನಮ್ಮ ದೇವಾಲಯಕ್ಕೆ ಹಿಂತಿರುಗಿದ ನಂತರ ಪರಮ ಪ್ರಸಾದದ ಮಕ್ಕಳಿಗೆ ಆಶೀರ್ವಾದ ಹಾಗೂ ಭಕ್ತಾದಿಗಳಿಗೆ ಆಶೀರ್ವಚನ ನಡೆಯಲಿದೆ ಎಂದು ತಿಳಿಸಿದ್ದಾರೆ.