ಸುಂಟಿಕೊಪ್ಪ, ಫೆ. 10: ಲಯನೆಸ್ ಹಾಗೂ ಲಯನ್ಸ್ ಕ್ಲಬ್ ಸುಂಟಿಕೊಪ್ಪ, ಮಂಗಳೂರಿನ ಯಾನೆಪಾಯ ಸ್ಪೆಶಾಲಿಟಿ ಆಸ್ಪತ್ರೆ ಕೊಡಿಯಾಲ್‍ಬೈಲ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾ. 12 ರಂದು ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಇಕೋ, ಇಸಿಜಿ, ಜಿಆರ್‍ಬಿಲಸ್, ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಶ್ವಾಸಕೋಶದ ತಪಾಸಣೆಗೆ ಸಂಬಂಧಪಟ್ಟಂತೆ ವೈದ್ಯ, ಹೃದ್ರೋಗ ತಜ್ಞ ಡಾ. ರಾಹುಲ್ರಾಮಾನುಜಂ, ಡಾ. ಕೆ. ಶಕ್ತಿವೇಲು, ಶ್ವಾಸಕೋಶ ತಜ್ಞ ಡಾ. ಟಿ.ಹೆಚ್. ದೀಪಕ್ ಅವರುಗಳು ವಿಶೇಷ ಯಂತ್ರಗಳಿಂದ ತಪಾಸಣೆ ಸಲಹೆ ಸೂಚನೆ ನೀಡಲಿದ್ದಾರೆ. ಈ ಆರೋಗ್ಯದ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಲು ಕಂಬಿಬಾಣೆ ಮ್ಯಾಗಡೂರ್ ಶ್ರೀ ವಿಶ್ವನಾಥ ಕ್ಷೇತ್ರ ಟ್ಟಸ್ಟ್ ಹಾಗೂ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.