ಮಡಿಕೇರಿ, ಫೆ. 11: ಕರ್ನಾಟಕ ಜಾನಪದ ಪರಿಷತ್ತು, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ರಾಮನಗರದ ಜಾನಪದ ಲೋಕದಲ್ಲಿ ನಡೆದ ‘ಪ್ರವಾಸಿ ಮಹಿಳಾ ಜಾನಪದ ಲೋಕೋತ್ಸವ-2017’ರಲ್ಲಿ ಕೊಡಗಿನ ವೀರಾಜಪೇಟೆ ತಾಲೂಕಿನ ದೇವಣಗೇರಿಯಲ್ಲಿರುವ ಬಿ.ಸಿ. ಪ್ರೌಢಶಾಲೆಯ ಮಕ್ಕಳಿಂದ ಎರವಾಟ್ ಪ್ರದರ್ಶನ ನಡೆಯಿತು ಎಂದು ವೀರಾಜಪೇಟೆ ತಾಲೂಕು ಜಾನಪದ ಪರಿಷತ್‍ನ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ. ಎರವಾಟ್ ತಂಡದಲ್ಲಿ ಶಾಲಾ ಮಕ್ಕಳಾದ ಪಿ.ಆರ್. ಸಂಧ್ಯ, ಕೆ.ಎಸ್. ರುಕ್ಷಾನ, ಕೆ.ಎ. ತಸ್ಲೀಮ, ಟಿ.ಎಸ್. ದಿವ್ಯ, ಹೆಚ್.ಯು ಭವ್ಯ, ಜಿ.ಆರ್. ಕಾವ್ಯ, ವೈಸಿ. ಶಾಲಿನಿ, ಎಚ್.ಜಿ. ಮೇಘನ ನೃತ್ಯ ಮಾಡಿದರು. ಪಿ.ಎ. ಭವಾನಿ, ವೈ.ಸಿ. ಲಕ್ಷ್ಮಿ, ವೈಬಿ. ಸುನೀತ, ವಿಪಿ. ಸಚಿನ್ ಜಾನಪದ ಎರವ ಪಾಟ್ ಹಾಡಿದರು. ವೈ.ಎ. ಪವನ್, ಪಿ.ಎಸ್. ಸಫೀರ್ ದುಡಿ ಬಡಿದರು. ತಂಡವನ್ನು ಶಿಕ್ಷಕಿಯರಾದ ಎಸ್. ನಂದಿನಿ, ಎ.ಜಿ. ಸುವರ್ಣ ಮುನ್ನಡೆಸಿದ್ದರು. ಎನ್.ಆರ್. ಮಹೇಶ್ ಸಹಾಯಕರಾಗಿದ್ದರೆಂದು ಶಾಲಾ ಮುಖ್ಯೋಪಾಧ್ಯಾಯ ಹೆಚ್. ಲೋಕೇಶ್ ತಿಳಿಸಿದ್ದಾರೆ.