ಸುಂಟಿಕೊಪ್ಪ, ಫೆ. 11: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆದಕಲ್ ಹೊರೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳ ದುರಸ್ತಿ, ಹೊರೂರು ಕುಳ್ಳಪ್ಪ ರಸ್ತೆ ಕಾಮಗಾರಿಗಳಿಗೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಭೂಮಿಪೂಜೆ ನೆರವೇರಿಸಿದರು.

ಹೊರೂರು ಕುಳ್ಳಪ್ಪ ಮನೆಯ ಕಾಂಕ್ರೀಟ್ ರಸ್ತೆ ರೂ. 1 ಲಕ್ಷ ವೆಚ್ಚದಲ್ಲಿ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿದರು. ಹೊರೂರು, ಕೆದಕಲ್ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿಗೆ ಕುಡಿಯುವ ನೀರು ಹಾಗೂ ಅಂಗನವಾಡಿ ಶಾಲೆಯ ಕೊಠಡಿಗಳ ಮೇಲ್ಚಾವಣಿ ದುರಸ್ತಿ ರೂ. 1.50 ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ತಾಲೂಕು ಪಂಚಾಯಿತಿ ಅನುದಾನದಲ್ಲಿ ನಡೆಸಲಾಗುವದೆಂದು ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.

ಕೆದಕಲ್ ಹೊರೂರು ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಸ್ಥರಿಂದ ಬೇಡಿಕೆಯಿದ್ದು ತಾಲೂಕು ಪಂಚಾಯಿತಿಗೆ ಬರುವ ಅನುದಾನ ತೀರಾ ಕಡಿಮೆಯಿದ್ದು ಇದರಿಂದ ಬೇಡಿಕೆ ಅನುಸಾರ ಅಭಿವೃದ್ಧಿಗೊಳಿಸಲು ಕಷ್ಟಸಾಧ್ಯ ಎಂದರು. ಮುಂದಿನ ಜನರ ಬೇಡಿಕೆ ವಿವಿಧ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ಅನುದಾನಗಳನ್ನು ತಂದು ತನ್ನ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಸುವದಾಗಿ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭ ಪಂಚಾಯಿತಿ ಮಾಜಿ ಅಧ್ಯಕ್ಷ ಯು.ಎಂ. ಸೋಮಯ್ಯ, ಚೆಪ್ಪುಡಿರ ಸತೀಶ್, ಸಿ.ಜೆ. ಚಿಣ್ಣಪ್ಪ, ಗುತ್ತಿಗೆದಾರ ಅಂಬುದಾಸ್ ಗ್ರಾಮಸ್ಥರು ಅಂಗನವಾಡಿ ಶಿಕ್ಷಕಿಯರು ಶಾಲಾ ಶಿಕ್ಷಕಿಯರು ಇದ್ದರು.