ಶನಿವಾರಸಂತೆ, ಫೆ. 11: ಕರಾಟೆ ಒಂದು ರಕ್ಷಣಾತ್ಮಕ ಕಲೆಯಾಗಿದ್ದು, ಆರೋಗ್ಯದೊಂದಿಗೆ ಮಾನಸಿಕ ಸ್ಥಿರತೆಯನ್ನು ಮೂಡಿಸುತ್ತದೆ ಎಂದು ಯಶಸ್ವಿ ಕಲ್ಯಾಣ ಮಂಟಪ ಮಾಲೀಕ ಪುಟ್ಟೇಗೌಡ ಅಭಿಪ್ರಾಯಪಟ್ಟರು.
ಯಶಸ್ವಿ ಕಲ್ಯಾಣ ಮಂಟಪದಲ್ಲಿ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯಿಂದ ನಡೆದ ರಾಜ್ಯ ಮಟ್ಟದ ಅಂತರ ಶಾಲಾ ಕರಾಟೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾ.ಪಂ. ಸದಸ್ಯ ಎಸ್.ಎನ್. ಪಾಂಡು ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಉಮಾಶಂಕರ್ ವಹಿಸಿದ್ದರು. ಕಾಫಿ ಬೆಳೆಗಾರ ಆರ್.ಎಸ್. ಸಂಗಯ್ಯ, ಹಾರಂಗಿ ತೋಟಗಾರಿಕೆ ಸಹಾಯಕ ನಂಜ, ಶಿಕ್ಷಕಿ ಗೀತಾ ದುದ್ದಯ್ಯ, ಸಂಸ್ಥೆ ಅಧ್ಯಕ್ಷ ಎಂ. ಮಹದೇವಯ್ಯ, ವ್ಯವಸ್ಥಾಪಕ ಎನ್.ಎಸ್. ಅರುಣ್, ಕರಾಟೆ ಶಿಕ್ಷಕರಾದ ಪಳನಿ, ಸಂಪತ್, ನಂದ, ಮಹಾದೇವಯ್ಯ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯಾದ್ಯಂತ ವಿವಿಧೆಡೆಯಿಂದ 500 ಕರಾಟೆ ಪಟುಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.