ಗೋಣಿಕೊಪ್ಪಲು, ಫೆ. 12 : ಇಲ್ಲಿನ ಕಿರುಗೂರು ಗ್ರಾಮ ಪಂಚಾಯಿತಿಯ ಕಿರುಗೂರು ಕ್ಷೆತ್ರಕ್ಕೆ ಭಾನುವಾರ ಉಪ ಚುನಾವಣೆ ನಡೆಯಿತು. ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮತದಾನದಲ್ಲಿ ಮತದಾರರು ಬೆಳಗಿನಿಂದಲೇ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು.

ಕಿರುಗೂರು ಕ್ಷೇತ್ರದ ಬಿಜೆಪಿ ಬೆಂಬಲಿತ ಸದಸ್ಯ ಚೆಪ್ಪುಡೀರ ದಿನು ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದಲೇ ಮತ ಚಲಾಯಿಸಿದರು.ಒಟ್ಟು 1089 ಮತದಾರರಿದ್ದ ಮತ ಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಶೇ.60 ರಷ್ಟು ಮತದಾನ ನಡೆದಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೋದೇಂಗಡ ಶಂಭು ನಾಣಯ್ಯ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಲೆಮಾಡ ಸುಧೀರ್ ಕಣದಲ್ಲಿದ್ದಾರೆ.