ವೀರಾಜಪೇಟೆ, ಫೆ. 13: ರಾಜ್ಯ ಪ್ರಶಸ್ತಿ ಪಡೆದ ‘ತೆಳ್ಂಗ್ ನೀರ್’ ಕೊಡವ ಭಾಷೆಯ ಚಲನಚಿತ್ರವನ್ನು ತಾ. 23 ರಿಂದ 28ರ ವರೆಗೆ ವೀರಾಜಪೇಟೆಯ ಕೊಡವ ಸಮಾಜದಲ್ಲಿ ಪ್ರದರ್ಶಿಸಲಾಗುವದು ಎಂದು ಚಿತ್ರ ನಿರ್ದೇಶಕ ಗೋಪಿ ಪೀಣ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 30 ವರ್ಷಗಳಿಂದ ಜಿಲ್ಲೆಯ ನಂಟನ್ನು ಹೊಂದಿಕೊಂಡು ಇಲ್ಲಿನ ಪರಿಸರವನ್ನು ಆಸ್ವಾದಿಸಿ ಚಾರಣವನ್ನು ನಡೆಸುತ್ತಿದ್ದ ಸಂದÀರ್ಭ ಜಿಲ್ಲೆಯ ಬಗ್ಗೆ ಸಿನಿಮಾ ಮಾಡುವ ಆಲೋಚನೆ ನಡೆಸಿ ‘ತೆಳ್ಂಗ್ ನೀರ್’ ಎಂಬ ಚಿತ್ರವನ್ನು ನಿರ್ಮಾಣ ಮಾಡಲು ಸಹಕಾರಿಯಾಯಿತು. 2015ರಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡು ಅಮೇರಿಕಾ, ಲಂಡನ್ನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ನಾಮಕರಣಗೊಂಡಿದೆ. ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿಯೂ ನಾಮಕರಣ ಗೊಂಡಿತ್ತು. ಮಾ. 3ರಿಂದ ಗೋಣಿಕೊಪ್ಪಲಿನ ಸ್ವತಂತ್ರ ಭವನದಲ್ಲಿ ಪ್ರದರ್ಶಿಸಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ಸಹ ನಿರ್ದೇಶಕ ಚೆರುಮಂದಂಡ ಬೆಲ್ಲು ಬೆಳ್ಯಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಉಪಸ್ಥಿತರಿದ್ದರು.