ಗೋಣಿಕೊಪ್ಪಲು, ಫೆ. 12: ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಇತ್ತೀಚೆಗೆ ವಾರ್ಷಿಕ ಕ್ರೀಡಾದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಇದೇ ಸಂದರ್ಭ ಕ್ರೀಡೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಕ್ರೀಡಾಪಟು ಮುಲ್ಲೇರ ಪೊನ್ನಮ್ಮ ಮಾತನಾಡಿ ಯೋಗ ಮತ್ತು ಕ್ರೀಡೆ ಮನಸ್ಸು ಮತ್ತು ದೇಹವನ್ನು ಸದಾ ಉಲ್ಲಸಿತವಾಗಿರುವಂತೆ ಮಾಡುತ್ತದೆ. ಎಲ್ಲಾ ವಯಸ್ಸಿನವರೂ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕೆಂದರು. ಮಾಪಂಗಡ ಯಮುನ ಚಂಗಪ್ಪ ಮಾತನಾಡಿ ಕ್ರೀಡೆಯಲ್ಲಿರುವ ಮಕ್ಕಳು ಮುಂದಿನ ನಾಯಕರಾಗಿ ಹೊರಹೊಮ್ಮುವದರಲ್ಲಿ ಯಾವದೇ ಸಂದೇಹÀವಿಲ್ಲ. ಆದ್ದರಿಂದ ಕ್ರೀಡೆಯ ಜೊತೆಗೆ ಉತ್ತಮ ಚಾರಿತ್ರ್ಯವನ್ನು ಮೈಗೂಡಿಕೊಳ್ಳಬೇಕೆಂದರು.

ಪ್ರಾಂಶುಪಾಲ ಪಟ್ಟಡ ಪೂವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಕಾರ್ಯದÀರ್ಶಿ ಕೆ.ಜಿ. ಉತ್ತಪ್ಪ, ಅಶೋಕ್ ಚಂಗಪ್ಪ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಎಸ್. ಎಸ್. ಮಾದಯ್ಯ, ಎಂ.ಬಿ. ಕಾವೇರಪ್ಪ, ದೈಹಿಕ ನಿದೆರ್Éೀಶಕರಾದ ಡಾ. ದೇಚಮ್ಮ, ಎಂ.ಟಿ. ಸಂತೋಷ್, ಪಿ.ಸಿ. ಮೀನಾಕ್ಷಿ, ಸೌಮ್ಯ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಡಯಾನ, ಕಂಪನ, ವಚನ ಮೊಣ್ಣಪ್ಪ ನಿರೂಪಿಸಿದರು.