ವೀರಾಜಪೇಟೆ, ಫೆ. 13: ಫುಟ್ಬಾಲ್ ವಿಶ್ವದ ಇತರ ಪ್ರಮುಖ ಸಮ ಕಾಲೀನ ಕ್ರೀಡೆಗಳ ಸಾಲಿನಲ್ಲಿದ್ದು ಸಂಘಟನೆಗಳು ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸಿ ಪ್ರತಿಭಾವಂತ ಆಟಗಾರರಿಗೆ ಅವಕಾಶ ಕಲ್ಪಿಸಿದರೂ ಕ್ರೀಡಾ ಪ್ರಾಧಿಕಾರದ ಅಗತ್ಯ ಸೌಲಭ್ಯಗಳ ಕೊರತೆಯಿಂದ ಪಂದ್ಯಾಟದ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ವೀರಾಜಪೇಟೆ ಕೂರ್ಗ್ ಕೇಬಲ್ ಬಾಯ್ಸ್ ಸಂಸ್ಥೆಯಿಂದ ಪ್ರಥಮ ವರ್ಷದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದ ಸೆಮಿಫೈನಲ್ಸ್ನ್ನು ಉದ್ಘಾಟಿಸಿದ ಅವರು ಇಂದಿನ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿಯೂ ಸಂಘಟನೆಗಳು ಫುಟ್ಬಾಲ್ ಪಂದ್ಯಾಟ ಆಯೋಜಿಸಿರುವದು ಕ್ರೀಡಾಸಕ್ತರಿಗೆ ಉತ್ತೇಜನ ನೀಡಿದಂತಾಗಿದೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಎಚ್. ಮತೀನ್, ಉದ್ಯಮಿ ಸಿ.ಎ.ನಾಸರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎ.ಆರ್ ಅವಿನಾಶ್, ಪದಾಧಿಕಾರಿಗಳಾದ ಅಜಯ್, ಸಂತೋಷ್, ಹ್ಯಾರಿಸ್, ಶರ್ಪುದ್ದೀನ್ ಮತ್ತಿತರರು ಹಾಜರಿದ್ದರು.