ಮಡಿಕೇರಿ, ಫೆ. 13: ಆರ್.ಎಸ್.ಎಸ್. ಹಾಗೂ ಬಿಜೆಪಿಯ ಸಿದ್ಧಾಂತ ಒಂದೇ ತೆರನಾಗಿದ್ದು, ಹಿಂದೂ ಸಿದ್ಧಾಂತವಾಗಿದೆ. ಎಲ್ಲರೂ ಒಂದೇ ಭಾಷೆ ಮಾತನಾಡಬೇಕು. ಎಲ್ಲರೂ ಹಿಂದೂಗಳಾಗಿರಬೇಕು ಎಂಬದಾಗಿದೆ. ಒಂದು ರೀತಿಯಲ್ಲಿ ಅವರದ್ದು ಹಿಟ್ಲರ್ ಸಿದ್ಧಾಂತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದಿನೇಶ್ ಗುಂಡೂರಾವ್ ಹೇಳಿದರು.ಕೊಡಗು ಜಿಲ್ಲಾ ಕಾಂಗ್ರೆಸ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಗ್ರಾಮ ಸ್ವರಾಜ್ ಅಭಿಯಾನದ ಅಂಗವಾಗಿ ಇಲ್ಲಿನ ಕೊಡವ ಸಮಾಜದಲ್ಲಿ ಏರ್ಪಡಿಸಿದ್ದ ಪ್ರತಿನಿಧಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1885ರಲ್ಲಿ ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡಿದ್ದು, ನಂತರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಲೀಗ್, ಕಮ್ಯೂನಿಸ್ಟ್ ಹಾಗೂ ಜನಸಂಘ ಭಾಗಿಯಾಗಿಲ್ಲ. ಬದಲಿಗೆ ಜನಸಂಘ ದೇಶವನ್ನು ಒಡೆಯಲು ಮುಂದಾಗಿದ್ದ ಮುಸ್ಲಿಂ ಲೀಗ್‍ನೊಂದಿಗೆ ಸೇರಿಕೊಂಡು ಸರಕಾರ ರಚನೆ ಮಾಡಿತ್ತು. ಇದೀಗ ಆರ್.ಎಸ್.ಎಸ್. ಹಾಗೂ ಬಿಜೆಪಿ ದೇಶಪ್ರೇಮಿಗಳು ಎಂದು ಹೇಳಿಕೊಳ್ಳುತ್ತಿದ್ದು, ಇವರುಗಳಿಂದ ಸ್ವಾತಂತ್ರ್ಯ ಹೋರಾಟಕ್ಕೆ ದೇಶಕ್ಕೆ ಯಾವದೇ (ಮೊದಲ ಪುಟದಿಂದ) ಕೊಡುಗೆಯಿಲ್ಲವೆಂದು ಹೇಳಿದರು. ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಶ್ ಚಂದ್ರ ಬೋಸ್, ಭಗತ್‍ಸಿಂಗ್‍ರನ್ನು ಇವರುಗಳ ಆದರ್ಶರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇವರುಗಳಿಗೂ ಬಿಜೆಪಿಗೂ ಯಾವದೇ ಸಂಬಂಧವೇ ಇಲ್ಲ. ಅವರುಗಳಿಗೆ ಸ್ವಂತ ‘ಹೀರೋ'ಗಳೇ ಇಲ್ಲವೆಂದು ವ್ಯಂಗ್ಯವಾಡಿದರು. ವೀರ್ ಸಾರ್ವರ್ಕರ್ ಕೂಡ ಜೈಲಿನಲ್ಲಿದ್ದಾಗ ಬ್ರಿಟೀಷರಿಗೆ ಪತ್ರ ಬರೆದು ಇನ್ನು ಮುಂದಕ್ಕೆ ವಿರುದ್ಧವಾಗಿ ಹೋರಾಡುವದಿಲ್ಲವೆಂದು ‘ಅಫಿಡವಿಟ್' ಸಲ್ಲಿಸಿ ಜೈಲಿನಿಂದ ಹೊರಬಂದವರು. ನಂತರ ಯಾವದೇ ಹೋರಾಟ ಕೂಡ ಮಾಡಿಲ್ಲವೆಂದು ಟೀಕಿಸಿದರು.
ಕಾಂಗ್ರೆಸ್ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ (ಮೊದಲ ಪುಟದಿಂದ) ಕೊಡುಗೆಯಿಲ್ಲವೆಂದು ಹೇಳಿದರು. ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಶ್ ಚಂದ್ರ ಬೋಸ್, ಭಗತ್‍ಸಿಂಗ್‍ರನ್ನು ಇವರುಗಳ ಆದರ್ಶರೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇವರುಗಳಿಗೂ ಬಿಜೆಪಿಗೂ ಯಾವದೇ ಸಂಬಂಧವೇ ಇಲ್ಲ. ಅವರುಗಳಿಗೆ ಸ್ವಂತ ‘ಹೀರೋ'ಗಳೇ ಇಲ್ಲವೆಂದು ವ್ಯಂಗ್ಯವಾಡಿದರು. ವೀರ್ ಸಾರ್ವರ್ಕರ್ ಕೂಡ ಜೈಲಿನಲ್ಲಿದ್ದಾಗ ಬ್ರಿಟೀಷರಿಗೆ ಪತ್ರ ಬರೆದು ಇನ್ನು ಮುಂದಕ್ಕೆ ವಿರುದ್ಧವಾಗಿ ಹೋರಾಡುವದಿಲ್ಲವೆಂದು ‘ಅಫಿಡವಿಟ್' ಸಲ್ಲಿಸಿ ಜೈಲಿನಿಂದ ಹೊರಬಂದವರು. ನಂತರ ಯಾವದೇ ಹೋರಾಟ ಕೂಡ ಮಾಡಿಲ್ಲವೆಂದು ಟೀಕಿಸಿದರು.
ಕಾಂಗ್ರೆಸ್ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು. ಕಾಂಗ್ರೆಸ್‍ನ ಸಿದ್ಧಾಂತದ ಮೇಲೆ ನಂಬಿಕೆಯಿಟ್ಟು, ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಬೇಕು. ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗಲಿದ್ದು, ಎಲ್ಲಾ ಕಡೆಗಳಲ್ಲಿ ಪ್ರವಾಸ ಮಾಡಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ತಾವು ಕೂಡ ಪ್ರವಾಸದಲ್ಲಿ ಭಾಗಿಯಾಗುವದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್ ಅವರು, ಕಾರ್ಯಕರ್ತರಿಗೆ ಸವಾಲಿನ ದಿನಗಳಾಗಿದ್ದು, ಹದ್ದಿನ ಕಣ್ಣಿಟ್ಟು ಕಾರ್ಯತತ್ಪರವಾಗಬೇಕಿದೆ. ಕಾಂಗ್ರೆಸ್ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು ಗ್ರಾಮಮಟ್ಟದಲ್ಲಿ ಮಾಹಿತಿ ನೀಡುವ ಕಾರ್ಯವಾಗಬೇಕೆಂದು ಹೇಳಿದರು. ಇನ್ನು ಕೇವಲ 1 ವರ್ಷದ ಅವಧಿ ಮಾತ್ರ ಇದ್ದು, ನಂತರ ಚುನಾವಣೆ ಎದುರಿಸಬೇಕಿದೆ. ಈಗಲೇ ಸನ್ನದ್ಧರಾಗಬೇಕಿದ್ದು, ಪರಾಜಯ ಗೊಂಡ ಬಳಿಕ ಚಿಂತನೆ ಮಾಡುವದು ರಣಹೇಡಿ ರಾಜಕಾರಣವಾಗಲಿದೆ. ಈಗಲೇ ಚುನಾವಣಾ ರಣರಂಗಕ್ಕೆ ಇಳಿಯಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಜ್ಯ ಸಂಘಟಕ ಪಿ.ಎಂ. ಸಂದೀಪ್, ರಾಜ್ಯ ಉಸ್ತುವಾರಿ ವಿ.ನಾರಾಯಣ ಸ್ವಾಮಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹುಸೇನ್, ಅರಣ್ಯ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ವಕೀಲ ಚಂದ್ರಮೌಳಿ, ಜಿ.ಪಂ. ಸದಸ್ಯೆ ಚಂದ್ರಕಲಾ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಪಿ.ಕೆ. ಪೊನ್ನಪ್ಪ, ಐ.ಎನ್.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ, ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಬ್ಲಾಕ್ ಅಧ್ಯಕ್ಷರುಗಳಾದ ಕೆ.ಎಂ. ಲೋಕೇಶ್, ಬೇಕಲ್ ರಮಾನಾಥ್, ಅಬ್ದುಲ್ ಸಲಾಂ, ಧರ್ಮಜ ಉತ್ತಪ್ಪ ಇನ್ನಿತರರಿದ್ದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಸ್ವಾಗತಿಸಿದರೆ, ಸಂಪಾಜೆಯ ಸುರೇಶ್ ನಿರೂಪಿಸಿದರು.