*ಗೋಣಿಕೊಪ್ಪಲು, ಫೆ. 12: ಬೊಟ್ಟಿಯತ್ ನಾಡುವಿನ ಕುಂದ ಸಮೀಪದ ಶ್ರೀ ಈಶ್ವರ (ನಾಡು ದೇವಸ್ಥಾನ) ದೇವಸ್ಥಾನದಲ್ಲಿ ಇದೇ ತಾ. 14 ರಿಂದ 22ರ ವರೆಗೆ ವಾರ್ಷಿಕ ಉತ್ಸವ ನಡೆಯಲಿದೆ.
ವಾರ್ಷಿಕ ಹಬ್ಬದ ಬಗ್ಗೆ ಮಾಹಿತಿ ನೀಡಿದ ಆಡಳಿತ ಮಂಡಳಿ ಕಾರ್ಯದರ್ಶಿ ಸಣ್ಣುವಂಡ ದೇವಯ್ಯ, ನಾಡ ತಕ್ಕರಾದ ಅಡ್ಡಂಡ ಪ್ರಕಾಶ್ 14 ರಂದು ಸಂಜೆ 7 ಗಂಟೆಗೆ ದೇವಸ್ಥಾನದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದ್ದು ಒಂದು ವಾರಗಳ ಕಾಲ ನಡೆಯುವ ಉತ್ಸವದಲ್ಲಿ ಇರುಳು ಬೊಳಕ್ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ತಾ. 19 ರಿಂದ 21ರವರೆಗೆ ಹರಕೆ ಬೊಳಕ್ ಇದ್ದು ಮಾಡಿಸುವವರು ಕೊಡಿಮರ ನಿಲ್ಲಿಸುವ ಸಂದರ್ಭ ಹೆಸರು ನೊಂದಾಯಿಸಿಕೊಳ್ಳಬೇಕಿದೆ. ಒಂದು ವಾರಗಳ ಕಾಲ ಪ್ರತಿನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.
ತಾ. 22 ರಂದು ಕೊನೆಯ ದಿವಸದ ದೊಡ್ಡ ಹಬ್ಬ ನಡೆಯಲಿದ್ದು, ಬೆಳಗ್ಗಿನಿಂದಲೆ ನಡೆಯುವ ಉತ್ಸವ ರಾತ್ರಿ ಸುಮಾರು 10 ಗಂಟೆಗೆ ಮುಗಿಯಲಿದೆ. ಒಂದು ವಾರಗಳ ಕಾಲ ಗಣಪತಿ ಪೂಜೆ, ವಸಂತ ಪೂಜೆ, ರುದ್ರಾಭಿಶೇಕ, ಅಲಂಕಾರ ಪೂಜೆ, ರಂಗ ಪೂಜೆ, ದಂಪತಿ ಪೂಜೆ ಸೇರಿದಂತೆ ಪೂಜಾವಿಧಿ ವಿಧಾನಗಳು ನಡೆಯಲಿದ್ದು ಹೆಚ್ಚಿನ ಮಾಹಿತಿಗೆ 98453608910 ಅಥವ 9986639185 ಸಂಪರ್ಕಿಸಲು ಆಡಳಿತ ಮಂಡಳಿ ಕೋರಿದೆ.