ಮಾನ್ಯರೆ,
ಮಡಿಕೇರಿ ತಾಲೂಕು ಹೊದ್ದೂರು ಪಾಲೆಮಾಡುವಿನಲ್ಲಿ 300 ಕುಟುಂಬಗಳು ಕಳೆದ ಹತ್ತು ವರ್ಷದಿಂದ ಸರ್ಕಾರಿ ಪೈಸಾರಿ ಜಾಗದಲ್ಲಿ ವಾಸವಿರುತ್ತಾರೆ. ಸದ್ರಿ ನಿವಾಸಿಗಳು ಹಕ್ಕುಪತ್ರಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದು, ಈ ಹೋರಾಟದಲ್ಲಿ ಅಲ್ಲಿನ ದಲಿತ ನಾಯಕರುಗಳಾದ ಮೊಣ್ಣಪ್ಪ ಅವರ ನೇತೃತ್ವದಲ್ಲಿ ಜಾತಿ, ಮತ, ಧರ್ಮ, ಪಕ್ಷ ನೋಡದೇ ಎಲ್ಲರೂ ಒಗ್ಗಟ್ಟಾಗಿ ಹೋರಾಟದಲ್ಲಿ ಭಾಗಿಯಾಗುತ್ತಿದ್ದರು. 2013 ನಂತರ ಕಾಂಗ್ರೆಸ್ ಸರ್ಕಾರದ ಸ್ಪಂದನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಈಗ ಕರ್ನಾಟಕ ಸರ್ಕಾರದ ಕಾರ್ಯಕ್ರಮವಾದ 94ಸಿ ಯಲ್ಲಿ ಅರ್ಜಿ ಹಾಕಲು ಅವಕಾಶ ದೊರೆತಿರುತ್ತದೆ. ಆದರೆ 2007 ರಿಂದ ನಿರಂತರ ಈ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಲು ಇಲ್ಲಿನ ಸ್ಥಳೀಯರು, ಬಿಜೆಪಿ ನಾಯಕರುಗಳು, ಜನಪ್ರತಿನಿಧಿಗಳು ಇದೀಗ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಕಾಂಗ್ರೆಸ್‍ನ ಪ್ರಯತ್ನವನ್ನು ಬಿಜೆಪಿಯಿಂದ ಆಗುತ್ತಿದೆ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸುತ್ತಿದ್ದಾರೆ. ಈ ಮೊದಲು ನಾಯಕರು ಇಲ್ಲಿನ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದನ್ನು ಇಲ್ಲಿನ ಬಡ ನಿವಾಸಿಗಳು ಮರೆತಿರುವದಿಲ್ಲ.
ಈಗ ಅಲ್ಲಿನ ನಿವಾಸಿಗಳನ್ನು ಪರಸ್ಪರ ಗುಂಪುಗಾರಿಕೆಯ ಮೂಲಕ ಅಶಾಂತಿ ಮೂಡಿಸಿ ಒಡೆದು ಆಳುವ ನೀತಿಯನ್ನು ಕೆಲವರು ಮಾಡುತ್ತಿದ್ದಾರೆ. ಇಂತಹಾ ಕೆಲಸವನ್ನು ಬಿಟ್ಟು ನಾಯಕರಾದವರು ಜನಪರ ಕೆಲಸ ಮಾಡಿ ಹೆಸರು ಗಿಟ್ಟಿಸುವ ಕೆಲಸ ಮಾಡಲಿ ಎಂದು ಹೊದ್ದೂರು ಯವ ಕಾಂಗ್ರೆಸ್ ಫಟಕ ಆಗ್ರಹಿಸುತ್ತೇವೆ.
- ಪಿ.ಎ. ಮುಹಮ್ಮದ್ ಸಾಫಿ, ಕೊಟ್ಟಮುಡಿ ಸದಸ್ಯರು, ಗ್ರಾಮ ಪಂಚಾಯಿತಿ ಹೊದ್ದೂರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೆ.ಎ. ಸೌಕತ್, ಎಂ.ಎಂ. ಖಾಸಿಂ, ಕೆ.ಎ. ನೂರುದ್ದೀನ್, ಸಿ.ಹೆಚ್. ರೆಹಮಾನ್