ಕುಶಾಲನಗರ, ಫೆ. 12: ಕಾವೇರಿ ನದಿಯ ಪುನಶ್ಚೇತನಕ್ಕೆ ಆಯವ್ಯಯದಲ್ಲಿ ಅನುದಾನ ಮೀಸಲಿ ಡುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸಚಿವಾಲಯ ಜಲಸಂಪನ್ಮೂಲ ಇಲಾಖೆಗೆ ಕಾವೇರಿ ನದಿಯ ವಾಸ್ತವಾಂಶದ ಬಗ್ಗೆ ಮಾಹಿತಿ ಕೋರಿದೆ.ಕಾವೇರಿ ನದಿಯ ಉಗಮ ಸ್ಥಾನದಿಂದ ಕರ್ನಾಟಕ ರಾಜ್ಯದಲ್ಲಿ ಹರಿಯುವ ಒಟ್ಟು ನದಿಯ ಉದ್ದ, ಕಾವೇರಿ ನದಿ ಹರಿಯುವ ದಂಡೆಗಳಲ್ಲಿನ ಪಟ್ಟಣ, ನಗರಗಳ ಬಗ್ಗೆ ವಿವರ ನೀಡುವಂತೆ ಕೋರಿದೆ. ಈ ಗ್ರಾಮ, ಪಟ್ಟಣ, ನಗರಗಳಿಂದ ಕಲುಷಿತ ನೀರು ಕಾವೇರಿ ನದಿಗೆ ಹರಿಯದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಜಲಸಂಪನ್ಮೂಲ ಇಲಾಖೆಯಿಂದ ಮಾಹಿತಿ ಬಯಸಿದೆ.
ಕಾವೇರಿ ನದಿಯ ಪುನಶ್ಚೇತನ ಮಾಡಿ ನದಿ ಪಾತ್ರದಲ್ಲಿ ಉಂಟಾಗಿರುವ ತಟಗಳ ಒತ್ತುವರಿ ತೆರವು, ಈ ಪ್ರದೇಶಗಳಲ್ಲಿ ಗಿಡಗಳನ್ನು ನೆಡಲು ಸರಕಾರ ಕೈಗೊಂಡ ಕ್ರಮಗಳು ಮತ್ತು ಈ
(ಮೊದಲ ಪುಟದಿಂದ) ಯೋಜನೆಗೆ ಮೀಸಲಿಟ್ಟ ಅನುದಾನಗಳ ಬಗ್ಗೆ ವಿಧಾನ ಪರಿಷತ್ ಸಚಿವಾಲಯ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವಾಲಯದಿಂದ ವಿವರ ಬಯಸಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ತಿಳಿಸಿದ್ದಾರೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಕಾವೇರಿ ನದಿ ತಟದ ಜನಪ್ರತಿನಿಧಿಗಳಿಗೆ ನದಿ ಸಂರಕ್ಷಣೆಗೆ ಸರಕಾರದ ಯೋಜನೆ ರೂಪಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದು ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಇಲಾಖೆಯ ಸಚಿವರಿಗೆ ಪತ್ರ ಬರೆದಿರುವದನ್ನು ಇಲ್ಲಿ ಸ್ಮರಿಸಬಹುದು.