ಉಗ್ರರೊಂದಿಗೆ ಕಾಳಗ: ಮೂವರು ಯೋಧರು ಹುತಾತ್ಮ
ಕುಲ್ಗಾಮ್(ಜಮ್ಮು ಮತ್ತು ಕಾಶ್ಮೀರ), ಫೆ. 12: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಕಾರ್ಯಾಚರಣೆ ವೇಳೆ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಯರಿಪೆÇೀರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ನಾಲ್ವರು ಯೋಧರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಗುಂಡಿನ ಕಾಳಗದಲ್ಲಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗುಂಡಿನ ಕಾಳಗದ ವೇಳೆ ಇನ್ನು ಮೂವರು ಯೋಧರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಉಗ್ರರ ಪತ್ತೆಗೆ ಬಿಎಸ್ಎಫ್ ಯೋಧರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸೇನೆಗೆ ಸೇರಲು ಕನ್ನಡಿಗರಿಗೆ ಉಚಿತ ತರಬೇತಿ
ಬೆಂಗಳೂರು, ಫೆ. 12: ಭಾರತೀಯ ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಅಗತ್ಯ ತರಬೇತಿ ನೀಡುವ ಯೋಜನೆಯೊಂದು ಸಿದ್ಧಗೊಂಡಿದೆ. ಬೆಳಗಾವಿ ಮತ್ತು ಮಡಿಕೇರಿ ಸೈನಿಕ ತರಬೇತಿ ಸಂಸ್ಥೆ ಎರಡು ತಿಂಗಳ ಕಾಲ ಊಟ ಮತ್ತು ವಸತಿ ವ್ಯವಸ್ಥೆಯ ಸಹಿತ ದಿನಕ್ಕೆ 11 ಗಂಟೆ ಕಾಲ ತರಬೇತಿಗೊಳಿಸಿ ಕನ್ನಡಿಗರ ಯುವಕರನ್ನು ಸೇನೆಗೆ ಸಜ್ಜುಗೊಳಿಸುವದು ಇದರ ಉದ್ದೇಶ. ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಇಂತದ್ದೊಂದು ಯೋಜನೆ ರೂಪಿಸಿದ್ದು, ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 1 ಸಾವಿರ ಯುವಕರಿಗೆ ಮಾರ್ಚ್ನಿಂದ ತರಬೇತಿ ಪ್ರಾರಂಭವಾಗಲಿದೆ. ಭೂ ಸೇನೆ, ವಾಯುಸೇನೆ, ನೌಕಾದಳ, ಅರೆಸೇನಾಪಡೆಯಲ್ಲಿ ಸೇರಲು ಅಗತ್ಯವಾದ ತರಬೇತಿ ನೀಡುವದು ಈ ಯೋಜನೆಯ ಉದ್ದೇಶ. ದೇಶದ ಸೇನಾ ವ್ಯವಸ್ಥೆ, ಅಲ್ಲಿ ಕಾರ್ಯ ನಿರ್ವಹಿಸುವ ವಿಧಾನ ಎಲ್ಲವನ್ನೂ ಈ ತರಬೇತಿ ಸಂದರ್ಭದಲ್ಲಿ ಹೇಳಿಕೊಡಲಾಗುವದು. ಇದಕ್ಕೆ ಬೇಕಾದ ಅರ್ಹತೆ ಎಂದರೆ, ಅಭ್ಯರ್ಥಿಗಳು ಕನಿಷ್ಟ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. 18 ರಿಂದ 21 ವರ್ಷ ವಯಸ್ಸಿನವರಾಗಿರಬೇಕು. ಜತೆಗೆ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ ಕುರಿತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಐದೂವರೆ ನಿಮಿಷದಲ್ಲಿ 1 ಕಿ.ಮೀ. ಓಟ ಪೂರೈಸಬೇಕು. ಆಸಕ್ತರು ಜಿಲ್ಲಾ ಉದ್ಯೋಗ ತರಬೇತಿ ಕೇಂದ್ರದ ಮೂಲಕವೂ ತರಬೇತಿಗೆ ಅರ್ಜಿ ಸಲ್ಲಿಸಬಹುದು.
ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ
ರಾಮನಗರ, ಫೆ. 12: ಗಂಡನ ಅನಾರೋಗ್ಯದಿಂದ ಬೇಸತ್ತ ಪತ್ನಿ ತನ್ನ ಮಕ್ಕಳ ಜೊತೆ ಮನೆಯ ಎದುರಿನ ನೀರಿನ ಸಂಪ್ನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ. ರೇಖಾ (28), ಮಕ್ಕಳಾದ ನೂತನ್ (7) ಮತ್ತು ಮಾನ್ಯ (4) ಮೃತ ದುರ್ದೈವಿಗಳು. ಮೊದಲು ತಾಯಿ ರೇಖಾ ತನ್ನ ಮಕ್ಕಳನ್ನು ನೀರಿನ ಸಂಪ್ನಲ್ಲಿ ಮುಳುಗಿಸಿ ಕೊನೆಗೆ ತಾವು ನೀರಿನ ಸಂಪ್ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ನವೀನ್ ಅವರಿಗೆ ಲಿವರ್ ಜಾಂಡೀಸ್ ಇದ್ದು ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಲಾಗಿದ್ದರೂ ಗುಣಮುಖವಾಗಿರಲಿಲ್ಲ. ಹೀಗಾಗಿ ಮುಂದೆ ಪತಿ ಸಾಯಬಹುದು, ಅವರ ಅಗಲಿಕೆಯಿಂದ ಜೀವನ ಸಾಗಿಸುವದು ಕಷ್ಟ ಎಂದು ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಪೆÇಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಶ್ವ ದಾಖಲೆಯ ಮಂಗಳ ಯಾನ-2 ಗೆ ಭಾರತ ಸಿದ್ಧ
ಬೆಂಗಳೂರು, ಫೆ. 12: ಈಗಾಗಲೇ ಮಂಗಳ ಯಾನವನ್ನು ಯಶಸ್ವಿಗೊಳಿಸಿರುವ ಭಾರತ, ಮಂಗಳ ಯಾನ-2 ಹಾಗೂ ಶುಕ್ರ ಯಾನ ಕೈಗೊಳ್ಳುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಸಿದ್ಧತೆ ನಡೆಸಿದೆ.
ಭೂಮಿಯ ನಂತರ ಇರುವ ಎರಡು ಗ್ರಹಗಳಿಗೆ ಯಾನ ಕೈಗೊಳ್ಳುವ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ ಮಾಡುವ ಸಂದರ್ಭದಲ್ಲೇ ಹೊಸ ಯೋಜನೆ ಬಗ್ಗೆಯೂ ಸುಳಿವು ನೀಡಿದೆ. ಫೆಬ್ರವರಿ 15 ರಂದು ಏಕಕಾಲಕ್ಕೆ 104 ಉಪಗ್ರಹಗಳ ಉಡಾವಣೆ ಯಶಸ್ವಿಯಾದರೆ 2014 ರಲ್ಲಿ ಏಕಕಾಲಕ್ಕೆ 37 ಉಪಗ್ರಹವನ್ನು ಉಡಾವಣೆ ಮಾಡಿದ್ದ ರಷ್ಯಾದ ದಾಖಲೆಯನ್ನು ಭಾರತ ಸರಿಗಟ್ಟಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2017-18 ನೇ ಸಾಲಿನ ಬಜೆಟ್ನಲ್ಲಿ ಮಂಗಳ ಯಾನ-2, ಶುಕ್ರ ಯಾನದ ಬಗ್ಗೆ ಉಲ್ಲೇಖಿಸಲಾಗಿದೆ. ಮಂಗಳ ಯಾನ-2 2021-2022 ರ ವೇಳೆಗೆ ಉಡಾವಣೆಯಾಗುವ ನಿರೀಕ್ಷೆ ಇದೆ. 2013 ರಲ್ಲಿ ಮಂಗಳ ಯಾನ-1 ನ್ನು ಸಂಪೂರ್ಣ ದೇಶಿಯವಾಗಿ ಕೈಗೊಳ್ಳಲಾಗಿತ್ತು. ಆದರೆ ಮಂಗಳ ಯಾನ-2 ರಲ್ಲಿ ಫ್ರೆಂಚ್ ಸಹಯೋಗ ಸಹ ಇರಲಿದೆ.
ಪನ್ನೀರ್ ಸೆಲ್ವಂ ಬೆಂಬಲಿತ ಸಂಸದರ ಸಂಖ್ಯೆ ಏರಿಕೆ
ಚೆನ್ನೈ, ಫೆ. 12: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವಿಕೆ ಶಶಿಕಲಾಗೆ ಅಡ್ಡಿಯಾಗಿರುವ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಅವರಿಗೆ ದಿನದಿಂದ ದಿನಕ್ಕೆ ಪಕ್ಷದಲ್ಲಿ ಬೆಂಬಲ ಹೆಚ್ಚುತ್ತಿದೆ. ಅಜ್ಞಾತರಾಗಿರುವ ಶಾಸಕರ ಪೈಕಿ ಕೆಲವರು ಶಶಿಕಲಾ ಅವರಿಗೆ ಬೆಂಬಲ ಘೋಷಿಸಿದ್ದರೆ, ಸಂಸದರು ಮಾತ್ರ ಪನ್ನೀರ್ ಸೆಲ್ವಂ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಐವರು ಸಂಸದರು ಪನ್ನೀರ್ ಸೆಲ್ವಂ ಅವರನ್ನು ಸೇರಿಕೊಂಡಿದ್ದು, ಇದರೊಂದಿಗೆ ಸೆಲ್ವಂಗೆ ಬೆಂಬಲ ಘೋಷಿಸಿದ ಸಂಸದರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ವೆಲ್ಲೂರು ಸಂಸದ ಸೆಂಗುಟ್ಟುವನ್ ಟುಟಿಕಾರನ್ ಸಂಸದ ಜೆ. ಜೆಯಸಿಂಗ್ ಪನ್ನೀರ್ ಸೆಲ್ವಂಗೆ ಬೆಂಬಲ ಘೋಷಿಸಿದ್ದಾರೆ. ತಿರುವಣ್ಣಾ ಮಲೈ ಸಂಸದೆ ವನರೋಜಾ, ವೆಲ್ಲೋರ್ ಸಂಸದ ಸೆಂಗುಟ್ಟುವನ್ ಆರ್.ಪಿ. ಪೆರಂಬಲುರ್ ಸಂಸದ ಮಾರುತರಾಜ, ವಿಲ್ಲುರುರಂ ಸಂಸದ ರಾಜೇಂದ್ರನ್ ಅವರು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡಿದ್ದಾರೆ.
ರವಿಚಂದ್ರನ್ ಅಶ್ವಿನ್ರಿಂದ ವಿಶ್ವ ಶ್ರೇಷ್ಠ ಸಾಧನೆ
ಹೈದರಾಬಾದ್, ಫೆ. 12: ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 250 ವಿಕೆಟ್ ಪಡೆದು ವಿಶ್ವ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಹೈದರಾಬಾದ್ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್ ಮುಶ್ಪಿಕರ್ ರಹೀಮ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಆರ್. ಅಶ್ವಿನ್ ತಮ್ಮ 45ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡುವ ಮೂಲಕ ಆಸ್ಟ್ರೇಲಿಯಾದ ಮಾಜಿ ವೇಗಿ ಡೇನಿಸ್ ಲಿಲ್ಲೇ ಅವರ ವಿಶ್ವದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಡೇನಿಸ್ ಲಿಲ್ಲೇ 1981ರ ಫೆಬ್ರವರಿ 7 ರಂದು 48 ಟೆಸ್ಟ್ ಪಂದ್ಯಗಳಲ್ಲಿ 250 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದರು.
ಅಂಧರ ಟಿ 20 ಕ್ರಿಕೆಟ್: ಭಾರತಕ್ಕೆ ವಿಶ್ವ ಕಪ್
ಬೆಂಗಳೂರು, ಫೆ. 12: ಅಂಧರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದು ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ ಓವರ್ನಲ್ಲಿ 197 ರನ್ ಗಳಿಸಿತು. ಇದರೊಂದಿಗೆ ಭಾರತಕ್ಕೆ ಗೆಲ್ಲಲು 198 ರನ್ಗಳ ಬೃಹತ್ ಮೊತ್ತದ ಸವಾಲು ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ಪ್ರಕಾಶ್ ಭರ್ಜರಿ ಬ್ಯಾಟಿಂಗ್ನಿಂದಾಗಿ ಭಾರತ ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ.