ಮುಂಬೈ, ಫೆ, 13: ಸುಂದರ ಸಂಜೆ.. ಆಕರ್ಷಕ ವೇದಿಕೆ... ಒಂದಾಗಿ ಕಲೆತಿದ್ದ ಕೊಡವರು, ತುಳುವರು.., ಸ್ನೇಹಿತರು..., ಎಲ್ಲರಲ್ಲೂ ಏನೋ ಒಂದು ಉತ್ಸಾಹ ಆತ್ಮೀಯತೆ..., ಇಂತಹ ವಾತಾವರಣದಲ್ಲಿ ಮೇಳೈಸಿದ ಕೊಡವ ಜನಪದ ಕಲೆ-ಸಂಸ್ಕøತಿಯ ವೈಭವಕ್ಕೆ ನೆರೆದಿದ್ದ ಮಂದಿ ಬೆರಗಾದರು. ಕೊಡವ ಸಂಸ್ಕøತಿಯೊಂದಿಗೆ ತುಳು ನಾಡಿನ ಸಂಸ್ಕøತಿಯೂ ಸಮ್ಮಿಲನಗೊಂಡಿದ್ದು ಮತ್ತೊಂದು ವಿಶೇಷ ಕೊಡವ ಹಾಗೂ ತುಳು ಪ್ರಾದೇಶಿಕ ಭಾಷೆ. ಈ ಭಾಷೆಯನ್ನಾಡುವ ಜನರು ನೆರೆಹೊರೆಯ ಜಿಲ್ಲೆಯವರು.ಕರ್ನಾಟಕ ಪುಟ್ಟ ಜಿಲ್ಲೆಯಾದ ಕೊಡಗು ಹಾಗೂ ದಕ್ಷಿಣ ಕನ್ನಡ ಸಹೋದರ ಜಿಲ್ಲೆಗಳು ಈ ಎರಡು ಜಿಲ್ಲೆಗಳ ಜನರು ದೇಶದ ಮಹಾನಗರಿಗಳಲ್ಲಿ ಒಂದಾದ ಮುಂಬೈಯಲ್ಲಿ ಒಂದಾಗಿ ಬೆರೆತು ತಮ್ಮ ಸಂಸ್ಕøತಿ-ಭಾಷೆ , ಆಚಾರ-ವಿಚಾರಗಳ ಸಮ್ಮಿಲನದೊಂದಿಗೆ ಕಾರ್ಯಕ್ರಮವೊಂದು ಮುಂಬೈ ಮಹಾನಗರಿಯಲ್ಲಿ ಗಮನಸೆಳೆಯಿತು.

ಕೊಡವ ಜನಪದ ಕಲೆಗಳಾದ ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಉರ್ಟಿಕೊಟ್ಟ್ ಆಟ್‍ನ ಪ್ರದರ್ಶನ, ಕತ್ತಿಯಾಟ್‍ನ ರೋಮಾಂಚಕ ಕತೆಗೆ ತುಳು ನಾಡಿನ ಕಡಲ ಹರ್ಬ್ ಸೇರಿದಂತೆ ಮತ್ತಿತರ ಕೆಲವಾರು ಕಲಾ ಪ್ರದರ್ಶನದೊಂದಿಗೆ ತಾ.12ರ ಸಂಜೆ ಮುಂಬೈಯ ಮೀರಾ ಲಾನ್ ಪುನಮ್ ಸಾಗರ್ ಗಾರ್ಡನ್‍ನ ವ್ಯಾಪ್ತಿಯ ಜನರು ಭಾನುವಾರದ ಸಂಜೆಯನ್ನು ರಸಭರಿತರಾಗಿ ಕಳೆದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮುಂಬೈಯ ಮೀರಾಭಾಯಂದರ್ ತುಳುನಾಡ ಸೇವಾ ಸಂಘ ಹಾಗೂ ಮುಂಬೈ ಕೊಡವ ಸಮಾಜದ ಸಹಭಾಗಿತ್ವದಲ್ಲಿ ಮುಂಬೈಮೀರಾಲಾನ್ ಪುನಮ್ ಸಾಗರ್ ಗಾರ್ಡನ್‍ನಲ್ಲಿ ಆಯೋಜಿಸಲಾಗಿದ್ದ ಕೊಡವ ತುಳು ಸಾಂಸ್ಕøತಿಕ ಸಮ್ಮಿಲನ ಕಾರ್ಯಕ್ರಮ ಯಶಸ್ಸು ಕಂಡಿತು. ವಾಣಿಜ್ಯ ನಗರಿಯಲ್ಲಿ ಉದ್ಯೋಗ ನಿಮಿತ್ತ ನೆಲಸಿರುವ ಕೊಡಗು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಜನರು

(ಮೊದಲ ಪುಟದಿಂದ) ತಮ್ಮ ಸ್ನೇಹಿತರೊಂದಿಗೆ ಸಾಂಸ್ಕøತಿಕ ವೈಭವವನ್ನು ಕಣ್ತುಂಬಿಕೊಂಡರು.

ಅಪರಾಹ್ನ 4ರಿಂದ 8 ಭಾಷೆಗಳ ಬಹುಭಾಷಾ ಕವಿಗೋಷ್ಠಿ, ಕೊಡವÀ ಹಾಗೂ ತುಳುನಾಡಿನ ಸಂಸ್ಕøತಿ, ಆಚಾರ ವಿಚಾರಕ್ಕೆ ಸಂಬಂಧಿಸಿದ ವಿಚಾರಗೋಷ್ಠಿ ತಡರಾತ್ರಿ 11ರ ತನಕವೂ ಮುಂದುವÀರಿಯಿತು. ಸುಮಾರು ಸಾವಿರದ ಐನೂರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.

ಕಾಸರಗೋಡು ಜನಪದ ಪರಿಷತ್‍ನ ಅಧ್ಯಕ್ಷ ಕೇಶವ್ ಪ್ರಸಾದ್ ಅವರು ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರೊಂದಿಗೆ ದುಡಿ ಬಾರಿಸುವ ಮೂಲಕ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ವಿದ್ಯುತ್ ಅಲಂಕೃತ ವೇದಿಕೆಯಲ್ಲಿ ಕೊಡಗಿನ ಸುಳ್ಳಿಮಾಡ ಕುಟುಂಬ ತಂಡದಿಂದ ಉಮ್ಮತ್ತಾಟ್, ಮುಕ್ಕೋಡ್ಲು, ಕೋಟೆಬೆಟ್ಟ ಈಶ್ವರ ತಂಡದಿಂದ ಕತ್ತಿಯಾಟ್, ಬೆಂಗಳೂರಿನ ಫೀ.ಮಾ.ಕಾರ್ಯಪ್ಪ ಕೊಡವ ಒಕ್ಕೂಟದಿಂದ ಬೊಳ್‍ಕಾಟ್, ಕೋಲಾಟ್, ತೋರದ ಶಾರದ ಮತ್ತು ತಂಡದಿಂದ ಉರ್‍ಟಿಕೊಟ್ಟ್ ಆಟ್ ಪೊನ್ನಂಪೇಟೆಯ ನಿನಾದ ಸಂಸ್ಥೆಯಿಂದ ಶಿವತಾಂಡವ ನೈತ್ಯ, ಕಿರುಗೂರಿನ ರಿನಿ ಮತ್ತು ತಂಡದಿಂದ ಹಲವು ಕೊಡವ ನೃತ್ಯ, ವಾಲಗತ್ತಾಟ್, ಚೆಕ್ಕೇರ ಪಂಚಮ್ ತ್ಯಾಗರಾಜ್, ನೆಲ್ಲಮಕ್ಕಡ ಸಾಗರ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಅವರುಗಳಿಂದ ಕೊಡವ ಹಾಡುಗಾರಿಕೆ ನಡೆಯಿತು.

ಕೊಡವ ಹಾಡಿಗೆ ತುಳು ಭಾಷಿಕ ಮಹಿಳೆಯರು ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸುತ್ತಿದ್ದರೆ, ಕೊಡವ ಯುವತಿಯರೊಂದಿಗೆ ತುಳುಮಂದಿಯರು ಹೆಜ್ಜೆ ಹಾಕಿದರು.

ಕೊಡವ ಜನಪದ ಕಲೆಗೆ ತುಳು ನಾಡಿನ ವೈಭವ ಸಾರುವ ತುಳು ಮಹಿಳಾಸಮಾಜದಿಂದ ಕಡಲಪರ್ಟ, ತುಳು ಸೇವಾಸಂಘದಿಂದ ಭರತನಾಟ್ಯ, ದೀಪನೃತ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳು ‘ಸಾಥ್’ ನೀಡುವ ಮೂಲಕ ಜನತೆ ಸಂಸ್ಕøತಿಯ ಕಾರ್ಯಕ್ರಮದ ಸವಿಯನ್ನು ಅನುಭವಿಸಿದರು. ‘ಮಂಡೆಬೆಚ್ಚ” ತುಳು ನಾಟಕ ಪ್ರದರ್ಶನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಡಿತು.

-ಚಿತ್ರ: ಪುತ್ತೇರಿರ ಪಪ್ಪು ತಿಮ್ಮಯ್ಯ