ಮಡಿಕೇರಿ ಫೆ.12: ಜಿಲ್ಲೆಯಲ್ಲಿರುವ ತುಳು ಭಾಷಿಕರನ್ನು ಸಂಘಟಿಸಿ ತುಳು ಭಾಷೆ, ಸಂಸ್ಕøತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ತುಳುವೆರ ಜನಪದ ಕೂಟದ ವಲಯ ಮಟ್ಟದ ಘಟಕಗಳನ್ನು ರಚಿಸಲಾಗುವುದೆಂದು ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ತಿಳಿಸಿದ್ದಾರೆ.

ತುಳುವೆರ ಜನಪದ ಕೂಟದ ಮಡಿಕೇರಿ ತಾಲ್ಲೂಕಿನ ಹಾಕತ್ತೂರು ವಲಯ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತುಳು ಭಾಷಿಕರು ಗ್ರಾಮ ಮಟ್ಟದಿಂದಲೇ ಸಂಘಟಿತರಾಗ ಬೇಕೆಂದು ಕರೆ ನೀಡಿದರು. ಗ್ರಾಮೀಣ ತುಳು ಭಾಷಿಕರನ್ನು ಒಗ್ಗೂಡಿಸುವ ಉದ್ದೇಶದಿಂದ ಹೋಬಳಿ ಹಾಗೂ ಗ್ರಾಮ ಮಟ್ಟದ ಸಮಿತಿಗಳನ್ನು ರಚಿಸಲು ಕೂಟ ಕಾರ್ಯೋನ್ಮುಖವಾಗಿದೆ ಎಂದರು.

ಕೂಟದ ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣ ರೈ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ತುಳು ಭಾಷಿಕರು 2 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆ ಯಲ್ಲಿದ್ದು, ಸಂಘಟನೆಯನ್ನು ಬಲಪಡಿಸಲು ಗ್ರಾಮ ಮಟ್ಟದ ಸಮಿತಿಗಳ ಅಗತ್ಯವಿದೆ ಎಂದರು. ತುಳು ಭಾಷಿಕರು ಭಾಷೆ ಹಾಗೂ ಸಂಸ್ಕøತಿಯ ಮೇಲೆ ಅಭಿಮಾನ ತೋರುವದ ರೊಂದಿಗೆ ಕೂಟದ ಬಲವರ್ಧನೆಗೂ ಕೈ ಜೋಡಿಸಬೇಕೆಂದರು.

ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಲಹೆಗಾರರಾದ ಆನಂದರಘು, ಎನ್.ಡಿ.ನಾಣಯ್ಯ ಹಾಗೂ ಗೌರವ ಸಲಹೆಗಾರ ಐತ್ತಪ್ಪ ರೈ ಮಾತನಾಡಿದರು.

ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ರೈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಬಿ.ಎಸ್.ಅನುಸೂಯ, ಪುಷ್ಪ, ಕೂಟದ ಮಡಿಕೇರಿ ತಾಲೂಕು ಉಪಾಧ್ಯಕ್ಷ ಸುರೇಶ್ ಕುಲಾಲ್, ಖಜಾಂಚಿ ಅಶೋಕ್ ಆಚಾರ್ಯ ಹಾಗೂ ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ಆಚಾರ್ಯ ಉಪಸ್ಥಿತರಿದ್ದರು. ಕೂಟದ ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಯಪ್ಪ ನಿರೂಪಿಸಿ, ವಂದಿಸಿದರು.