ಮಡಿಕೇರಿ, ಫೆ. 12: ದಿಡ್ಡಳ್ಳಿ ಆದಿವಾಸಿಗಳ ಭೂಮಿ ಹಕ್ಕಿನ ಹೋರಾಟವನ್ನು ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯು ಕೈಗೆತ್ತಿಕೊಂಡಿದ್ದು ಸರಿಯಷ್ಟೇ. ಈ ಸಂಬಂಧ ಕೊಡಗಿಗೆ ತಾ. 13 ರಂದು (ಇಂದು) ತೆರಳಿ ಆದಿವಾಸಿಗಳಲ್ಲಿ ಧೈರ್ಯ ತುಂಬಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಅವರಿಗೆ ಚಳವಳಿಯ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ನಿವಾರಿಸಿ ಕೊಡಗಿನ ಶಾಸಕರಲ್ಲಿ ಮಾತನಾಡಿ ಅವರ ಮನಸ್ಸಿನಲ್ಲಿ ಇರುವ ಗೊಂದಲವನ್ನು ಬಗೆಹರಿಸಲು ಬಯಸಿದ್ದೆ. ಆದರೆ ಜಿಲ್ಲಾಧಿಕಾರಿಗಳು 144 ಸೆಕ್ಷನ್ ಜಾರಿ ಮಾಡುವ ತೀರ್ಮಾನ ವನ್ನು ತೆಗೆದುಕೊಂಡು ಬಿಗುವಿನ ವಾತಾವರಣವನ್ನು ಅನಗತ್ಯವಾಗಿ ಸೃಷ್ಟಿ ಮಾಡಿದ್ದಾರೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ, ಭೂಮಿ ಮತ್ತು ಹೊಸತಿ ಹಕ್ಕು ತಂಡದ ಹೋರಾಟ ಸಮಿತಿಯ ಮುಖಂಡ ರಾದ ದೊರೆಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸರಕಾರ ಹಾಗೂ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಸಂಬಂಧ ಅತ್ಯಂತ ಸೌಹಾರ್ದಯುತವಾಗಿದೆ ಎಂಬದನ್ನು ಕೊಡಗು ಜಿಲ್ಲಾಧಿಕಾರಿಗಳು ಅರಿಯಬೇಕು. ಭೂಮಿ ವಂಚಿತರಿಗೆ ಸರ್ಕಾರಿ ಜಮೀನನ್ನು ಮತ್ತು ವಸತಿಯನ್ನು ರಾಜ್ಯದಾದ್ಯಂತ ನೀಡಬೇಕೆಂಬ ಸಮಿತಿಯ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸಮ್ಮತಿಸಿ, ಸರ್ಕಾರಿ ಭೂಮಿಯ ಹಂಚಿಕೆಗಾಗಿ ಕಂದಾಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಒಪ್ಪಿಕೊಂಡಿದೆ.

ಸ್ವಾತಂತ್ರ್ಯ ಬಂದು 70 ವರ್ಷ ಗಳಾದರೂ ಬಡತನ ನಿವಾರಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವದ ರಲ್ಲಿ ಹಿಂದಿನ ಎಲ್ಲಾ ಸರ್ಕಾರಗಳೂ ಸೋತಿವೆ.

ವಿರೋಧ ಪಕ್ಷದ ನಾಯಕರೂ ಆದ ಬಿಜೆಪಿಯ ಶಾಸಕ ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನಿತರ ರಾಜಕೀಯ ಪಕ್ಷಗಳ ನಾಯಕರು ಬಡತನ ನಿವಾರಣೆಯ ಕೆಲಸದಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವ ದಾಗಿ ಭರವಸೆ ನೀಡಿದ್ದಾರೆ.

ವಸ್ತುಸ್ಥಿತಿ ಇದಾಗಿದ್ದರೂ, ಭೂ ರಹಿತರ ಮತ್ತು ವಸತಿ ಹೀನರ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಹೊರಟಿರುವ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯನ್ನು ನಕ್ಸಲೀಯರ

(ಮೊದಲ ಪುಟದಿಂದ) ಹೋರಾಟವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ತÀಮ್ಮದು ಶಾಂತಿಯುತ ಹೋರಾಟ ಎಂಬದನ್ನು ಸರ್ಕಾರ ಮನಗಂಡಿದೆ. ನಮ್ಮೊಂದಿಗೆ ಸೌಹಾರ್ದತೆಯಿಂದ ಸರ್ಕಾರ ಸ್ಪಂದಿಸುತ್ತಿದೆ. ಆದರೆ ಕೊಡಗು ಜಿಲ್ಲಾಧಿಕಾರಿಗಳು ಚಳವಳಿಯನ್ನು ವಕ್ರ ದೃಷ್ಟಿಯಿಂದ ನೋಡುತ್ತಿದ್ದಾರೆ.

ತಾನು ಕೊಡಗಿನಿಂದ ಹಿಂತಿರುಗಿದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆಂಜನೇಯ, ಸೀತಾರಾಂ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲಾಧಿಕಾರಿಗಳಿಗೆ ಕಡಿವಾಣ ಹಾಕುವಂತೆ ವಿನಂತಿಸಿಕೊಳ್ಳಲಾಗುವದು.

ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಸೆಕ್ಷನ್ ತೆರವುಗೊಳಿಸದಿದ್ದಲ್ಲಿ ಈ ನೀತಿಯನ್ನು ಪ್ರತಿಭಟಿಸಿ ತಾ. 144 ಸೆಕ್ಷನ್ ಮುರಿಯುವ ತೀರ್ಮಾನವನ್ನು ತೆಗೆದುಕೊಳ್ಳುವದು ಅನಿವಾರ್ಯವಾದೀತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.