ಮಾನ್ಯರೆ,

ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಳ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್. ದೂರವಾಣಿ ಸೌಲಭ್ಯ ಹದಗೆಟ್ಟು ಜನರಿಗೆ ಯಾವದೇ ಸಂಪರ್ಕವಿಲ್ಲದೆ ಮೂರು ವರ್ಷಗಳೇ ಕಳೆದು ಹೋಗಿದೆ. ಗ್ರಾಮಸ್ಥರು ಲ್ಯಾಂಡ್ ಫೋನನ್ನೇ ಅವಲಂಬಿತರಾಗಿದ್ದು ಸೌಲಭ್ಯ ವಂಚಿತರಾಗಿದ್ದಾರೆ.

ಮುಂದುವರೆಯುತ್ತಿರುವ ರಾಷ್ಟ್ರದಲ್ಲಿ ದೂರವಾಣಿ ಸೇವೆ ಎಂಬದು ಅತೀ ಅನಿವಾರ್ಯ ಸಂಪರ್ಕ ಸಾಧನೆ. ಒಂದು ಕಾಲದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಮಾಡಿ ಜನಮನ ಗೆದ್ದಿತ್ತು. ಈಗ ಮೊಬೈಲ್ ಫೋನ್‍ಗಳ ಬಳಕೆಯಿಂದಾಗಿ ಇಲಾಖಾಧಿಕರಿಗಳು ನಿರ್ಲಕ್ಷ್ಯತಾಳಿ ಇವತ್ತು ಲ್ಯಾಂಡ್ ಫೋನ್‍ಗಳು ಧೂಳು ಹಿಡಿದು ಮೂಲೆ ಸೇರುವಂತಾಗಿದೆ. ಕುಗ್ರಾಮಗಳಲ್ಲಿ ಸದ್ದು ಮಾಡದೇ ಸತ್ತೇ ಹೋಗಿದೆ.

ಈ ಗ್ರಾಮದಲ್ಲಿ ಮೊಬೈಲ್ ನೆಟ್‍ವರ್ಕ್ ಕೂಡಾ ಸಿಗದೇ ಇರುವ ಕಾರಣ ಲ್ಯಾಂಡ್ ಫೋನ್‍ಗಳ ದುರಸ್ತಿಗೆ ಹಲವು ಬಾರಿ ಮನವಿ, ಪ್ರತಿಭಟನೆ ಮಾಡಿದರೂ ಕೂಡಾ ಯಾವದೇ ಕ್ರಮ ಕೈಗೊಳ್ಳಲಿಲ್ಲ. ಯಾವದೇ ಪ್ರತಿಫಲಸಿಗಲಿಲ್ಲ.

ತದನಂತರ ಖಾಸಗಿ ಫೋನಾದ ಏರ್‍ಟೆಲ್ ಕೆಲವೊಂದು ಕಡೆಗಳಲ್ಲಿ ಹುಡುಕಾಡಿದಾಗ ಅರ್ಧಂಬರ್ಧ ಮಾತಾಡಲು ಆಗುತ್ತಿತ್ತು. ಆದರೆ ಇವತ್ತಿನ ದಿನ ನಮಗೆ ಫೋನಿನಲ್ಲಿ ಯಾರನ್ನೂ ಕೂಡಾ ಸಂಪರ್ಕ ಮಾಡಲು ಸಾಧ್ಯವಿಲ್ಲದಂತಾಗಿದೆ. ಜನರನ್ನು ಸಂಪರ್ಕಿಸಲು ಪಕ್ಕದ ಗ್ರಾಮವಾದ 7 ಕಿ.ಮೀ. ದೂರದಲ್ಲಿರುವ ಕೊಯನಾಡುವಿಗೆ ಹೋಗಬೇಕಾಗುತ್ತದೆ. ಇಲ್ಲಿಯ ಗ್ರಾಮಸ್ಥರು ಫೋನಿಗಾಗಿ ಪರದಾಡುವಂತಾಗಿದೆ.

ಸಂಬಂಧಪಟ್ಟ ಇಲಾಖಾಧಿಕಾರಿಗಳು ಕೂಡಲೇ ಕರಮ ಕೈಗೊಳ್ಳದಿದ್ದರೆ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾದೀತು.

- ಯಮುನಾ ಗಿರೀಶ್, ಗ್ರಾ.ಪಂ. ಸದಸ್ಯರು, ಸಂಪಾಜೆ.