ಮುಂಬೈ, ಫೆ. 13: ಸಾಂಸ್ಕøತಿಕ ಕಾರ್ಯಕ್ರಮಗಳು ಮನರಂಜನೆ ಮಾತ್ರವಲ್ಲದೆ ಸಂಸ್ಕøತಿಯ ಅನಾವರಣದೊಂದಿಗೆ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಂಪಿಯನ್ ಮುಂಬೈಯಲ್ಲಿರುವ ಭಾರತ್ ಪೆಟ್ರೋಲಿಯಂನ ನಿರ್ದೇಶಕ ಮನೆಯಪಂಡ ಎಂ. ಸೋಮಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮುಂಬೈಯ ತುಳುನಾಡ ಸೇವಾ ಸಂಘ ಹಾಗೂ ಮುಂಬೈ ಕೊಡವ ಸಮಾಜದ ಸಹಭಾಗಿತ್ವದಲ್ಲಿ ಮುಂಬೈಯ ಮೀರಾಲಾನ್ ಪುನಮ್ ಸಾಗರ್ ಗಾರ್ಡ್‍ನಲ್ಲಿ ನಡೆದ ಕೊಡವ-ತುಳು ಸಾಂಸ್ಕøತಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವ ಅಕಾಡೆಮಿಯ ಈಗಿನ ಆಡಳಿತ ಮಂಡಳಿ ಬಿದ್ದಾಟಂಡ ಎಸ್. ತಮ್ಮಯ್ಯ ನೇತೃತ್ವದಲ್ಲಿ ಈತನಕ ಕೊಡಗು ಮಾತ್ರವಲ್ಲದೆ ದೇಶದ ವಿವಿಧೆಡೆ ಸೇರಿ 88ಕ್ಕೂ ಅಧಿಕ ಕಾರ್ಯಕ್ರಮ ಆಯೋಜಿಸಿರುವದು ಶ್ಲಾಘನೀಯ. ಮುಂಬೈಯಲ್ಲಿರುವ ಕೊಡವರು, ತುಳು ನಾಡಿನವರನ್ನು ಒಂದೆಡೆ ಸೇರಿಸಿ ದೂರದ ಕೊಡಗಿನಿಂದ ಬಂದು ಕಾರ್ಯಕ್ರಮ ಆಯೋಜಿಸಿರುವದು ಇಲ್ಲಿನವರನ್ನು ಬೆಸೆಯುವಂತೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೊಡವರು ಸಂಸ್ಕøತಿಯೊಂದಿಗೆ ಹಾಕಿಯನ್ನು ಸಂಸ್ಕøತಿಯಂತೆ ಪರಿಗಣಿಸಿದ್ದಾರೆ. ಹಲವಾರುಮಂದಿ ದೇಶವನ್ನು ಪ್ರತಿನಿಧಿಸಿದ್ದಾರೆ ಎಂದ ಅವರು, ಕೌಟುಂಬಿಕ ಹಾಕಿ ಉತ್ಸವವನ್ನು ಮುಂಬೈ ಜನತೆಗೆ ತಿಳಿಸಿ ಈ ಬಾರಿಯ ಬಿದ್ದಾಟಂಡ ಕಪ್‍ನಲ್ಲಿ 300 ತಂಡಗಳ ನಿರೀಕ್ಷೆಯನ್ನು ಹೊಂದಿರುವದಾಗಿ ಹೇಳಿದಾಗ, ನೆರೆದಿದ್ದವರು ಚಪ್ಪಾಳೆಯೊಂದಿಗೆ ಹರ್ಷ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ನೆಟ್‍ವಕ್ರ್ಸ್ ಅಂಡ್ ಕಾಂಟೆಂಟ್ ಡಿಸ್ಟ್ರಿಬ್ಯುಷನ್‍ನ ಸೀನಿಯರ್ ಡೈರೆಕ್ಟರ್ ಚೇರಂಡ ಕಿಶನ್ ಅವರು ಕೊಡವ ಹಾಗೂ ತುಳು ಸಮುದಾಯ ಸಣ್ಣದಾದರೂ ಸಾಧನೆ ಹಲವಷ್ಟಿದೆ. ಸಂಸ್ಕøತಿಯಲ್ಲು ಈ ಜನಾಂಗಗಳು ಮುಂದಿವೆ ಎಂದರು.

ಮುಂಬೈಯ ಉದ್ಯಮಿ ಎಸ್.ಎ. ಗ್ರೂಪ್ ಆಫ್ ಹೊಟೇಲ್ಸ್‍ನ ಅರವಿಂದ ಶೆಟ್ಟಿ ಮಾತನಾಡಿ, ಕೊಡವ ಹಾಗೂ ತುಳು ಸಂಸ್ಕøತಿಯ ಸಮ್ಮಿಲನ ಮುಂಬೈಯಲ್ಲಿ ಇದೇ ಪ್ರಥಮ ಬಾರಿಗೆ ನಡೆದಿದೆ. ಸೇನೆ, ಕ್ರೀಡೆ ಸೇರಿದಂತೆ ಕೊಡಗು ದೇಶಕ್ಕೆ ಎಲ್ಲಾ ರಂಗದಲ್ಲೂ ಕೊಡುಗೆ ನೀಡಿದೆ. ಕೊಡವ ಸಂಸ್ಕøತಿಯೂ ಅದ್ಭುತವಾದದ್ದು ಎಂದರು.

ಮತ್ತೋರ್ವ ಅತಿಥಿ ಉದ್ಯಮಿ ಸಂತೋಷ್ ಪುತ್ರಂಜಿ ಸೇನೆ ಹಾಗೂ ಕ್ರೀಡಾ ಪರಂಪರೆ ಮೂಲಕ ಕೊಡಗು ವಿಶೇಷವಾಗಿ ಗುರುತಿಸಲ್ಪಟ್ಟಿದ್ದು, ಕರ್ನಾಟಕದಲ್ಲಿ ಕೊಡಗು ಎಲ್ಲಿದೆ ಎಂದು ನೋಡುವ ತವಕ ಉಂಟಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕಲ್ಕೂರ್ ಅವರು ಈ ಕಾರ್ಯಕ್ರಮ ಕರಿಮಣಿಯ ಸರದಲ್ಲಿ ಮುತ್ತನ್ನು ಪೋಣಿಸಿದಂತಾಗಿದೆ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಅಕಾಡೆಮಿಯ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಈಗಿನ ಮಕ್ಕಳಲ್ಲಿ ಸಂಸ್ಕøತಿಯ ಬಗ್ಗೆ ಆಸಕ್ತಿ ಇದೆ. ಆದರೆ ಪೋಷಕರು ಪ್ರೋತ್ಸಾಹ ನೀಡಲು ಹಿಂಜರಿಯುತ್ತಿರುವದಾಗಿ ವಿಷಾದಿಸಿದರು.

ಈ ಸಂದರ್ಭ ಬಿ.ಎಸ್. ತಮ್ಮಯ್ಯ ಹಾಗೂ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದ ಅಕಾಡೆಮಿ ಸದಸ್ಯ ಮಾದೇಟಿರ ಬೆಳ್ಯಪ್ಪ ಅವರನ್ನು ತುಳುನಾಡ ಸೇವಾ ಸಂಘದಿಂದ ಸನ್ಮಾನಿಸಲಾಯಿತು. ಸಭಾಕಾರ್ಯಕ್ರಮದ ಇನ್ನಿತರ ಅತಿಥಿಗಳಾಗಿ ರಿಲಾಯನ್ಸ್ ಇಂಡೆಸ್ಟ್ರಿಯಲ್ ಲಿಮಿಟೆಡ್‍ನ ಮಾನವ ಸಂಪನ್ಮೂಲ ಅಧಿಕಾರಿ ಕುಪ್ಪಂಡ ಮುದ್ದಯ್ಯ, ಭಾರತೀಯ ನೌಕಾ ಪಡೆಯ ಲೆಫ್ಟಿನೆಂಟ್ ಕಮಾಂಡರ್ ಕುಪ್ಪಂಡ ಜಿ. ಮುತ್ತಣ್ಣ, ಮುಂಬೈಯ ಉದ್ಯಮಿ ಬಿದ್ದಂಡ ಜಗದೀಪ್ ನಂಜಪ್ಪ, ಮುಂಬೈ ಕೂರ್ಗ್ ಅಸೋಸಿಯೇಷನ್‍ನ ಅಧ್ಯಕ್ಷ ಕಳ್ಳಿಚಂಡ ಬಿ. ಅಯ್ಯಣ್ಣ, ಸೀನಿಯರ್ ಸ್ಪೋಟ್ರ್ಸ್ ಆಫೀಸರ್ ಐ.ಐ.ಟಿ. ಮುಂಬೈಯ ಬೊಪ್ಪಂಡ ಅಪ್ಪಾಜಿ, ತುಳು ಕನ್ನಡ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಬೋಲರವಿ ಪೂಜಾರಿ, ವಿಶ್ವಕನ್ನಡ ಸಮ್ಮೇಳನದ ಸಮನ್ವಯಾಧಿಕಾರಿ ಎಸ್.ಐ. ಬಾವಿಕಟ್ಟಿ, ತುಳು ನಾಡ ಸೇವಾ ಸಮಾಜದ ಅಧ್ಯಕ್ಷ ಗೋಪಾಲಕೃಷ್ಣ ಜಿ. ಗಣಿಗ, ಸಂಚಾಲಕ ಡಾ. ರವಿರಾಜ್ ಸುವರ್ಣ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಚೇಂದಿರ ನಿರ್ಮಲಾ ಬೋಪಣ್ಣ ತಂಡದಿಂದ ನಾಡಗೀತೆ ಮೂಡಿಬಂತು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾದೇಟಿರ ಬೆಳ್ಯಪ್ಪ ನಿರೂಪಿಸಿದರು.

ಕೊಡವ ಅಕಾಡೆಮಿಯ ಸದಸ್ಯರುಗಳಾದ ಕುಡಿಯರ ಬೋಪಯ್ಯ, ಅಣ್ಣೀರ ಹರೀಶ್ ಮಾದಪ್ಪ, ಮದ್ರೀರ ಸಂಜು ಬೆಳ್ಯಪ್ಪ, ಕಾಳಚಂಡ ಕಾರ್ಯಪ್ಪ ಅವರುಗಳು ಹಾಜರಿದ್ದರು. ಕೊಡಗಿನಿಂದ ಒಟ್ಟು ನೂರು ಕಲಾವಿದರು ಭಾಗವಹಿಸಿದ್ದರು.

ಸನ್ಮಾನ: ಕಾರ್ಯಕ್ರಮವನ್ನು ಮುಂಬೈಯಲ್ಲಿ ಆಯೋಜಿಸಲು ಅಕಾಡೆಮಿಯೊಂದಿಗೆ ಸಹಕರಿಸಿದ ಕಾಸರಗೋಡು ಜನಪದ ಪರಿಷತ್ ಘಟಕದ ಕಾರ್ಯದರ್ಶಿ ಅಬ್ದುಲ್ ರೆಹಮಾನ್ (ಸುಬ್ಬಯ್ಯಕಟ್ಟೆ) ಅವರನ್ನು ಅಕಾಡೆಮಿ ಪರವಾಗಿ ಸನ್ಮಾನಿಸಲಾಯಿತು.