ಸುಂಟಿಕೊಪ್ಪ, ಫೆ. 13 : ಕೆಲಸದ ಒತ್ತಡ ಶಾರೀರಿಕ ವ್ಯಾಯಮದ ಕೊರತೆ, ಬದುಕಿನ ಜಂಜಾಟದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡುವ ಮೂಲಕ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಬೇಕೆಂದು ಮಂಗಳೂರು ಕೊಡಿಯಾಲ್‍ಬೈಲ್‍ನ ಯೇನೆಪೋಯ ಸ್ಪೆಶಾಲಿಟಿ ಆಸ್ಪತ್ರೆಯ ಹೃದಯರೋಗ ತಜ್ಞರಾದ ಡಾ.ರಾಹುಲ್ ರಾಮನುಜಂ ಹೇಳಿದರು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನೆಸ್ ಹಾಗೂ ಲಯನ್ಸ್ ಕ್ಲಬ್ ಸುಂಟಿಕೊಪ್ಪ, ಯೇನೆಪೋಯ ಸ್ಪೆಶಾಲಿಟಿ ಆಸ್ಪತ್ರೆ ಕೊಡಿಯಲ್ ಬೈಲು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಆರೋಗ್ಯ ಇದ್ದರೆ ಮಾತ್ರ ಮಾನವನು ನೆಮ್ಮೆದಿ ಜೀವನ ಸಾಗಿಸಬಹುದು ಈ ನಿಟ್ಟಿನಲ್ಲಿ ಎಲ್ಲಾರೂ ಆರೋಗ್ಯ ತಪಸಾಣೆ ಮಾಡಿಸಿಕೊಳ್ಳ ಬೇಕೆಂದರು.

ಇನ್ನೋರ್ವ ವೈದ್ಯಾಧಿಕಾರಿ ಶ್ವಾಸಕೋಶ ತಜ್ಞರಾದ ಕಂಬಿಬಾಣೆ ನಿವಾಸಿ ಡಾ. ಟಿ.ಹೆಚ್. ದೀಪಕ್ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮಾನವರು ಧೂಮಪಾನ ಹಾಗೂ ಗುಟ್ಕಾ ಹಾಗೂ ಮಾದಕ ವಸ್ತುಗಳನ್ನು ಸೇವಿಸುವ ಮೂಲಕ ತಮ್ಮ ಆರೋಗ್ಯಕ್ಕೆ ತಾವೇ ಮುಳುವಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೆ. ಕೊಡಗಿನಲ್ಲಿ ಕಾರ್ಮಿಕ ವರ್ಗದ ಜನತೆಯೇ ನಲೆಸಿದ್ದು ತೋಟಗಳ ಮಾಲೀಕರು ಹಾಗೂ ಪ್ರಜ್ಞಾವಂತರು ಈ ದುಶ್ಚಟಗಳಿಂದ ಆಗುವ ಪರಿಣಾಮಗಳ ಮಾಹಿತಿ ನೀಡುವ ಆದರಿಂದ ಅವರನ್ನು ಮುಕ್ತಗೊಳಿಸಲು ಪ್ರಯತ್ನಿಸುವಂತಾಗ ಬೇಕೆಂದರು. ಕಂಬಿಬಾಣೆ ಮ್ಯಾಗಡೂರ್ ಶ್ರೀ ವಿಶ್ವನಾಥ್ ದೇವಾಲಯ ಟ್ರಸ್ಟ್‍ನ ಅಧ್ಯಕ್ಷರು, ಕಾರ್ಯಕ್ರಮದ ಪ್ರಾಯೋಜಕರಾದ ಅನಿಲ್ ಶಿಬಿರವನ್ನು ಉದ್ಘಾಟಿಸಿದರು.

ಲಯನ್ಸ್ ಕ್ಲಬ್‍ನ ಹಿರಿಯ ಸದಸ್ಯ ಎಂ.ಎ.ವಸಂತ ಮಾತನಾಡಿ ಲಯನ್ಸ್ ಕ್ಲಬ್ ಕಳೆದ 40 ವರ್ಷಗಳಿಂದ ವಿವಿಧ ಆಸ್ಪತ್ರೆಗಳ ವೈಧ್ಯರ ಸಹಕಾರದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದ್ದು ಇದರ ಪ್ರಯೋಜನವನ್ನು ಹೆಚ್ಚಿನ ಮಂದಿ ಪಡೆದುಕೊಳ್ಳಬೇಕು ಇಸಿಜಿ ಜಿಆರ್‍ಬಿಎಸ್ ರಕ್ತದ ಒತ್ತಡ ಸಕ್ಕರೆ ಖಾಯಿಲೆ ಶ್ವಾಸಕೋಶದ ತೊಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಬೇಕೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಶಾಶ್ವತ್ ಬೋಪಣ್ಣ ವಹಿಸಿದ್ದರು.

ವೇದಿಕೆಯಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಪ್ರಾಣೇಶ್, ಡಾ.ಶೃತಿ, ಕಾರ್ಯದರ್ಶಿ ಗ್ಲೆನ್ ಮೇನೇಜೆಸ್, ಖಜಾಂಜಿ ದರ್ಶನ್, ಮಾಜಿ ಲಯನ್ಸ್ ಅಧ್ಯಕ್ಷ ಎಂ.ಕೆ.ಪೆಮ್ಮಯ್ಯ, ಕೆ.ಡಿ.ರಾಮಯ್ಯ, ಕೆ.ಪಿ.ಜಗನ್ನಥ್, ಟಿ.ಕೆ.ರಾಜೀವ್, ಉಪಸ್ಥಿತರಿದ್ದರು. ಈ ಶಿಬಿರದಲ್ಲಿ 100ಕ್ಕೂ ಮಿಕ್ಕಿ ಸಾರ್ವಜನಿಕರು ಪ್ರಯೋಜನ ಪಡೆದುಕೊಂಡರು.